BBMP ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹೃದಯಾಘಾತದಿಂದ ನಿಧನ !

Share the Article

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿಯವರು (Ambikapati) ಇಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅಂಬಿಕಾಪತಿ ನಿವಾಸಕ್ಕೆ ಕಳೆದ ತಿಂಗಳು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಅವರ ಮನೆಯಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾದ ಬಳಿಕ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಹಾಗಾಗಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಸಂಜೆ ಅವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂಬುದು ತಿಳಿದುಬಂದಿದೆ.

ಅಂಬಿಕಾಪತಿ ಮನೆಯಲ್ಲಿ ಐಟಿ ರೇಡ್ (IT Raid) ವೇಳೆ 44 ಕೊಟಿ ರೂ. ಪತ್ತೆಯಾಗಿತ್ತು. ಈ ಘಟನೆಯಾದ ಒಂದೇ ತಿಂಗಳಲ್ಲೇ ಅಂಬಿಕಾಪತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದೀಗ ಅಂಬಿಕಾಪತಿ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ದಿದ್ದು ಮುಂದಿನ ಕಾರ್ಯ ನಡೆಯಲಿದೆ.

ಇದನ್ನು ಓದಿ: Rape on Child: ಮಗಳ ಮೇಲೆ ಪ್ರಿಯಕರನಿಂದ ಲೈಂಗಿಕ ದೌರ್ಜನ್ಯ ಮಾಡಲು ಅವಕಾಶ ಮಾಡಿದ ತಾಯಿಗೆ ಶಿಕ್ಷೆ ಪ್ರಕಟ; ಕೋರ್ಟ್‌ ನೀಡಿದ ಶಿಕ್ಷೆಯಾದರೂ ಏನು ಗೊತ್ತೇ?

Leave A Reply