of your HTML document.

Water Problem: ನಿರೀಲ್ಲ, ಇನ್ಮುಂದೆ ಗಂಡ-ಹೆಂಡತಿ ಒಟ್ಟಿಗೆ ಸ್ನಾನ ಮಾಡಿ !! ಪಾಲಿಕೆ ಆದೇಶ

Water Problem : ಬೇಸಿಗೆಯ ಝಳ ತಡೆಯಲಾಗುತ್ತಿಲ್ಲ. ಒಂದೆಡೆ ಬಿಸಿಲಿನಿಂದ ಜನರು ತತ್ತರಿಸಿ ಹೋಗುತ್ತಿದ್ದರೆ ಮತ್ತೊಂದೆಡೆ ಮಹಾನಗರಗಳಲ್ಲಿ ನೀರಿನ ಆಹಾಕಾರ ಶುರುವಾಗಿದೆ. ದಿನನಿತ್ಯದ ಕಾರ್ಯಗಳಿಗೆ ಬಿಡಿ, ಕುಡಿಯಲು ಸಮೇತ ನೀರಿಲ್ಲದಂತಹ ಪರಿಸ್ಥಿತಿಯಲ್ಲಿ ನಗರಗಳು ಒದ್ದಾಡುವಂತಾಗಿದೆ. ಈ ನೀರಿನ ಸಮಸ್ಯೆಯಿಂದ(Water Problem) ಕಂಗೆಟ್ಟಿರುವ ನಮ್ಮ ದೇಶದ ನಗರಗಳು ಮಾತ್ರವಲ್ಲ, ವಿದೇಶಗಳೂ ಕೂಡ ಪರಿತಪಿಸುತ್ತಿವೆ. ಅಂತೆಯೇ ಇದೀಗ ಕೊಲಂಬಿಯಾ(Kolambiya) ದೇಶದ ಮಹಾನಗರ ಪಾಲಿಕೆಯೊಂದ ನೀರನ್ನು ಉಳಿತಾಯ ಮಾಡಲು ಇನ್ಮುಂದೆ ಗಂಡ-ಹೆಂಡತಿಯರಿಬ್ಬರೂ ಒಟ್ಟಿಗೆ ಸ್ನಾನ ಮಾಡಿ ಎಂದು ಆದೇಶ ಹೊರಡಿಸಿದೆ.

ಇದನ್ನೂ ಓದಿ: Quick Cocroach Removal: ಜಿರಳೆಗಳನ್ನು ಕೊಲ್ಲುವ ಅತ್ಯುತ್ತಮ ಮನೆಮದ್ದು ಇಲ್ಲಿದೆ ನೋಡಿ

ಹೌದು, ನಮ್ಮ ಬೆಂಗಳೂರು(Bengaluru) ಮಾತ್ರವಲ್ಲ, ದೇಶದ ಮಹಾನಗರಗಳು ಮಾತ್ರವಲ್ಲ, ಕೊಲಂಬಿಯಾ ದೇಶದ ರಾಜಧಾನಿ ಬಗೋಟಾ ಕೂಡ ನೀರಿನ ಸಂಕಷ್ಟದಲ್ಲಿದೆ. ಜನರಿಗೆ ಸೂಕ್ತಕಾಲದಲ್ಲಿ ನೀರು ಪೂರೈಕೆ ಮಾಡಲು ಕೂಡ ಅಲ್ಲಿನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲಿಯೇ ಬೊಗೋಟಾ ಮೇಯರ್‌ ಕಾರ್ಲೋಸ್ ಫೆರ್ನಾಂಡೊ ಗ್ಯಾಲನ್ ನಗರದ ಜನರಿಗೆ ವಿಚಿತ್ರ ಸಲಹೆಗಳನ್ನು ನೀಡಿದ್ದು ನೀರು ಉಳಿತಾಯ ಮಾಡಲು ನಗರದಲ್ಲಿ ವಾಸವಾಗಿರುವ ದಂಪತಿಗಳು ಇನ್ಮುಂದೆ ಒಟ್ಟಿಗೆ ಸ್ನಾನ ಮಾಡಬೇಕು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Shani God: ಈ ರಾಶಿಯವರಿಗೆ ಇನ್ನು ಮುಂದೆ ಫುಲ್ ಅದೃಷ್ಟವಂತರು! ಶನಿಯಿಂದ ಉತ್ತಮ ವರ ಸಿಗಲಿದೆ

ಇಷ್ಟು ಮಾತ್ರವಲ್ಲದೆ ಭಾನುವಾರ ಹಾಗೂ ಮನೆಯಿಂದ ಹೊರಗೆ ಹೋಗುವ ಅಗತ್ಯವಿಲ್ಲದ ದಿನದಂದು ಸ್ನಾನವನ್ನೇ ಮಾಡಬೇಡಿ ಎಂದು ಹೇಳಿದ್ದಾರೆ. ಬೊಗೋಟಾದಲ್ಲಿ ನೀರು ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರ ದೊಡ್ಡ ಮಟ್ಟದಲ್ಲಿ ಕ್ರಮ ಕೈಗೊಂಡಿದೆ. ನಗರದ ಅಂತರ್ಜಲ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿದಿದ್ದು, ನೀರು ಪೋಲಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಅಂದಹಾಗೆ ಕೊಲಂಬಿಯಾ ದೇಶದಲ್ಲಿ ಬೇಸಿಗೆ ಎಷ್ಟು ಭೀಕರವಾಗಿದೆ ಎಂದರೆ, ಜಲಾಶಯಗಳ ನೀರು ಸಂಪೂರ್ಣವಾಗಿ ಬರಿದಾಗಿದೆ. ನಗರಕ್ಕೆ ಅಗತ್ಯವಿರುವ ಶೇ. 70ರಷ್ಟು ನೀರನ್ನು ಮೂರು ಜಲಾಶಯಗಳು ಪೂರೈಕೆ ಮಾಡುತ್ತಿದೆ.

Leave A Reply

Your email address will not be published.