Mangaluru: ಮಂಗಳೂರಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ – ಇಲ್ಲಿದೆ ಕಾರ್ಯಕ್ರಮದ ವಿವರ !!

Mangaluru: ಕರ್ನಾಟಕ ಕುರುಕ್ಷೇತ್ರದ ಅಖಾಡಕ್ಕೆ ಪ್ರಧಾನಿ ಮೋದಿ (PM Narendra Modi ) ಧುಮುಕಲಿದ್ದು, ಮೈಸೂರು ಬಳಿಕ ಬಿಜೆಪಿ ಭದ್ರಕೋಟೆ ಮಂಗಳೂರಿನಲ್ಲಿ (Mangaluru) ಭರ್ಜರಿ ರೋಡ್‌ಶೋ (Road Show) ನಡೆಸಲಿದ್ದಾರೆ.

 

ಇದನ್ನೂ ಓದಿ: Shrinvas Prasad: ಮೋದಿ ಆಗಮನದ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಸಂಸದ ಶ್ರೀನಿವಾಸ್ ಪ್ರಸಾದ್!!

ಮೋದಿ ಆಗಮನದ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿದ್ದು, ಮೈಸೂರು(Mysore) , ಮಂಗಳೂರು ಕೇಸರಿಮಯವಾಗಿದೆ. ಸಂಜೆ 4 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ಸಂಜೆ 4:30 – ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ನಂತರ ಸುತ್ತ-ಮುತ್ತಲ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ಮತದಾರರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ಇದನ್ನೂ ಓದಿ: Rishabh Pant: ರಿಷಬ್ ಪಂತ್‌ ಗೆ ಭಾರೀ ದಂಡ ವಿಧಿಸಬೇಕು : ದಿಗ್ಗಜ ಕ್ರಿಕೆಟಿಗನ ಆಗ್ರಹ

ಮಂಗಳೂರಲ್ಲಿ ಮೋದಿ ರೋಡ್ ಶೋ ಪ್ಲಾನ್:

• ಸಂಜೆ 7:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ.

• 7:45ಕ್ಕೆ ನಾರಾಯಣ ಗುರು ಸರ್ಕಲ್ ಗೆ ಮೋದಿ ಭೇಟಿ ನೀಡಲಿದ್ದಾರೆ.

• ನಾರಾಯಣಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರೋಡ್‌ ಶೋ ಆರಂಭವಾಗಲಿದೆ

• 1.5 ಕಿ.ಮೀ ದೂರದಲ್ಲಿರುವ ನವಭಾರತ ವೃತ್ತದಲ್ಲಿ ರೋಡ್‌ ಶೋ ಕೊನೆಯಾಗಲಿದೆ.

• ರಾತ್ರಿ 8.30 ರೊಳಗೆ ಪ್ರಧಾನಿಯವರ ರೋಡ್ ಶೋ ಮುಕ್ತಾಯವಾಗುವ ಸಾಧ್ಯತೆ ಇದ್ದು ಮಂಗಳೂರಿನ ನಾರಾಯಣ ಗುರು ಸರ್ಕಲ್ ನಿಂದ ಲಾಲ್ಬಾಗ್, ಬಳ್ಳಾಲ್ ಬಾಗ್, ಗೋವಿಂದ ಪೈ ಸರ್ಕಲ್(ನವ ಭಾರತ್ ಸರ್ಕಲ್)ವರೆಗೆ ರೋಡ್ ಶೋ ನಡೆಯಲಿದೆ.

• ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಆರು ಕಡೆ ಮಿನಿ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆಯಲ್ಲಿ ಹುಲಿ ಕುಣಿತ, ಭರತನಾಟ್ಯ, ಕಂಬಳ, ದೈವಾರಾಧನೆಗಳ ಪ್ರಾತ್ಯಕ್ಷಿಕೆ ಇರಲಿದೆ.

• ಅಭ್ಯರ್ಥಿಗಳಾದ ಬ್ರಿಜೇಶ್ ಚೌಟ, ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಮುಂತಾದ ಗಣ್ಯರು ಮೋದಿಗೆ ಸಾಥ್ ನೀಡಲಿದ್ದಾರೆ.

• ರೋಡ್ ಶೋಗೆ ಭಾರೀ ಬಿಗಿಭದ್ರತೆ ಏರ್ಪಡಿಸಲಾಗಿದೆ. 1,500 ಮಂದಿ ಪೊಲೀಸರು, ಎಸ್ ಜಿಪಿ ತಂಡದ ಭದ್ರತೆಯನ್ನು ನೀಡಲಾಗಿದೆ.

Leave A Reply

Your email address will not be published.