Physical Abuse: ಬೆಂಗಳೂರು ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ- ಯುವತಿಯ ಮೈ ಸವರಿದ ಕಾಮುಕ !!

Bengaluru crime news woman physically harrased in bengalore namma metro latest news

Physical Abuse: ಬೆಂಗಳೂರಿನ ಮೆಜೆಸ್ಟಿಕ್‌ ರೈಲು ನಿಲ್ದಾಣದಲ್ಲಿ (Majestic Metro Railway station) ಗುರುವಾರ (ಡಿಸೆಂಬರ್‌ 7) ಬೆಳಗ್ಗೆ 9.40ರ ಸುಮಾರಿಗೆ ಯುವತಿ ಲೈಂಗಿಕ ಕಿರುಕುಳಕ್ಕೆ (Physical Abuse) ಒಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಿರುಕುಳಕ್ಕೆ ಒಳಗಾದ ಯುವತಿ ಕೂಗಿಕೊಂಡಾಗ ಅಲ್ಲಿದ್ದ ಮೆಟ್ರೋ ಸಿಬ್ಬಂದಿ ಕೂಡಲೇ ಅ ಕಾಮುಕನನ್ನು ಹಿಡಿದಿದ್ದಾರೆ.

 

ಐಟಿ ಉದ್ಯೋಗಿಯಾಗಿರುವ 22 ವರ್ಷದ ಈ ಯುವತಿ ಬೆಳಗ್ಗೆ 9.40 ಗಂಟೆಗೆ ಐಟಿ ಉದ್ಯೋಗಿ ಮೆಟ್ರೋ ಹತ್ತಿದ್ದಾರೆ. ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ ಯುವತಿಗೆ ಮೆಜೆಸ್ಟಿಕ್‌ ನಿಲ್ದಾಣ ಬರುತ್ತಿದ್ದಂತೆಯೇ ಜನಸಂದಣಿ ಹೆಚ್ಚಾದಾಗ ಲೋಕೇಶ್‌ ಅಲಿಯಾಸ್‌ ಲೋಕಿ ಎಂಬಾತ, ಹಿಂಬದಿಯಲ್ಲಿ ನಿಂತು ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಕೆಳಭಾಗದಲ್ಲಿ ಮೈಗೆ ಕೈ ಆಡಿಸಿದ್ದಾನೆ. ಆರಂಭದಲ್ಲಿ ಇದು ಒತ್ತಡದಿಂದ ಆಗುತ್ತಿರುವುದು ಎಂದು ತಿಳಿದರಾದರೂ ನಂತರ ಉದ್ದೇಶಪೂರ್ವಕವಾಗಿ ಅನುಚಿತವಾಗಿ ವರ್ತಿಸುತ್ತಿರುವುದು ಗೊತ್ತಾದ ಕೂಡಲೇ ಜೋರಾಗಿ ಕೂಗಿಕೊಂಡರು. ಅಷ್ಟು ಹೊತ್ತಿಗೆ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ ಬಂದಿತ್ತು. ಇಲ್ಲಿ ರೈಲು ನಿಲ್ಲುತ್ತಿದ್ದಂತೆಯೇ ಈ ಕಾಮುಕ ಬೇಗಬೇಗನೆ ಇಳಿದು ಓಡಲು ಯತ್ನಿಸಿದ. ಆಗ ಯುವತಿ ಮತ್ತು ಸಾರ್ವಜನಿಕರ ಕೂಗು ಕೇಳಿಸಿಕೊಂಡು ಆತನನ್ನು ಅಲ್ಲೇ ಹಿಡಿದು ಹಾಕಿದರು.

ನಂತರ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಭದ್ರತಾ ಅಧಿಕಾರಿ ಪುಟ್ಟಮಾದಯ್ಯ ಮತ್ತು ಸಹಾಯಕ ಭದ್ರತಾ ಅಧಿಕಾರಿ ದಿವಾಕರ್ ಸ್ಥಳಕ್ಕೆ ಆಗಮಿಸಿ ಆರೋಪಿ ಲೊಕೇಶ್‌ನನ್ನುಲಾಕ್ ಮಾಡಿ ಉಪ್ಪಾರ ಪೇಟೆ ಪೊಲೀಸರಿಗೊಪ್ಪಿಸಿದರು. ಅಷ್ಟಲ್ಲದೆ ಉಪ್ಪಾರಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆಯೇ ಕಾಮುಕ ಲೋಕೇಶ್‌ನ ಕರಾಳ ಇತಿಹಾಸ ಬಯಲಾಗಿದೆ. ಈ ದುಷ್ಟ ಲೋಕಿಯ ಮೇಲೆ ಈ ಹಿಂದೆ ಕೂಡ ಕೆಲವು ಕೇಸ್‌ಗಳು ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಗೌತಮ್ ಗಂಭೀರ್-ಶ್ರೀಶಾಂತ್ ಜಗಳಕ್ಕೆ ಬಿಗ್ ಟ್ವಿಸ್ಟ್- ಸೋಷಿಯಲ್ ಮೀಡಿಯದಲ್ಲಿ ರಂಪ, ರಾಡಿಯಾಯ್ತು ಟೀಂ ಇಂಡಿಯಾ ಆಟಗಾರ ಟಾಕ್ ವಾರ್

ಇದನ್ನೂ ಓದಿ:

Leave A Reply

Your email address will not be published.