Home News Girl Committed Suicide: ಮೊದಲ ಮುಟ್ಟಿನ ನೋವು; 14ರ ಬಾಲಕಿ ಆತ್ಮಹತ್ಯೆ

Girl Committed Suicide: ಮೊದಲ ಮುಟ್ಟಿನ ನೋವು; 14ರ ಬಾಲಕಿ ಆತ್ಮಹತ್ಯೆ

Girl Committed Suicide
Imge Credit Source: New Indian Express

Hindu neighbor gifts plot of land

Hindu neighbour gifts land to Muslim journalist

Girl Committed Suicide: ಮುಂಬೈನ ಮಾಲ್ವಾನಿ ಪ್ರದೇಶದಲ್ಲಿ 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಎಲ್ಲರೂ ಬೆಚ್ಚಿದ್ದಾರೆ. ವರದಿಗಳ ಪ್ರಕಾರ, ಹುಡುಗಿ ತನ್ನ ಮೊದಲ ಮುಟ್ಟಿನ ನೋವಿಗೆ ಹೆದರಿ ಋತುಚಕ್ರದ ನೋವಿನಿಂದ ಆಕೆ ಆತ್ಮಹತ್ಯೆಯ ಹೆಜ್ಜೆ ಇಟ್ಟಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಮೃತ ಬಾಲಕಿಯು ತನ್ನ ಮುಟ್ಟಿನ ಬಗ್ಗೆ ತಪ್ಪು ಮಾಹಿತಿಯಿಂದಾಗಿ ಒತ್ತಡಕ್ಕೆ ಒಳಗಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 26 ರ ಸಂಜೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ನೆರೆಹೊರೆಯವರು ಮತ್ತು ಸಂಬಂಧಿಕರು ಬಾಲಕಿಯನ್ನು ಕಾಂದಿವಿಲಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಪ್ರಾಥಮಿಕ ಪೊಲೀಸ್ ವಿಚಾರಣೆ ಆಕೆಗೆ ಮೊದಲ ಋತುಸ್ರಾವದಿಂದ ತೊಂದರೆಯಾಗಿತ್ತು, ತೀವ್ರ ನೋವಿನಿಂದ ಮಾನಸಿಕ ಒತ್ತಡಕ್ಕೂ ಒಳಗಾಗಿದ್ದಳು. ಈ ಕಾರಣದಿಂದಾಗಿ ಹುಡುಗಿ ತನ್ನ ಪ್ರಾಣವನ್ನು ತೆಗೆದುಕೊಂಡಿದ್ದಾಳೆ ಎಂದು ಶಂಕಿಸಿದ್ದಾರೆ. ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮೃತ ಬಾಲಕಿಯ ಸ್ನೇಹಿತರ ಜೊತೆ ಮಾತನಾಡಿ ಆತನ ಮಾನಸಿಕ ಒತ್ತಡದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದಲ್ಲದೇ ಬಾಲಕಿಯ ಆನ್ ಲೈನ್ ಚಟುವಟಿಕೆ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.

ಇದನ್ನೂ ಓದಿ: ಲೈಂಗಿಕ ಕ್ರಿಯೆ ನಡೆಸುವಾಗ ಎಂದಿಗೂ ಈ ತಪ್ಪನ್ನು ಮಾಡಬೇಡಿ !! ತೃಪ್ತಿಯಿಂದಲೇ ವಂಚಿತರಾಗಬಹುದು ಹುಷಾರ್!!

ಮುಂಬೈನಲ್ಲಿ ನಡೆದ ಈ ಘಟನೆ ಆತಂಕಕಾರಿಯಾಗಿದೆ. ಹೆಣ್ಣು ಮಕ್ಕಳಿಗೆ ಮುಟ್ಟಿನ ಬಗ್ಗೆ ತಿಳಿಹೇಳಬೇಕು ಎಂಬುದು ಇತರ ಪೋಷಕರಿಗೆ ಪಾಠವಾಗಿದೆ. ಮೊದಲ ಪಿರಿಯಡ್ ನಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೇ ಮೊದಲಲ್ಲ. ಮೇ 16, 2019 ರಂದು ದೆಹಲಿಯ ಬುರಾರಿ ಪ್ರದೇಶದಲ್ಲಿ 12 ವರ್ಷದ ಬಾಲಕಿ ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು.