Man Stabs Woman: ಇಸ್ಲಾಂ ಸ್ವೀಕರಿಸಿ, ಮತ್ತೆ ಹಿಂದು ಧರ್ಮಕ್ಕೆ ಮರಳಿದ ವ್ಯಕ್ತಿಯಿಂದ ಮಹಿಳೆಯ ಭೀಕರ ಕೊಲೆ

Man Stabs Woman: ಬೆಂಗಳೂರಿನ ಜಯನಗರದಲ್ಲಿ ಫರೀದಾ ಖಾನ್‌ (42) ಎಂಬ ಮಹಿಳೆಯ ಕೊಲೆ ಪ್ರಕರಣದ ಕುರಿತು ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಓಯೋ ರೂಂಗೆ ಕರೆದುಕೊಂಡು ಹೋಗಿ ನಂತರ ಫರೀದಾ ಖಾನ್‌ರನ್ನು ಕೊಲೆ ಮಾಡಿದ ಆರೋಪಿ ಗಿರೀಶ್‌ ಇದಕ್ಕೂ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ನಂತರ ಹಿಂದೂ ಧರ್ಮಕ್ಕೆ ಬಂದಿದ್ದ. ಈತನನ್ನು ಮದುವೆಯಾಗಲು ಫರೀದಾ ಖಾನ್‌ ಒಪ್ಪದ ಕಾರಣ ಈಕೆಯ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.

ಗಿರೀಶ್‌ (32) ಇಸ್ಲಾಂ ಧರ್ಮಕ್ಕೆ 2011 ರಲ್ಲಿ ಮತಾಂತರಗೊಂಡಿದ್ದ. ಹಿಂದೂ ಧರ್ಮ ವಿರೋಧಿಸಿ ಈತ ಇಸ್ಲಾಂಗೆ ಮತಾಂತರಗೊಂಡು ರಿಹಾನ್‌ ಎಂಬ ಹೆಸರನ್ನು ಮಾಡಿಕೊಂಡಿದ್ದ. ನಂತರ ಈತನ ಮತಾಂತರದಿಂದ ಈತನ ತಂಗಿಗೆ ವರ ಸಿಗಲಿಲ್ಲ. ಹಾಗಾಗಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದ ಎಂದು ತಿಳಿದು ಬಂದಿದೆ.

ಈತನಿಗೆ 2022 ರಲ್ಲಿ ಕೋಲ್ಕತ್ತಾ ಮೂಲದ ಫರೀದಾ ಖಾನ್‌ ಪರಿಚಯವಾಗುತ್ತದೆ. ಈಕೆ ಸ್ಪಾ ಒಂದರಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಪರಿಚಯ ಪ್ರೀತಿಗೆ ಬದಲಾಗಿ, ಮದುವೆಯಾಗಲು ತೀರ್ಮಾನಿಸಿದರೂ ಈ ಕೊಲೆ ಅನಂತರ ನಡೆದಿದೆ.

ಪಿಜಿಯಲ್ಲಿ ತಂಗಿದ್ದ ಫರೀದಾ ಖಾನ್‌ ಮಾ.6 ರಂದು ಕೊಲ್ಕತ್ತಾಗೆ ತೆರಳಿದ್ದಳು. ಆಸ್ಪತ್ರೆಗೆ ಹೋಗಲಿಕ್ಕಿದೆ ಎಂದು ಹೇಳಿ ಆಕೆ ಕೊಲ್ಕತ್ತಾಗೆ ಹೋಗಿದ್ದೂ. ಈಕೆಗೆ ಈಗಾಗಲೇ ಮದುವೆಯಾಗಿದ್ದು, ಪತಿ ಮರಣ ಹೊಂದಿದ ಕಾರಣ ಏಕಾಂಗಿಯಾಗಿದ್ದಳು. ಈಕೆಗೆ ಓರ್ವ ಮಗಳಿದ್ದು, ವಾಪಾಸು ಬರುವಾಗ ಮಗಳನ್ನು ಕೂಡಾ ಕರೆದುಕೊಂಡು ಬಂದಿದ್ದಳು.

ಫರೀದಾ ಖಾನ್‌ ರೀಮಾ ರಾಯ್‌ ಎಂಬ ಮಹಿಲೆ ಜೊತೆ ಕೋಲ್ಕತ್ತಾಗೆ ಬೇರೆ ಕಾರಣಕ್ಕೆ ಹೋಗಿರುವುದು ಗಿರೀಶ್‌ಗೆ ರೀಮಾ ರಾಯ್‌ ಪತಿ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಈ ವಿಚಾರಕ್ಕೆ ಇವರಿಬ್ಬರ ಮಧ್ಯೆ ಜಗಳವಾಗಿದೆ. ಪ್ರೀತಿಸಿದಾಕೆ ಮೋಸ ಮಾಡಿದಳು ಎಂದು ಆತ ಕೋಪಗೊಂಡಿದ್ದ.

ಮಾ.28 ರಂದು ಗಿರೀಶ್‌ ಬರ್ತ್‌ಡೇ ಇತ್ತು. ಹಾಗಾಗಿ ಪಾರ್ಟಿ ಆಯೋಜನೆ ಮಾಡಿದ್ದ. ಎಲ್ಲಾ ಜಗಳ ಮರೆತು ಇಬ್ಬರೂ ಮಾ.29 ರಂದು ಫರೀದಾ, ಗಿರೀಶ್‌ ಪಾರ್ಟಿ ಮಾಡಿದ್ದಾರೆ. ಜೆಪಿ ನಗರದ ಓಯೋ ರೂಂನಲ್ಲಿ ಇಬ್ಬರೂ ರಾತ್ರಿ ಕಳೆದು, ಮಾ.30 ರಂದು ಫರೀದಾ ಖಾನ್‌ ಳನ್ನು ಶಾಲಿನಿ ಗ್ರೌಂಡ್ಸ್‌ಗೆ ಕರೆದುಕೊಂಡು ಗಿರೀಶ್‌ ಬಂದಿದ್ದಾನೆ. ಆಗ ಆತ ನನ್ನನ್ನು ಮದುವೆಯಾಗು ಎಂದು ಕೇಳಿದ್ದಾನೆ. ಈಕೆ ಇಲ್ಲ ಎಂದಿದ್ದಾಳೆ. ಕೋಪಗೊಂಡ ಗಿರೀಶ್‌ ಆಕೆಗೆ 20 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾನೆ.

ಇದೀಗ ಗಿರೀಶ್‌ ಬಂಧನವಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಇದನ್ನೂ ಓದಿ: Belthangady Road Mashup: ಬೆಳ್ತಂಗಡಿ; ಕಾರು ಅಪಘಾತ; ಓರ್ವ ಸಾವು

Leave A Reply

Your email address will not be published.