School Holiday: ಇಂದು ಈ ರಾಜ್ಯದ ಈ ಊರುಗಳಲ್ಲಿ ಶಾಲಾ ಕಾಲೇಜಿಗೆ ರಜೆ!!!

School Holiday: ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆಗೆ ಇಂದು (ಡಿ.27) ಚುನಾವಣೆ ನಡೆಯಲಿದ್ದು, ಹಾಗೆನೇ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತ್‌ಗೂ ಇಂದು ಚುನಾವಣೆ ನಡೆಯಲಿದೆ. ಈ ಎರಡು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಸರಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

 

ಯಾದಗಿರಿ ಜಿಲ್ಲೆಯ ಹುಣಸಗಿ ಮತ್ತು ಕಲಬುರಗಿ ಜಿಲ್ಲೆಯ ವಾಡಿ ಪುರಸಭೆಗೆ ಕೂಡಾ ಇಂದು (ಡಿ.27) ಚುನಾವಣೆ ಇದ್ದು, ಈ ವ್ಯಾಪ್ತಿಯ ಸರಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.

ಹಾಗಾಗಿ ಈ ನಾಲ್ಕು ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಇಂದು ರಜೆ ಘೋಷಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ನ್ಯೂಸ್‌ 18 ವರದಿ ಮಾಡಿದೆ.

ಇದನ್ನು ಓದಿ: Sandalwood ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹೃದಯಾಘಾತದಿಂದ ನಿಧನ!

Leave A Reply

Your email address will not be published.