Actor Rishab Shetty: ಪೋಲೀಸರಿಂದ ಗೋವಾದಿಂದ ಬರುತ್ತಿದ್ದ ರಿಷಬ್ ಶೆಟ್ಟಿ ಕಾರು ತಪಾಸಣೆ – ಕಾರಣ ಇದೇನಾ?!

Entertainment Sandalwood news actor Rishabh Shetty car checking at majali check post

Share the Article

Actor Rishab Shetty: ನಟ, ನಿರ್ದೇಶಕ ರಿಷಬ್ ಶೆಟ್ಟಿ(Actor Rishab Shetty) ಗೋವಾದಲ್ಲಿ ಪ್ರತಿಷ್ಠಿತ IFFI ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಖುಷಿಯಲ್ಲಿ ಮುಳುಗಿದ್ದ ರಿಷಬ್ ಶೆಟ್ಟಿ ಅವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.

ಗೋವಾ 54ನೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟ ರಿಷಬ್ ಶೆಟ್ಟಿ ಅವರಿಗೆ ಕಾಂತಾರ ಸಿನಿಮಾಗಾಗಿ ಪ್ರಶಸ್ತಿ ಲಭಿಸಿದೆ. ‘ಕಾಂತಾರ’ ಸಿನಿಮಾಗಾಗಿ(Kantara Cinema)ರಿಷಬ್ ಶೆಟ್ಟಿ ಸಿಲ್ವರ್ ಪೀಕಾಕ್ ಸ್ಪೆಷಲ್ ಜ್ಯೂರಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಪಡೆದು ಕುಂದಾಪುರಕ್ಕೆ ಕಾರಾವಾರ ಮಾರ್ಗವಾಗಿ ಹಿಂತಿರುಗುತ್ತಿದ್ದ ಸಂದರ್ಭ ಅಬಕಾರಿ ಇಲಾಖೆ ಸಿಬ್ಬಂದಿಯವರು ರಿಷಬ್ ಶೆಟ್ಟಿ ಅವರ ಕಾರು ತಡೆದಿದ್ದಾರೆ.

ಇದನ್ನು ಓದಿ: Crop compensation: ಬೆಳೆ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ – ರೈತರ ಖಾತೆ ಸೇರಲಿದೆ ಇಷ್ಟು ಹಣ !!

ಹೌದು!!ಗೋವಾದಿಂದ ಬರುತ್ತಿದ್ದ ಅವರ ಕಾರನ್ನು ಕಾರವಾರದ ಮಾಜಾಳಿ ಚೆಕ್‌ ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ನಟ ರಿಷಬ್ ಶೆಟ್ಟಿ ಅವರ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ನಿಯಮದನುಸಾರ ಗೋವಾದಿಂದ ರಾಜ್ಯಕ್ಕೆ ಬರುವ ಪ್ರತಿ ವಾಹನವನ್ನು ತಡೆದು ಪರಿಶೀಲನೆ ನಡೆಸಲಾಗುತ್ತದೆ. ಇದೇ ರೀತಿಯಲ್ಲಿ ರಿಶಬ್ ಅವರ ಕಾರನ್ನು ತಡೆದು ತಪಾಸಣೆ ನಡೆಸಲಾಗಿದೆ. ಕಾರು ತಪಾಸಣೆ ನಡೆಸಿದ ಪೊಲೀಸ್ ಸಿಬ್ಬಂದಿ ಒಳಗಿರುವವರು ರಿಷಬ್ ಶೆಟ್ಟಿ ಎಂದು ತಿಳಿದು ಫುಲ್ ಖುಷ್ ಆಗಿದ್ದಾರೆ. ಕಾರಿನಿಂದ ಇಳಿದ ರಿಷಬ್ ಶೆಟ್ಟಿ ಸಿಬ್ಬಂದಿಯನ್ನು ಮಾತನಾಡಿಸಿ ಅವರ ಜೊತೆಗೆ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದಾರಂತೆ.

ಇದನ್ನೂ ಓದಿ: Belthangady: ಹೃದಯಾಘಾತದಿಂದ ವಿವಾಹಿತೆ ಮೃತ್ಯು!

Leave A Reply