Home Crime Madhyapradesh: ಜೈಲಿನಲ್ಲಿ ಮುದ್ರಣ ಕೌಶಲ್ಯ ಕಲಿತು ಖೋಟ ನೋಟು ಪ್ರಿಂಟ್ ಮಾಡುತ್ತಿದ್ದ ವ್ಯಕ್ತಿ ಬಂಧನ

Madhyapradesh: ಜೈಲಿನಲ್ಲಿ ಮುದ್ರಣ ಕೌಶಲ್ಯ ಕಲಿತು ಖೋಟ ನೋಟು ಪ್ರಿಂಟ್ ಮಾಡುತ್ತಿದ್ದ ವ್ಯಕ್ತಿ ಬಂಧನ

Madhyapradesh

Hindu neighbor gifts plot of land

Hindu neighbour gifts land to Muslim journalist

Madhyapradesh: ವ್ಯಕ್ತಿಯೊಬ್ಬ ಜೈಲಿನಲ್ಲಿ ವೃತ್ತಿಪರ ಪ್ರಿಂಟಿಂಗ್ ಕೌಶಲ್ಯ ಕಲಿತು ಬಿಡುಗಡೆಯಾದ ನಂತರ ನಕಲಿ ನೋಟುಗಳನ್ನು ತಯಾರಿಸಲು ಮುಂದಾಗಿರುವ ಘಟನೆ ಮಧ್ಯಪ್ರದೇಶದಲ್ಲಿ (Madhyapradesh) ನಡೆದಿದೆ.

ಪೊಲೀಸರು ಆತನನ್ನು ಬಂಧಿಸಿ 95 ನಕಲಿ ನೋಟುಗಳನ್ನು ವಶಪಡಿಸಿಕೊಂಡ ನಂತರ ಆರೋಪಿಯ ಈ ಕುಕೃತ್ಯ ಬಯಲಾಗಿದೆ. ಬಂಧಿಸಲಾದ ವ್ಯಕ್ತಿಯನ್ನು ಭೂಪೇಂದ್ರ ಸಿಂಗ್ ಧಾಕತ್ ಎಂದು ಗುರುತಿಸಲಾಗಿದ್ದು, ತನಿಖೆಯ ವೇಳೆ 200 ರೂ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Intresting Fact: TV ಮತ್ತು AC ಬಣ್ಣ ಯಾಕೆ ಕಪ್ಪು, ಬಿಳಿ ಇರುತ್ತೆ ?! ಈ ಇಂಟ್ರೆಸ್ಟಿಂಗ್ ವಿಷಯ ನಿಮಗೆ ಗೊತ್ತಾ?!

ಇಷ್ಟು ಮಾತ್ರವಲ್ಲದೆ, ಅತನ ಮನೆಯಿಂದ ಕಲರ್ ಪ್ರಿಂಟರ್, ಆರು ಇಂಕ್ ಬಾಟಲಿಗಳು ಮತ್ತು ಗರಿಗರಿಯಾದ ನಕಲಿ ನೋಟುಗಳನ್ನು ( fake notes print)  ತಯಾರಿಸಲು ಬಳಸಲಾದ ಕಾಗದವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಸಿರೊಂಜ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಉಮೇಶ್ ತಿವಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ನಕಲಿ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಹರಿಬಿಡುತ್ತಿದ್ದೆ ಎಂದು ಢಾಕತ್ ತಪ್ರೊಪ್ಪಿಕೊಂಡಿದ್ದಾನೆ.

China Intresting Facts: ಚೀನಾ ಮಹಾಗೋಡೆ ಕುರಿತು ರೋಚಕ ಸತ್ಯ ಬಿಚ್ಚಿಟ್ಟ ಡಾ. ಬ್ರೋ !!

ಜಿಲ್ಲೆಯಲ್ಲಿ ತನ್ನ ಕೊನೆಯ ಜೈಲು ಅವಧಿಯಲ್ಲಿ, ಧಾಕತ್ ಬಿಡುಗಡೆಯಾದ ನಂತರ ಸಮಾಜದಲ್ಲಿ ಎಲ್ಲರಂತೆ ಬದುಕಲು ಕೈದಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ವೃತ್ತಿಪರ ತರಬೇತಿ ಕಾರ್ಯಕ್ರಮದ ಭಾಗವಾಗಿ ಪ್ರಿಂಟಿಂಗ್ ಕೌಶಲ್ಯ ಪಡೆದಿದ್ದ ಎಂದು ಅವರು ಹೇಳಿದರು.

 

ವಿದಿಶಾ, ರಾಜ್‌ಗಡ್, ರೈಸನ್, ಭೋಪಾಲ್ ಮತ್ತು ಅಶೋಕ್ ನಗರ ಜಿಲ್ಲೆಗಳ ಮಿತಿಯಿಂದ ಒಂದು ವರ್ಷಗಳ ಕಾಲ ಆತನನ್ನು ಹೊರಹಾಕಲಾಗಿದ್ದರೂ, ಆತ ಹೇಗಾದರೂ ಇಲ್ಲೇ ಇದ್ದು ನಕಲಿ ನೋಟುಗಳನ್ನು ಮುದ್ರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.