RSS – Caste Census: ಜಾತಿ ಗಣತಿ ಕುರಿತು RSS ನಿಂದ ಮಹತ್ವದ ಸ್ಟೇಟ್ಮೆಂಟ್ !!

RSS – Caste Census: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್ ) ಜಾತಿ ಗಣತಿಯನ್ನು (RSS – Caste Census) ವಿರೋಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಆದರೆ ಜನಗಣತಿಯನ್ನು ಸಮಾಜದ ಪ್ರಗತಿಗೆ ಬಳಸಬೇಕೆಂದು ಸ್ಪಷ್ಟಪಡಿಸಿದೆ. ಇದರಲ್ಲಿ ರಾಜಕೀಯ ಬೇಡ ಎಂದು ಸಂಘಟನೆ ಹೇಳಿದೆ.

 

ಯಾವುದೇ ತಾರತಮ್ಯವಿಲ್ಲದೆ ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹಿಂದೂ ಸಮಾಜವನ್ನು ನಿರ್ಮಿಸಲು ಸಂಘಟನೆಯು ನಿರಂತರವಾಗಿ ಶ್ರಮಿಸುತ್ತಿದ್ದು, ಸಾಮಾಜಿಕ ನಿಯಮಗಳಿಗೆ ಬದ್ಧವಾಗಿರುತ್ತದೆ ಎಂದು ಆರ್ ಎಸ್ಎಸ್ ಹೇಳಿದೆ.

ಇದನ್ನು ಓದಿ: Bigg Boss: ಬೀದಿ ಬೀದಿಯಲ್ಲಿ, ಊಟ ಕೊಡಿ ಎಂದು ಅಲೆಯುತ್ತಿದ್ದಾನೆ ಹುಚ್ಚ ವೆಂಕಟ್ – ಏನಪ್ಪಾ ಇದು ಶಾಕಿಂಗ್ ನ್ಯೂಸ್?!

ಈಗಾಗಲೇ ಆರ್‌ಎಸ್‌ಎಸ್‌ ಪದಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಧರ್ ಗಾಡ್ಗೆ ಅವರು ಡಿಸೆಂಬರ್ 19 ರಂದು ಜನಗಣತಿಯನ್ನು ವಿರೋಧ ವ್ಯಕ್ತಪಡಿಸಿದ್ದರು. ಜಾತಿ ಗಣತಿಯು ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆಯ ಬಗ್ಗೆ ಡೇಟಾವನ್ನು ಒದಗಿಸುವುದರಿಂದ ಕೆಲವು ಜನರಿಗೆ ರಾಜಕೀಯವಾಗಿ ಲಾಭವಾಗಬಹುದು, ಆದರೆ ಇದು ಸಾಮಾಜಿಕವಾಗಿ ಮತ್ತು ರಾಷ್ಟ್ರೀಯ ಏಕತೆಯ ದೃಷ್ಟಿಯಿಂದ ಸರಿಯಲ್ಲ ಎಂದು ಹೇಳಿದ್ದರು.

ಇದೀಗ, ಆರ್‌ಎಸ್‌ಎಸ್‌ನ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಜಾತಿ ಗಣತಿಯನ್ನು ನಡೆಸುವಾಗ, ಅದು ಬಿರುಕು ಸೃಷ್ಟಿಸದಂತೆ ನೋಡಿಕೊಳ್ಳಬೇಕು ಎಂದು ಸಂಘಟನೆ ಹೇಳಿದೆ.

Leave A Reply

Your email address will not be published.