Laxmi Hebbalkar: ಈ ಭಾಗದ ರೈತರಿಗೆ ಭರ್ಜರಿ ಗುಡ್ ನ್ಯೂಸ್- ಜಮೀನು ಬಾಡಿಗೆ ಹೆಚ್ಚಿಸಿ ಆದೇಶ ಹೊರಡಿಸಿದ ಲಕ್ಷ್ಮೀ ಹೆಬ್ಬಾಳ್ಕರ್
Laxmi Hebbalkar: ಬೆಳಗಾವಿ ಸುವರ್ಣ ವಿಧಾನಸೌಧದ (Belagavi Suvarna Vidhana Soudha) ಸಮೀಪ ಇರುವ ರೈತರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Laxmi Hebbalkar) ಸಿಹಿ ಸುದ್ದಿ ನೀಡಿದ್ದಾರೆ. ವಿಧಾನ ಮಂಡಲ ಅಧಿವೇಶನದ ಸಂದರ್ಭ ಪ್ರತಿಭಟನೆಗೆ ನೀಡಲಾಗುವ ಜಾಗದ ಬಾಡಿಗೆ ದರವನ್ನು ದುಪ್ಪಟ್ಟು ಏರಿಕೆ ಮಾಡುವ ಮನವಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಂದಿಸಿದ್ದು, ಈ ಮೂಲಕ ರೈತರಿಗೆ ಖುಷಿಯ ಸುದ್ದಿ ನೀಡಿದ್ದಾರೆ.
ವಿಧಾನ ಮಂಡಲ ಅಧಿವೇಶನದ (Assembly Session) ಸಂದರ್ಭದಲ್ಲಿ ಪ್ರತಿ ವರ್ಷವೂ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ನಡೆಸುತ್ತವೆ. ಈ ಪ್ರತಿಭಟನೆಗೆ ಸುವರ್ಣ ವಿಧಾನಸೌಧದಿಂದ ದೂರಯಿರುವ ಜಮೀನುಗಳಲ್ಲಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗುತ್ತದೆ. ಇಲ್ಲಿ ಬಂದು ಪ್ರತಿಭಟನೆ ನಡೆಸುವವರಿಗೆ ಜಾಗಕ್ಕೆ ಇಷ್ಟು ಎಂದು ದರವನ್ನು ನಿಗದಿಪಡಿಸಿ ಆ ಹಣವನ್ನು ಅವರು ಜಮೀನು ಮಾಲೀಕರಿಗೆ ನೀಡಬೇಕಾಗಿತ್ತು. ಪ್ರತಿಭಟನೆಗೆ ನೀಡಲಾಗುವ ಜಾಗದ ಬಾಡಿಗೆ ದರವನ್ನು ಏರಿಕೆ ಮಾಡಿ ಎಂದು ಹಲವು ವರ್ಷಗಳಿಂದ ರೈತರು ಮನವಿ ಮಾಡುತ್ತಲೇ ಬರುತ್ತಿದ್ದರು. ಈಗ ವಿವಿಧ ಪ್ರತಿಭಟನೆಗಳಿಗೆ ಬಳಸಲಾಗುವ ರೈತರ ಜಮೀನಿನ ಬಾಡಿಗೆಯನ್ನು ಹೆಚ್ಚಳ ಮಾಡಿದ್ದು, ಈ ಹಿಂದೆ ಬರುತ್ತಿದ್ದ ಬಾಡಿಗೆ ದರಕ್ಕಿಂತ ದುಪ್ಪಟ್ಟು ಬರುವಂತೆ ಮಾಡಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಅಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ.
ಇದನ್ನು ಓದಿ: Pavitra Lokesh: ಪವಿತ್ರ ಲೋಕೇಶ್ ಜೊತೆ ಹನಿಮೂನ್ ಹೊರಟ 63 ವರ್ಷದ ನಟ ನರೇಶ್ – ಹೊರಟಿದ್ದಾರ್ರೂ ಎಲ್ಲಿಗೆ ?!