Home Karnataka State Politics Updates Gruhalakshmi Scheme: ಗೃಹಲಕ್ಷ್ಮೀ ಹಣ ವರ್ಗಾವಣೆಯಲ್ಲಿ ಮೆಗಾ ಟ್ವಿಸ್ಟ್- ಇನ್ನು ಈ ಯಜಮಾನಿಯರ ದುಡ್ಡು...

Gruhalakshmi Scheme: ಗೃಹಲಕ್ಷ್ಮೀ ಹಣ ವರ್ಗಾವಣೆಯಲ್ಲಿ ಮೆಗಾ ಟ್ವಿಸ್ಟ್- ಇನ್ನು ಈ ಯಜಮಾನಿಯರ ದುಡ್ಡು ಗಂಡನ ಖಾತೆಗೆ ಜಮಾ!!

Gruhalakshmi Scheme
Image source; Wishfin

Hindu neighbor gifts plot of land

Hindu neighbour gifts land to Muslim journalist

Gruhalakshmi Scheme: ಗೃಹ ಲಕ್ಷ್ಮೀ ಯೋಜನೆಯಡಿ (Gruhalakshmi Scheme) ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಕೆಲವರ ಖಾತೆಗೆ ಇನ್ನೂ ಕೂಡ ಹಣ ಜಮಾ ಆಗಿಲ್ಲ. ಅಂತಹ ಮಹಿಳೆಯರಿಗೆ ನಿಮ್ಮ ಹಣವನ್ನು ಯಜಮಾನನ ಖಾತೆಗೆ ಬರುವಂತೆ ಮಾಡಲು ಸರ್ಕಾರ ಚಿಂತನೆ ಕೈಗೊಂಡಿದೆ.

ಹೌದು, ಹಲವು ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದೆ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಜೊತೆಗೆ ಲಿಂಕ್ ಆಗುತ್ತಿಲ್ಲ. ಸರ್ಕಾರದಿಂದ ಹಣ ಜಮಾ ಆಗಿದ್ದರು ಕೂಡ ಯಜಮಾನಿಯರ ಖಾತೆಗೆ ಮಾತ್ರ ಹಣ ಬಂದು ತಲುಪುತ್ತಿಲ್ಲ. ಆದ್ದರಿಂದ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.

ಇದನ್ನು ಓದಿ: Porn video: ಈ ದೇಶದವರೆಲ್ಲಾ ಅತೀ ಹೆಚ್ಚು ಅಶ್ಲೀಲ ಚಿತ್ರ ನೋಡ್ತಾರಂತೆ !! ಭಾರತೀಯರು ಯಾವ ಸ್ಥಾನದಲ್ಲಿದ್ದಾರೆ ?!

ಒಂದು ವೇಳೆ ಕುಟುಂಬದಲ್ಲಿ ಮತ್ತೊಬ್ಬ ಮಹಿಳೆ ಇದ್ದರೆ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ, ಇಲ್ಲದೆ ಇದ್ದಲ್ಲಿ ಆಗ ಮನೆಯ ಯಜಮಾನ ಅಥವಾ ಮನೆಯ ಹಿರಿಯ ಪುರುಷ ಸದಸ್ಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಆದರೆ ಬಹುಮುಖ್ಯವಾದ ವಿಚಾರ ಅಂದರೆ ಎರಡನೇ ಸದಸ್ಯರ ಬ್ಯಾಂಕ್ ಖಾತೆ ಅಪ್ಡೇಟ್ ಆಗಿರಬೇಕು ಆಧಾರ್ ಲಿಂಕ್ ಕೆವೈಸಿ ಎಲ್ಲಾ ಮುಗಿಸಿರಬೇಕು. ಆಗಲೇ ಈ ಪ್ರಕ್ರಿಯೆ ಸಾಧ್ಯವಾಗೋದು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ತಾಲೂಕು ಅಧಿಕಾರಿಗಳು ಅಥವಾ ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.