Fish Meal: ಮೀನು ತಿಂದು ವೀಡಿಯೋ ಶೇರ್ ಮಾಡಿದ ತೇಜಸ್ವಿ-ಬಿಜೆಪಿಯಿಂದ ತೀವ್ರ ಟೀಕೆ

Fish Meal: ಚೈತ್ರ ನವರಾತ್ರಿ ಸಮಯದಲ್ಲಿ ಮೀನು ಸೇವಿಸಿದ್ದಕ್ಕಾಗಿ ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಪ್ರಸಾದ್ ಅವರು ಟೀಕೆಗೆ ಗುರಿಯಾಗಿದ್ದಾರೆ.
ಎ.9 ರಂದು ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದ ತೇಜಸ್ವಿ ಅವರು ಮೀನು ತಿಂದಿದ್ದು, ಈ ಕುರಿತು ಜಾಲತಾಣಗಳಲ್ಲಿ ತೀವ್ರ ಟ್ರೋಲ್‌ಗಳಾಗಿದೆ. ಆಹಾರ ಸೇವನೆ ಮಾಡಿರುವ ವೀಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಚುನಾವಣೆ ಪ್ರಚಾರವಿರುವ ಕಾರಣ ತಾಔು ಕಾಪ್ಟರ್‌ನಲ್ಲಿಯೇ ಆಹಾರ ಸೇವಿಸಿದ್ದಾಗಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Jaipur: ಮದುವೆಯ ಹಣ ಉಳಿಸಲು ತನ್ನ 17 ಮೊಮಕ್ಕಳಿಗೂ ಒಂದೇ ಬಾರಿ ಮದುವೆ ಮಾಡಿದ ಅಜ್ಜ
ಬಿಹಾರ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಇದನ್ನು ಖಂಡಿಸಿದ್ದು, ಶ್ರಾವಣ ಮಾಸದಲ್ಲಿ ಮಟನ್ ಸೇವನೆ, ನವರಾತ್ರಿಯಲ್ಲಿ ಮೀನು ಸೇವನೆ ಮಾಡುವುದು ಸನಾತನ ಧರ್ಮದ ಪದ್ಧತಿಗೆ ವಿರುದ್ಧ, ತೇಜಸ್ವಿ ಸೀಸನಬಲ್ ಸನಾತನಿ! ಎಂದು ಟೀಕೆ ಮಾಡಿದ್ದಾರೆ.