Kadaba: ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ಯುವತಿ-ಆಟೋ ಚಾಲಕನಿಂದ ರಕ್ಷಣೆ

Share the Article

Kadaba News: ಯುವತಿಯೊಬ್ಬಳು ತನ್ನ ಸ್ಕೂಟಿಯನ್ನು ನಿಲ್ಲಿಸಿ ನದಿಗೆ ಹಾರಿರುವ ಘಟನೆಯೊಂದು ಕಡಬದಲ್ಲಿ ನಡೆದಿದೆ. ಅಲಂಕಾರು ಸಮೀಪದ ಶಾಂತಿಮೊಗರು ಸೇತುವೆ ಬಳಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್‌ ಸ್ಥಳದಲ್ಲೇ ಇದ್ದ ಆಟೋ ಚಾಲಕ ನದಿಗೆ ಹಾರಿ ಯುವತಿಯ ಪ್ರಾಣ ರಕ್ಷಿಸಿದ್ದಾನೆ.

ಯುವತಿ ನೆಲ್ಯಾಡಿ ಸಮೀಪದ ಬಲ್ಯದವಳೆಂದು, ಕಾಣಿಯೂರಿನವಳೆಂದು ಹೇಳಲಾಗುತ್ತಿದೆ. ಆದರೆ ಮಾಹಿತಿ ಇನ್ನೂ ಖಚಿತವಾಗಿಲ್ಲ.

ಇದನ್ನೂ ಓದಿ: ಶಾಲೆಗೆ ಹೋಗುತ್ತಿದ್ದ ಬಾಲಕಿಯ ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ; ವೀಡಿಯೋ ವೈರಲ್

ಸ್ಥಳೀಯರು ಹೇಳಿರುವ ಪ್ರಕಾರ ಯುವತಿ ಜೊತೆ ಒಬ್ಬ ಯುವಕ ಕೂಡಾ ಬಂದಿದ್ದ ಎನ್ನಲಾಗಿದೆ. ನದಿಗೆ ಹಾರಿದ ಯುವತಿಯನ್ನು ರಕ್ಷಿಸಿದಿ ಆಟೋ ಚಾಲಕ ಸ್ಥಳೀಯರ ನೆರವಿನಿಂದ ಕಡಬ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡ ಬಳಿಕ ಯುವತಿ ಚೇತರಿಸಿಕೊಂಡಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಇದನ್ನೂ ಓದಿ: ನನ್ನ ಸ್ಪರ್ಧೆ ಮೋದಿಯ ವಿರುದ್ಧವಲ್ಲ, ಚೌಟ ವಿರುದ್ಧ; ಚುನಾವಣೆಯಲ್ಲಿ ಸೆಣೆಸಲು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಹೊಸ ಜಾಣ ನಡೆ

Leave A Reply