Belthangady: ಹೆರಿಗೆ ವೇಳೆ ವಿಪರೀತ ರಕ್ತಸ್ರಾವ- ಮಹಿಳೆ ಸಾವು, ವೈದ್ಯರ ನಿರ್ಲಕ್ಷ್ಯವೇ ಕಾರಣ-ಕುಟುಂಬಸ್ಥರಿಂದ ಗಂಭೀರ ಆರೋಪ

Belthangady: ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆಯೊಂದು ಬೆಳ್ತಂಗಡಿ ಬದ್ಯಾರ್‌ ನಲ್ಲಿ ನಡೆದಿದೆ. ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿಯಾದ ಗಾಯತ್ರಿ (26) ಎಂಬ ಮಹಿಳೆ ಎ.3 ರಂದು ತಮ್ಮ ಎರಡನೇ ಹೆರಿಗೆಗಾಗಿ ದಾಖಲಾಗಿದ್ದರು. ಎ.4 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ: NCERT : ಈ ಶೈಕ್ಷಣಿಕ ವರ್ಷದಿಂದ ಹಿಂದುತ್ವ ವಿಷಯಗಳಿಗೆ ಗೇಟ್‌ಪಾಸ್‌

ಆದರೆ ಹೆರಿಗೆ ನಂತರ ವಿಪರೀತ ರಕ್ತಸ್ರಾವ ಉಂಟಾದ ಕಾರಣ ರಾತ್ರಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಕುಟುಂಬಸ್ಥರು ಕೋಪಗೊಂಡಿದ್ದು, ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: New Delhi: ಇನ್ನು ಮುಂದೆ ಭಾರತ ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಕೊಲ್ಲಲಿದೆ : ಉಗ್ರರ ವಿರುದ್ಧ ಸಮರ ಸಾರಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಅದಲ್ಲದೇ 10000ರೂ. ಕಟ್ಟಿದ್ದು, ಮುಂಗಡ ಹಣವನ್ನೂ ಹಿಂತಿರುಗಿಸುತ್ತೇವೆ ಎಂದು ವೈದ್ಯರು ತಿಳಿಸಿದ್ದು, ಇದು ವೈದ್ಯರ ನಿರ್ಲಕ್ಷ್ಯ ಅಲ್ಲದಿದ್ದರೆ ಆಸ್ಪತ್ರೆಯವರಿಗೆ ಹಿಂಜರಿಕೆ ಏಕೆ ಎಂಬ ಪ್ರಶ್ನೆ ಮಾಡಿದ್ದಾರೆ ಕುಟುಂಬಸ್ಥರು.

ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. 3 ವರ್ಷದ ಹೆಣ್ಣು ಮಗುವೊಂದು ಮೃತ ಮಹಿಳೆಗೆ ಇದ್ದಿದ್ದು, ಇದೀಗ ಈ ಪುಟ್ಟ ಹಸುಗೂಸು ಸೇರಿ ಇಬ್ಬರು ಮಕ್ಕಳಿಗೂ ತಾಯಿ ಇಲ್ಲದ ಹಾಗೆ ಆಗಿದೆ.

Leave A Reply

Your email address will not be published.