Home News Kannada Serial Controversy: ಕನ್ನಡದ ಖ್ಯಾತ ಸೀರಿಯಲ್‌ ನಟ – ನಟಿಯ ಮಧ್ಯೆ ಅಫೇರ್? ಸೆಟ್ಟಲ್ಲಿ...

Kannada Serial Controversy: ಕನ್ನಡದ ಖ್ಯಾತ ಸೀರಿಯಲ್‌ ನಟ – ನಟಿಯ ಮಧ್ಯೆ ಅಫೇರ್? ಸೆಟ್ಟಲ್ಲಿ ನಡೆದೇ ಹೋಯ್ತು ಅವಾಂತರ !! ಹೆಂಡತಿಯಿಂದ ಬಿತ್ತು ಚಪ್ಲಿ ಏಟು

Kannada Serial Controversy

Hindu neighbor gifts plot of land

Hindu neighbour gifts land to Muslim journalist

Kannada Serial Controversy : ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ(Kannada Serial Controversy) ಧಾರಾವಾಹಿಯ ವಿವಾಹಿತ ನಟ ಅದೇ ಸೀರಿಯಲ್ ನ ಯುವ ನಟಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ಕೆಲವು ಬಲ್ಲ ಮೂಲಗಳ ಪ್ರಕಾರ, ಕನ್ನಡದ ಜನಪ್ರಿಯ ಧಾರಾವಾಹಿ ಸೆಟ್ ನಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಧಾರಾವಾಹಿಗೆ ನಾಯಕನ ಪತ್ನಿ ಕೂಡ ನಿರ್ಮಾಪಕಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ನಟ ಮತ್ತು ನಟಿಯ ಮಧ್ಯೆ ಸಂಬಂಧ ಬೆಳೆದಿದ್ದು, ಇದು ಸೀರಿಯಲ್ ಸೆಟ್ ನಲ್ಲಿದ್ದ ಮಂದಿಗೂ ಗೊತ್ತಿತ್ತು ಎನ್ನಲಾಗಿದೆ. ಇವರಿಬ್ಬರ ಅಫೇರ್ ಬಗ್ಗೆ ತಿಳಿದ ಧಾರಾವಾಹಿಯ ನಾಯಕನ ಹೆಂಡತಿ ಸೆಟ್ ನಲ್ಲಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಧಾರಾವಾಹಿಯ ನಾಯಕಿಗೆ ಎಲ್ಲರ ಮುಂದೆ ಸೆಟ್ಟಿನಲ್ಲೇ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಈ ಘಟನೆಯ ನಂತರ ಧಾರಾವಾಹಿಯ ನಾಯಕಿ ಸೀರಿಯಲ್ನಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮನರಂಜನಾ ವಾಹಿನಿಗೆ ಪತ್ರ ಬರೆದು ಈ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಆದಷ್ಟು ಬೇಗ ಸೀರಿಯಲ್ ನಲ್ಲಿ ಮುಗಿಸಲು ವಾಹಿನಿ ತೀರ್ಮಾನ ಮಾಡಿದೆ. ಈ ನಡುವೆ, ನಟಿ ಸಿನಿಮಾರಂಗಕ್ಕೆ ಸಹ ಕಾಲಿಟ್ಟಿದ್ದು, ಚೊಚ್ಚಲ ಸಿನಿಮಾ ರಿಲೀಸ್ ಆಗಬೇಕಾಗಿದೆ. ಕಿರುತೆರೆ ಲೋಕದಲ್ಲಿ ಈ ವಿಚಾರದ ಭಾರೀ ಚರ್ಚೆಗೆ ಕಾರಣವಾಗಿದೆ.ಸದ್ಯ, ಈ ನಟ ಯಾರು ಎಂಬುದು ರೀವಿಲ್ ಆಗಿಲ್ಲ. ಈ ಕುರಿತು ವಾಹಿನಿ ಕೂಡ ಏನು ಗುಟ್ಟು ಬಿಟ್ಟು ಕೊಟ್ಟಿಲ್ಲ.

ಇದನ್ನು ಓದಿ: Cristiano Ronaldo: ಸೌದಿಯಲ್ಲಿ ರೊನಾಲ್ಡೊ ಬದುಕು ಹೇಳೋ ಮ್ಯೂಸಿಯಮ್ ಅನಾವರಣ- ರೊನಾಲ್ಡೊ ಹೇರ್ ಸ್ಟೈಲ್ ನೋಡಿ ಫ್ಯಾನ್ಸ್ ಏನಂದ್ರು ಗೊತ್ತಾ?!