Wearing Hijab Row: ದನ ತಿನ್ನುತ್ತೇನೆಂದ ವಿದ್ಯಾರ್ಥಿನಿ- ಶಿಕ್ಷಕನಿಂದ ನಡೆದೇ ಹೋಯ್ತು ಘೋರ ಕೃತ್ಯ !!

wearing hijab Row: ತಮಿಳುನಾಡಿನ ಅಶೋಕಪುರಂನ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮದ ಕಾರಣ ನೀಡಿ ಬೀಫ್(Beef)ತಿನ್ನುವ ನೆಪಕ್ಕಾಗಿ ಶಿಕ್ಷಕರು ವಿದ್ಯಾರ್ಥಿಯೋರ್ವನಿಗೆ ಕಿರುಕುಳ ನೀಡಿ, ಹಿಜಾಬ್‌ ನಿಂದ ಶೂ(wearing hijab Row) ಪಾಲಿಶ್ ಮಾಡಿಸಿ ಥಳಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ತಮಿಳುನಾಡಿನ ಅಶೋಕಪುರಂನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಿಬ್ಬರು ಗೋಮಾಂಸ ತಿನ್ನುವ ಅಭ್ಯಾಸ ಹಾಗೂ ತಮ್ಮ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು 7 ನೇ ತರಗತಿಯ ಬಾಲಕಿಯ ಪೋಷಕರು ಅಲ್ಲಿನ ಮುಖ್ಯ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಇದರ ಜೊತೆಗೆ ಶಿಕ್ಷಕರಾದ ಅಭಿನಯ ಹಾಗೂ ರಾಜ್ ಕುಮಾರ್ ತಮ್ಮ ಮಗಳಿಗೆ ಹಿಜಾಬ್‌ನಿಂದ ಶೂ ಪಾಲಿಶ್ ಮಾಡಲು ಕೂಡ ಬಲವಂತ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಹಿಜಾಬ್ ಧರಿಸಿ ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕಿ ಇಷ್ಟಪಡುತ್ತಿರಲಿಲ್ಲ ಎನ್ನಲಾಗಿದೆ. ಕಳೆದ ಕೆಲವು ತಿಂಗಳಿಂದ ಪರೋಕ್ಷವಾಗಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಪೋಷಕರೊಬ್ಬರ ದೂರಿನ ಅನುಸಾರ, ವಿದ್ಯಾರ್ಥಿನಿಯ ಉದ್ಯೋಗದ ಬಗ್ಗೆ ಮಗಳಲ್ಲಿ ಶಿಕ್ಷಕರು ಕೇಳಿದ್ದು, ಗೋಮಾಂಸ ಮತ್ತು ಮಾಂಸದ ಅಂಗಡಿ ನಡೆಸುತ್ತಿದ್ದೇನೆ ಎಂದು ಮಗು ಹೇಳಿದ್ದನ್ನು ಕೇಳಿದ ಬಳಿಕ ಶಿಕ್ಷಕರು ಮಗುವಿಗೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಮ್ಮ ಆಹಾರ ಪದ್ಧತಿಯ ಗೋಮಾಂಸ ಸೇವನೆಯನ್ನು ಕೂಡ ಶಿಕ್ಷಕರು ಟೀಕಿಸಿದ್ದಾರೆ. ಸದ್ಯ, ಶಾಲಾ ಆಡಳಿತ ಮಂಡಳಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದ್ದು,ಪೋಷಕರಿಂದ ದೂರನ್ನು ಸ್ವೀಕರಿಸಿದ್ದು, ತನಿಖೆಗೆ ಆದೇಶಿಸುವುದಾಗಿ ಮುಖ್ಯ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

 

ಇದನ್ನು ಓದಿ: Cauvery Water Dispute: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತ- ಇಷ್ಟು ನೀರು ಬಿಡಲೇಬೇಕು ಎಂದ CWRC

Leave A Reply

Your email address will not be published.