Kitchen Tips: ಮಹಿಳೆಯರೇ ಅಪ್ಪಿ ತಪ್ಪಿಯೂ ಈ ಪಾತ್ರೆಗಳನ್ನು ಉಲ್ಟಾ ಇಡಬೇಡಿ !! ಇಟ್ಟರೆ ತಪ್ಪಿದ್ದಲ್ಲ ಅಪಾಯ

Astrology vastu shastra kitchen rules Avoid Keeping These Utensils Upside Down In Kitchen

Kitchen vastu Tips: ಮಹಿಳೆಯರಿಗೆ ಶುಚಿ ರುಚಿಯಾಗಿ ಅಡುಗೆ ತಯಾರಿಸಿ ಮನೆಯವರ ಮನ ಗೆಲ್ಲುವ ಜೊತೆಗೆ ಅಡುಗೆ ಕೋಣೆಯನ್ನು ಕ್ಲೀನ್ ಮಾಡುವುದು ಅದಕ್ಕಿಂತ ದೊಡ್ದ ಟಾಸ್ಕ್ !! ಇದರ ಜೊತೆಗೆ ಅಡುಗೆ ಮನೆಯಲ್ಲಿ (Kitchen vastu Tips)ಪಾತ್ರೆಗಳನ್ನು ಜೋಡಿಸಿಟ್ಟರೆ ಇದು ಜೀವನದ ಮೇಲೆ ಗುಣಾತ್ಮಕ ಹಾಗೂ ಋಣಾತ್ಮಕ ಪ್ರಭಾವವನ್ನು ಬೀರುತ್ತದೆ.

ಊಟದ ಬಳಿಕ ಪಾತ್ರೆಗಳನ್ನು ತೊಳೆಯದೆ ಇಡುವ ಅಭ್ಯಾಸ ಕೆಲವರು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವು ಮನೆಗಳಲ್ಲಿ, ಪಾತ್ರೆಗಳನ್ನು ತಲೆಕೆಳಗಾಗಿ ಇಲ್ಲವೇ ತಪ್ಪಾದ ದಿಕ್ಕಿನಲ್ಲಿ ಪಾತ್ರೆಗಳನ್ನು ಇಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಸಾಮಾನ್ಯವಾಗಿ ಜನರು ಕೆಲವು ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರ ಅಥವಾ ಬಳಸಿದ ನಂತರ ತಲೆಕೆಳಗಾಗಿ ಇಡುತ್ತಾರೆ. ಈ ರೀತಿ ಮಾಡುವುದರಿಂದ ಅಶುಭ ಫಲಗಳು ಹೆಚ್ಚುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಬಾಣಲೆಯನ್ನು ತೊಳೆದು ಸ್ವಚ್ಛಗೊಳಿಸಿದ ಬಳಿಕ ತಲೆಕೆಳಗಾಗಿ ಇಡುವ ಅಭ್ಯಾಸ ಇಟ್ಟುಕೊಂಡರೆ ಇದು ಮನೆಗೆ ನಕಾರಾತ್ಮಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಪಾತ್ರೆಯನ್ನು ತೊಳೆಯದೇ ಇಡುವುದರಿಂದ, ತಲೆಕೆಳಗಾಗಿ ಇಡುವುದರಿಂದ ಕುಟುಂಬದ ಸದಸ್ಯರ ಪ್ರಗತಿಗೆ ಮಾರಕವಾಗಬಹುದು. ನಿಮ್ಮ ಮನೆಯಲ್ಲಿ ಜಗಳ ಮತ್ತು ಅಶಾಂತಿ ಕೂಡ ಉಂಟಾಗಬಹುದು.

ಅಡುಗೆಯನ್ನು ತಯಾರಿಸಿದ ನಂತರ ಸ್ವಚ್ಛವಾಗಿಡಬೇಕು ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ನೀವು ಜೀವನದಲ್ಲಿ ಬಡತನದ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಾವು ಅಡುಗೆ ಕೋಣೆಯಲ್ಲಿ ಪಾತ್ರೆಗಳನ್ನು ಇಡುವಾಗ ಎಚ್ಚರ ವಹಿಸಬೇಕು. ಪಾತ್ರೆಗಳನ್ನು ಯಾವಾಗಲೂ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ. ವಿಶೇಷವಾಗಿ ಹಿತ್ತಾಳೆ, ತಾಮ್ರ, ಉಕ್ಕು ಮತ್ತು ಕಂಚಿನ ಪಾತ್ರೆಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರ ಜೊತೆಗೆ ಬೇರೆ ಯಾವುದೇ ದಿಕ್ಕಿನಲ್ಲಿ ಇರಿಸದಿರುವುದು ಉತ್ತಮ.

ಬಿಸಿ ಪ್ಯಾನ್‌ ಇಲ್ಲವೇ ಇನ್ನಾವುದೇ ಅಡುಗೆ ತಯಾರಿಸುವ ಪ್ಯಾನ್‌ಗೆ ನೀರನ್ನು ಸುರಿಯುವುರಿಂದ ಹೊರಬರುವ ಹಬೆ ಮನೆಯೊಳಗೆ ಹೋಗುವ ಜೊತೆಗೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಪಾತ್ರೆಗಳನ್ನು ತಲೆಕೆಳಗಾಗಿ ಅಥವಾ ತಪ್ಪು ದಿಕ್ಕಿನಲ್ಲಿ ಇಟ್ಟರೆ ತಾಯಿ ಅನ್ನಪೂರ್ಣೇಶ್ವರಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ ಎನ್ನಲಾಗಿದೆ.

ರಾತ್ರಿ ವೇಳೆ ಊಟ ಮುಗಿದ ಬಳಿಕ ಪಾತ್ರೆಗಳನ್ನು ತೊಳೆಯದೆ ಹಾಗೇ ಇಡಬಾರದು. ಅದೇ ರೀತಿ ಕೆಲವು ಪಾತ್ರೆಗಳನ್ನು ನೀವು ತಲೆಕೆಳಗಾಗಿ ಇಡಬಾರದು. ಶಾಸ್ತ್ರದ ಪ್ರಕಾರ, ರೊಟ್ಟಿ ಮಾಡಿದ ಬಳಿಕ ಬಾಣಲೆಯನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು. ಇದು ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಷ್ಟೆ ಅಲ್ಲದೇ, ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ. ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಈ ವಸ್ತುಗಳನ್ನು ಮನೆಗೆ ತಂದಿಡಿ – ಲಕ್ಷೀದೇವಿ ಹೇಗೆ ಒಲಿದು ಬರುತ್ತಾಳೆ ನೋಡಿ !!

Leave A Reply

Your email address will not be published.