Bigg Boss Wild Card Entry: ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ- ದೊಡ್ಮನೆ ಬಂದ್ರು ನೋಡಿ ಕತರ್ನಾಕ್ ಜೋಡಿ

Bigg Boss Wild Card Entry: ಖ್ಯಾತ ಬಿಗ್ ಬಾಸ್ ಶೋ ನಲ್ಲಿ ಪ್ರತೀ ಸೀಸನ್ ನಲ್ಲೂ ಬಿಗ್‌ ಬಾಸ್‌ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಇರುತ್ತೆ. ಇದೀಗ ಬಿಗ್ ಬಾಸ್ ಸೀಸನ್ 17 ನ್ನು ಬಾಲಿವುಡ್‌ ಭಾಯ್‌ಜಾನ್‌ ಸಲ್ಮಾನ್‌ ಖಾನ್‌ ನಡೆಸಿಕೊಡುವ ಬಿಗ್‌ ಬಾಸ್‌ ಶೋ ನಲ್ಲಿ ಮನೆಗೆ ವೈಲ್ಡ್ ಕಾರ್ಡ್ (Bigg Boss wild card entry) ಮೂಲಕ ಹೊಸ ಸ್ಪರ್ಧಿಗಳ ಎಂಟ್ರಿಯಾಗಲಿದೆ ಎನ್ನಲಾಗುತ್ತಿದೆ. ಹೌದು, ರಾಖಿ ಸಾವಂತ್ ಅವರು ತಮ್ಮ ವಿಚ್ಛೇದಿತ ಪತಿ ಆದಿಲ್ ಖಾನ್ ದುರಾನಿಯೊಂದಿಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

 

ವರದಿಗಳ ಪ್ರಕಾರ, ಬಿಗ್‌ ಬಾಸ್‌ ಹಿಂದಿ ಸೀಸನ್‌ 17 ರ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ನಡೆಯಲಿದೆ. ಇದು ಆಟಕ್ಕೆ ಹೊಸ ತಿರುವು ನೀಡಲಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಪರಿಚಿತ ಮುಖವಾಗಿರುವ ವಿವಾದಗಳಿಂದ ಸುದ್ದಿಯಲ್ಲಿರುವ, ಈ ಹಿಂದೆ ಬಿಗ್ ಬಾಸ್ 1, 14 ಮತ್ತು 15 ರಲ್ಲಿ ಭಾಗವಹಿಸಿದ ರಾಖಿ ಸಾವಂತ್‌ ತನ್ನ ಬೋಲ್ಡ್ ವ್ಯಕ್ತಿತ್ವದಿಂದ ನಿರಂತರವಾಗಿ‌ ವೀಕ್ಷಕರ ಗಮನ ಸೆಳೆದವರು.

ಒಂದು ಸಮಯದಲ್ಲಿ ಹಾಲು ಜೇನಿನಂತೆ ಇದ್ದು, ಇನ್ನೊಂದು ಕಾಲ ಹಾವು ಮುಂಗುಸಿ ಆಗಿದ್ದ ಜೋಡಿ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ಒಟ್ಟಿಗೆ ಬಿಗ್‌ ಬಾಸ್‌ ಶೋಗೆ ಪ್ರವೇಶಿಸಿದರೆ ಯಾವ ರೀತಿ ಇರುತ್ತಾರೆ ಅನ್ನೋದು ಬಹಳ ಕುತೂಹಲಕಾರಿಯಾಗಿದೆ.

ಇದನ್ನು ಓದಿ: Mandya: ಸೊಸೆಯ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಸಾವು!!!

Leave A Reply

Your email address will not be published.