Home Karnataka State Politics Updates DK Shivakumar: ಸುಮಲತಾ ಅವರ ಸುದ್ದಿಗೆ ನಾವು ಹೋಗುವುದಿಲ್ಲ, ಅವರ ಅವಶ್ಯಕತೆಯೂ ನಮಗಿಲ್ಲ : ಡಿಕೆಶಿ

DK Shivakumar: ಸುಮಲತಾ ಅವರ ಸುದ್ದಿಗೆ ನಾವು ಹೋಗುವುದಿಲ್ಲ, ಅವರ ಅವಶ್ಯಕತೆಯೂ ನಮಗಿಲ್ಲ : ಡಿಕೆಶಿ

DK Shivakumar

Hindu neighbor gifts plot of land

Hindu neighbour gifts land to Muslim journalist

DK Shivakumar: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ, ರಾಜಕೀಯ ನಾಯಕರು ಪರಸ್ಪರರ ಮೇಲೆ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಾವು ಸಂಸದೆ ಸುಮಲತಾ ಅಂಬರೀಶ್ ಅವರ ಸುದ್ದಿಗೆ ಹೋಗುವುದಿಲ್ಲ. ನಮಗೆ ಅವರ ಅವಶ್ಯಕತೆಯೂ ಇಲ್ಲ ಎಂದು ಹೇಳಿದ್ದಾರೆ.

ವಿಷ ಹಾಕಿರುವ ಕುರಿತು ಮಾತನಾಡಿರುವುದು ಹೆಚ್‌.ಡಿ. ಕುಮಾರಸ್ವಾಮಿ ಅವರು. ಸುಮಲತ ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

ಸುಮಲತಾ ಅವರು ಕುಮಾರಸ್ವಾಮಿ ಅವರು ನನಗೆ ವಿಷ ಹಾಕಿದ್ದರು ಎಂದಿದ್ದರು. ಯಾವ ವಿಷ ಎಂದು ಕುಮಾರಸ್ವಾಮಿರವರನ್ನು ಕೇಳಿದ್ದೆ. ಸುಮಲತಾ ಅವರ ಸುದ್ದಿಗೆ ನಾನು ಹಿಂದೆಂದೂ ಹೋಗಿಲ್ಲ, ಮುಂದೆಯೂ ಹೋಗುವುದು ಇಲ್ಲ ಎಂದರು.

ಈ ಹಿಂದೆ ಕಾಂಗ್ರೆಸ್ ಪಕ್ಷ ಅಂಬರೀಶ್ ಅವರಿಗೆ ಏನೆಲ್ಲಾ ಕೊಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಂಬರೀಶ್ ಅವರು ಸಾಯುವ ಮುನ್ನ ಏನು ಹೇಳಿದ್ದಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಡಿಕೆಶಿ ಹೇಳಿದರು.