Actor Siddharth: ಖ್ಯಾತ ನಟ ಸಿದ್ಧಾರ್ಥ್‌ ಮೊದಲ ಪತ್ನಿ ಯಾರು?

Actor Siddharth: ಖ್ಯಾತ ನಟ ಸಿದ್ಧಾರ್ಥ್‌ ಅವರು ನಿನ್ನೆಯಷ್ಟೇ ನಟಿ ಅದಿತಿ ಹೈದರಿಯನ್ನು ಮದುವೆಯಾದರು. ಆದರೆ ಅವರಿಗೆ ಇದು ಎರಡನೇ ಮದುವೆ. ಸಿದ್ಧಾರ್ಥ್‌ ಅವರು ಸಿನಿಮಾ ರಂಗದಿಂದ ತುಂಬಾನೇ ಗ್ಯಾಪ್‌ ತಗೊಂಡು ಮತ್ತೆ ಸಿನಿ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಮದುವೆ ಲೈಫ್‌ ಮಾತ್ರ ಬಹಳ ಸೀಕ್ರೇಟ್‌ ಆಗಿಯೇ ಇತ್ತು.

ಇದನ್ನೂ ಓದಿ: Viral News: ತಲೆಗೆ ದುಪ್ಪಟ ಕಟ್ಟಿಕೊಂಡು ಫೋನಲ್ಲಿ ಮಾತನಾಡುತ್ತಾ ಸ್ಕೂಟಿ ಓಡಿಸುತ್ತಿದ್ದ ಮಹಿಳೆಯ ವಿಡಿಯೋ ವೈರಲ್

ಸಿದ್ಧಾರ್ಥ್‌ ಅವರ ಮೊದಲ ಮದುವೆಯು 2003 ರಲ್ಲಿ ನಡೆದಿತ್ತು. ಸಿದ್ದಾರ್ಥ್‌ ಅವರು ದೆಹಲಿಯಲ್ಲಿ ಕಾಲೇಜು ಶಿಕ್ಷಣ ಪಡೆಯುವಾಗ ಅವರಿಗೆ ಅಲ್ಲಿ ಮೇಘನಾ ನಾರಾಯಣ್‌ ಎನ್ನುವವರ ಪರಿಚಯವಾಯಿತು. ಮೇಘನಾ ಪಕ್ಕದ ಮನೆಯವರಾದ ಕಾರಣ ಸ್ನೇಹ ಪ್ರೀತಿಗೆ ಕನ್ವರ್ಟ್‌ ಆಯಿತು. ಇಬ್ಬರೂ ಪ್ರೀತಿ ಮಾಡತೊಡಗಿದರು. 2003 ರಲ್ಲಿ ಇವರಿಬ್ಬರ ಮದುವೆಯಾಯಿತು. ಆಗ ಸಿದ್ದಾರ್ಥ್‌ ಅವರು ತಮಿಳು ಸಿನಿಮಾ ಮಾಡುತ್ತಿದ್ದರು.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಇದನ್ನೂ ಓದಿ: Mangaluru-Gulf Flights: ಗಲ್ಫ್‌- ಮಂಗಳೂರು ವಿಮಾನಯಾನ ದರ ಮೂರು ಪಟ್ಟು ದುಬಾರಿ

ಇವರಿಬ್ಬರ ಮದುವೆ ಫೋಟೋ ಅಂತರ್ಜಾಲದಲ್ಲಿ ಲಭ್ಯವಿಲ್ಲ. ಈ ಮದುವೆಯನ್ನು ಬಹಳ ಗುಟ್ಟಾಗಿಯೇ ಇಡಲಾಗಿತ್ತು. ಆದರೆ ಅನಂತರ ಏನಾಯಿತೋ ಮೇಘನಾ ಮತ್ತು ಸಿದ್ದಾರ್ಥ್‌ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಯಿತು. ಅನಂತರ ಇಬ್ಬರೂ ಸಪರೇಟ್‌ ಆಗಿ ಬದುಕಲು ಶುರು ಮಾಡಿದರು. ಇಬ್ಬರೂ 2007 ರಲ್ಲಿ ವಿಚ್ಛೇದನ ಪಡೆದರು.

ಅನೇಕ ನಟಿಯರ ಜೊತೆ ಸಿದ್ದಾರ್ಥ್‌ ಜೊತೆ ಸೇರಿತ್ತು. ಆದರೆ ಅದು ಮದುವೆಯವರೆಗೆ ಹೋಗಿಲ್ಲ. ಈಗ ಸಿದ್ದಾರ್ಥ್‌, ಅದಿತಿ ಮದುವೆಯಾಗಿದ್ದು, ಅಧಿಕೃತ ಹೇಳಿಕೆ ಬರಬೇಕಷ್ಟೇ.

Leave A Reply

Your email address will not be published.