Home ದಕ್ಷಿಣ ಕನ್ನಡ Dakshina Kannada (Kadaba): ಗೋ ಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು!! ರಾಜ್ಯ ಹೆದ್ದಾರಿ ತಡೆದು...

Dakshina Kannada (Kadaba): ಗೋ ಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು!! ರಾಜ್ಯ ಹೆದ್ದಾರಿ ತಡೆದು ಆಕ್ರೋಶ, ಮಧ್ಯರಾತ್ರಿ ಸ್ಥಳಕ್ಕಾಗಮಿಸಿದ ಶಾಸಕರುಗಳ ಸಹಿತ ಎಸ್ಪಿ

Dakshina Kannada (Kadaba)

Hindu neighbor gifts plot of land

Hindu neighbour gifts land to Muslim journalist

Dakshina Kannada (Kadaba):ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ಕಾರೊಂದು ಅತೀಯಾದ ವೇಗದಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಗಾಯಾಳು ಮೃತಪಟ್ಟ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಸಹಿತ ಸ್ಥಳೀಯರು ಆಸ್ಪತ್ರೆಯ ಮುಂಭಾಗ ಆಗಮಿಸಿ, ಬಳಿಕ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿ ಆಕ್ರೋಶ ಹೊರಹಾಕಿದ ಘಟನೆ ಜಿಲ್ಲೆಯ ಕಡಬದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಮರ್ದಾಳ ಬಂಟ್ರ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂದು ಗುರುತಿಸಲಾಗಿದೆ. ವಿಠಲ ರೈ ಅವರು ನಿನ್ನೆ ಸಂಜೆ ಮರ್ದಾಳ ಪೇಟೆಯಲ್ಲಿ ತನ್ನ ಕಾರನ್ನು ನಿಲ್ಲಿಸಿ ರಸ್ತೆ ದಾಟುತ್ತಿದ್ದ ಈ ಘಟನೆ ಸಂಭವಿಸಿದೆ. ಕೃತ್ಯ ಎಸಗಿದ ಚಾಲಕ ಕಾರು ನಿಲ್ಲಿಸದೆ ಘಟನಾ ಸ್ಥಳದಿಂದ ಕಾಲ್ಕಿತ್ತ ಪರಿಣಾಮ ಸ್ಥಳೀಯರು ಆಕ್ರೋಶಿತರಾಗಿದ್ದು, ಮೃತದೇಹವಿರಿಸಿದ್ದ ಕಡಬ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಆಕ್ರೋಶಿತ ನಾಗರಿಕರು ಜಮಾಯಿಸಿದ್ದರು ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದರು.

ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ಕಾರು!

ಘಟನೆಯ ಬಳಿಕ ಪರಾರಿಯಾದ ಕಾರನ್ನು ಪನ್ಯ ಸಮೀಪದ ಮನೆಯೊಂದರಲ್ಲಿ ಸ್ಥಳೀಯರು ಪತ್ತೆ ಹಚ್ಚಿದಾಗ ಅಕ್ರಮ ಗೋ ಸಾಗಾಟದ ವಿಚಾರ ಬೆಳಕಿಗೆ ಬಂದಿದೆ. ಕಿರಾತಕರು ಕಾರಿನಲ್ಲಿ ತಂದಿದ್ದ ಎರಡು ಗೋವುಗಳನ್ನು ಕಾರಿನಿಂದ ಇಳಿಸಿ ಮನೆಯೊಂದರ ಬಳಿಯಲ್ಲಿ ಕಟ್ಟಿ ಹಾಕಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನುವ ವಿಚಾರ ಬಹಿರಂಗವಾಗುತ್ತಲೇ ಹಿಂದೂ ಸಂಘಟನೆಗಳ ಪ್ರಮುಖರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು.

ಶಾಸಕರ ಆಗಮನ, ರಸ್ತೆ ತಡೆ!

ಆಕ್ರೋಷಿತ ನಾಗರಿಕರು ಆಸ್ಪತ್ರೆಯ ಮುಂಭಾಗದಿಂದ ರಾಜ್ಯ ಹೆದ್ದಾರಿಗೆ ಆಗಮಿಸಿ ರಸ್ತೆ ತಡೆ ನಡೆಸಿದ್ದು, ಈ ವೇಳೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರತಿ ಮುರುಳ್ಯ, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಸಹಿತ ಅರುಣ್ ಕುಮಾರ್ ಪುತ್ತಿಲ ಹಾಗೂ ಹಿಂದೂ ಮುಖಂಡರು ಖುದ್ದು ರಸ್ತೆಯಲ್ಲಿ ಪ್ರತಿಭಟನಾಕಾರರೊಂದಿಗೆ ಕುಳಿತು ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದರು.

ಎಸ್ಪಿ ಆಗಮನಕ್ಕೆ ಆಗ್ರಹ!

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆಗಮಿಸಿ ಭರವಸೆ ನೀಡಬೇಕು ಎನ್ನುವ ಪಟ್ಟು ಜೋರಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ ಎಸ್ಪಿ ಸಿ.ಬಿ ರಿಷ್ಯಂತ್ ಸ್ಥಳಕ್ಕಾಗಮಿಸಿದರು.

ಘಟನೆ ನಡೆದ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದ ಬಳಿಕ, ಆರೋಪಿಗಳನ್ನು ಯಾವುದೇ ಪ್ರಭಾವಕ್ಕೂ ಮಣಿಯದೆ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸುತ್ತೇವೆ ಎನ್ನುವ ಎಸ್ಪಿಯವರ ಭರವಸೆಯ ಬಳಿಕ ಪ್ರತಿಭಟನಾ ಕಾರರು ಪ್ರತಿಭಟನೆ ಹಿಂತೆಗೆದರು.

ಇದನ್ನೂ ಓದಿ: Man Stabs Woman: ಇಸ್ಲಾಂ ಸ್ವೀಕರಿಸಿ, ಮತ್ತೆ ಹಿಂದು ಧರ್ಮಕ್ಕೆ ಮರಳಿದ ವ್ಯಕ್ತಿಯಿಂದ ಮಹಿಳೆಯ ಭೀಕರ ಕೊಲೆ