Udupi: ಸ್ವರ್ಣಾ ನದಿಯಲ್ಲಿ ಈಜಲು ಹೋಗಿ ಚಿನ್ನ ಕಳೆದುಕೊಂಡ ವಿದ್ಯಾರ್ಥಿ; ಕೊಲ್ಲೂರು ದೇವಿಯನ್ನು ಪ್ರಾರ್ಥಿಸಿದ ಅರ್ಧಗಂಟೆಯಲ್ಲೇ ಪವಾಡಸದೃಶವಾಗಿ ಸ್ವರ್ಣ ಕೈಗೆ!!!

Udupi news Student lost gold chain then he found chain after praying kolluru devi

Udupi: ನದಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿಯೊಬ್ಬರು ತಮ್ಮ ಲಕ್ಷಗಟ್ಟೆಲೆ ಬೆಲೆಬಾಳುವ ಚಿನ್ನದ ಸರವನ್ನು ನೀರಿನಲ್ಲಿ ಕಳೆದುಕೊಂಡಿದ್ದು, ಕೊನೆಗೆ ದಿಕ್ಕುತೋಚದೆ ಕೊಲ್ಲೂರು ಮೂಕಾಂಬಿಕೆ ದೇವಿಯನ್ನು ಪ್ರಾರ್ಥಿಸಿದ್ದು ಅರ್ಧಗಂಟೆಯಲ್ಲೇ ಚಿನ್ನದ ಸರ ದೊರಕಿರುವ ಆಶ್ಚರ್ಯಕರ ಘಟನೆಯೊಂದು ಉಡುಪಿಯಲ್ಲಿ( Udupi)ನಡೆದಿದೆ.

ಕಿಶನ್‌ ಕೋಟ್ಯಾನ್‌ ಇವರೇ ತಮ್ಮ ಸರ ಕಳೆದುಕೊಂಡು ಎಂಐಟಿ ವಿದ್ಯಾರ್ಥಿ. ಇವರು ಮಲ್ಪೆಯವರಾಗಿದ್ದು, ಸ್ನೇಹಿತರೊಂದಿಗೆ ಸ್ವರ್ಣಾ ನದಿಯಲ್ಲಿ ಈಜಲೆಂದು ಹೋಗಿದ್ದರು. ಈ ಸಂದರ್ಭದಲ್ಲಿ 3ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಎರಡು ದಿನ ಎಷ್ಟೇ ಹುಡುಕಾಡಿದರೂ ಅವರಿಗೆ ಸರ ದೊರಕಲಿಲ್ಲ.

ಕೊನೆಗೆ ಮುಳುಗುತಜ್ಞ ಈಶ್ವರ ಮಲ್ಪೆ ಸಹಾಯಕ್ಕೆ ಧಾವಿಸಿ ಬಂದರೂ ಸಿಗಲಿಲ್ಲ. ಆಗ ಕೊಲ್ಲೂರು ಮೂಂಕಾಬಿಕೆ ದೇವಿಯನ್ನು ಭಕ್ತಿಯಿಂದ ಸ್ಮರಿಸಿದ್ದಾನೆ. ಹೀಗೆ ಬೇಡಿಕೊಂಡ ಅರ್ಧ ಗಂಟೆಯಲ್ಲೇ 30 ಪೀಟ್‌ ಅಡಿಯಲ್ಲಿದ್ದ ಚಿನ್ನದ ಸರವು ಈಶ್ವರ್‌ ಮಲ್ಪೆ ಅವರಿಗೆ ದೊರಕಿದೆ. ನಿಜಕ್ಕೂ ಇದು ಆಶ್ಚರ್ಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪ್ರಿಯಕರನಿಗಾಗಿ ಗಂಡ, ಮಕ್ಕಳ ಬಿಟ್ಟು ಹೋದ ಅಂಜು, ಪಾಕ್‌ನಿಂದ ವಾಪಸ್‌; ಅಮ್ಮ ನಮಗೆ ಬೇಡ ಎಂದ ಮಕ್ಕಳು, ಎಲ್ಲಾ ಇದ್ದೂ ಅನಾಥೆ ಈಗ ಅಂಜು!

Leave A Reply

Your email address will not be published.