White Hair Home Remedies: ಕೂದಲನ್ನು ಕಪ್ಪಾಗಿಸಲು ಈ ಮೂರೇ ಮೂರು ವಸ್ತು ಸಾಕು- ಜೀವಮಾನದಲ್ಲಿ ಬಿಳಿ ಕೂದಲೇ ಬರೋದಿಲ್ಲ!!

White Hair Home Remedies: ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿ ಬಣ್ಣಕ್ಕೆ ತಿರುಗಲು, ನೀವು ಬಳಸುವ ರಾಸಾಯನಿಕ ಹೇರ್ ಕೇರ್ ಕಾರಣ ಆಗಿರುತ್ತೆ. ಆದರೆ ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಇವುಗಳನ್ನು ಸೇರಿಸುವುದರಿಂದ ಕೂದಲು ಬಿಳಿಯಾಗುವುದನ್ನು ತಪ್ಪಿಸಬಹುದಾಗಿದೆ. ಹೌದು, ಯಾವುದೇ ಖರ್ಚು ಇಲ್ಲದೇ ಕೆಲವು ಮನೆಮದ್ದುಗಳ ಸಹಾಯದಿಂದ ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಮತ್ತೇ ಕಪ್ಪಾಗಿಸಬಹುದು(White Hair Home Remedies) .

 

ಚಹಾ ಎಲೆಗಳು: ಕೂದಲಿನ ಆರೋಗ್ಯಕ್ಕೆ ಚಹಾ ಎಲೆಗಳು ತುಂಬಾ ಪ್ರಯೋಜನಕಾರಿ. ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ತಣ್ಣಗಾಗಲು ಬಿಡಿ. ನೀರು ತಣ್ಣಗಾದಾಗ ಕೂದಲಿನ ಬುಡಕ್ಕೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. ಸುಮಾರು ಒಂದು ಗಂಟೆಯ ನಂತರ, ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ.

ಮೆಂತ್ಯ ಬೀಜಗಳು:
ಮೆಂತ್ಯ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುತ್ತದೆ. ಎರಡು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ಪುಡಿಮಾಡಿ ಕೂದಲಿನ ಬೇರುಗಳಿಗೆ ಹಚ್ಚಿ ನಂತರ ತಲೆ ಸ್ನಾನ ಮಾಡಿ. ಅಥವಾ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ಹೇರ್ ಪ್ಯಾಕ್ ಆಗಿಯೂ ಬಳಸಬಹುದು.

ಆಮ್ಲಾ ಅಥವಾ ನೆಲ್ಲಿಕಾಯಿ: ಕೂದಲನ್ನು ಬಲಪಡಿಸಲು, ಕಪ್ಪಾಗಿಡಲು ಮತ್ತು ಉದುರುವಿಕೆಯನ್ನು ತಡೆಯಲು ಸಹಾಯಕ. ಆಮ್ಲಾವನ್ನು ಗೋರಂಟಿ ಜೊತೆ ಬಳಸಬಹುದು. ಕೂದಲಿನ ಬೇರುಗಳಿಗೆ ತಾಜಾ ಆಮ್ಲಾ ರಸವನ್ನು ಹಚ್ಚಬಹುದು.

Leave A Reply

Your email address will not be published.