Home Latest Sports News Karnataka ICC World Cup 2023: ಕಪ್ ಕೈಗೆ ಬಂದಿದ್ದೆ ಬಂದಿದ್ದು, ಯಪ್ಪಾ.. ಬಿಯರ್’ನ ಎಲ್ಲಿಗೆಲ್ಲಾ ...

ICC World Cup 2023: ಕಪ್ ಕೈಗೆ ಬಂದಿದ್ದೆ ಬಂದಿದ್ದು, ಯಪ್ಪಾ.. ಬಿಯರ್’ನ ಎಲ್ಲಿಗೆಲ್ಲಾ ಹಾಕಿ ಕುಡಿದ್ರು ಗೊತ್ತಾ ಈ ಆಸ್ಟ್ರೇಲಿಯನ್ನರು ?!

ICC World Cup 2023

Hindu neighbor gifts plot of land

Hindu neighbour gifts land to Muslim journalist

ICC World Cup 2023 : 2023ರ ವಿಶ್ವ ಕಪ್ನಲ್ಲಿ (ICC World Cup 2023) ಚಾಂಪಿಯನ್ ಪಟ್ಟ ಗೆದ್ದು ಬೀಗಿದ ಆಸ್ಟ್ರೇಲಿಯಾ ತಂಡದ ಆಟಗಾರರು ಶೂನಲ್ಲಿ ಬಿಯರ್ ಹಾಕಿ ಕುಡಿದಿದ್ದಾರೆ ಎಂಬ ವಿಡಿಯೊ ವೈರಲ್ ಆಗಿ ಸಂಚಲನ ಮೂಡಿಸಿದೆ.

ICC World Cup 2023

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ (Australia Cricket Team) ಚಾಂಪಿಯನ್ ಆಗಿ ಹೊಮ್ಮಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ಭಾರತ ವಿರುದ್ಧ ಗೆದ್ದು ಬೀಗಿದ ಕಾಂಗರೂ ಪಡೆ ಆರನೇ ಬಾರಿ ಟ್ರೋಫಿ ಗೆದ್ದ ಹೆಮ್ಮೆಯ ಗರಿಮೆಯನ್ನು ತನ್ನೊಡಲಿಗೆ ಬಾಚಿಕೊಂಡಿದೆ. ಟ್ರೋಫಿ ಗೆದ್ದ ಬಳಿಕ ಕೆಲ ಆಸ್ಟ್ರೇಲಿಯಾ ಆಟಗಾರರ ಸಂಭ್ರಮಾಚರಣೆ ಜೋರಾಗಿದೆ.
ಆಸ್ಟ್ರೇಲಿಯಾ ತಂಡ 2023ನೇ ಆವೃತ್ತಿಯ ವಿಶ್ವ ಕಪ್ (ICC World Cup 2023)ಭಾರತ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿದೆ. ಈ ಗೆಲುವಿನ ಬಳಿಕ ಆಸ್ಟ್ರೇಲಿಯಾ ತಂಡದ ಆಟಗಾರರು ಸಂಭ್ರಮಾಚರಣೆಯಲ್ಲಿ ಮುಳುಗಿರುವ ಅನೇಕ ವಿಡಿಯೊಗಳು ಹರಿದಾಡುತ್ತಿವೆ. ಆಸೀಸ್ ಪಡೆಯ ಆಟಗಾರರು ಶೂ ಒಳಗೆ ಬಿಯರ್ ಹಾಕಿ ಕುಡಿಯುವ ವಿಡಿಯೊವೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಆಸ್ಟ್ರೇಲಿಯಾದ ಆಟಗಾರರಾದ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ತಮ್ಮ ಚೊಚ್ಚಲ ಟಿ 20 ವಿಶ್ವಕಪ್ ವಿಜಯವನ್ನು ಶೂ ಕುಡಿದು ಆಚರಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಮ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ವಿಡಿಯೊ 2023ರ ವಿಶ್ವ ಕಪ್ ಗೆದ್ದ ವೀಡಿಯೋ ಎಂದು ಅಂದಾಜಿಸಲಾಗಿತ್ತು. ಆದರೆ ವಾಸ್ತವವಾಗಿ ಇದು 2021ರ ಟಿ20 ವಿಶ್ವ ಕಪ್ನಲ್ಲಿ ಚಾಂಪಿಯನ್ ಪಟ್ಟ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರು ಮಾಡಿದ ಸಂಭ್ರಮಾಚರಣೆಯಾಗಿದೆ. ಈ ವಿಡಿಯೊದಲ್ಲಿ ಕಾಣುವ ಮ್ಯಾಥ್ಯೂ ವೇಡ್ 2023ರ ವಿಶ್ವ ಕಪ್ನಲ್ಲಿ ಆಸ್ಟ್ರೇಲಿಯಾ ತಂಡದಲ್ಲಿರಲಿಲ್ಲ. ಇದರಿಂದಾಗಿಯೇ ಇದು ಹಳೆಯ ವೀಡಿಯೋ ಎಂಬುದು ಖಾತ್ರಿಯಾಗಿದೆ.

ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ನವೆಂಬರ್ 15, 2021 ರಂದು ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಆದರೆ ಈಗ ಶೇರ್ ಆಗಿರುವ ವಿಡಿಯೊದಲ್ಲಿ ಐಸಿಸಿ ಪುರುಷರ ಟಿ 20 ವಿಶ್ವಕಪ್ 2021 ರ ಲೋಗೋವನ್ನು ಇಮೋಜಿಗಳಿಂದ ಮರೆ ಮಾಡಿರುವ ಹಿನ್ನೆಲೆ ಹೆಚ್ಚಿನವರಿಗೆ ಇದು ಹಳೆಯ ವೀಡಿಯೋ ಎಂಬುದು ಗೊತ್ತಾಗಿಲ್ಲ.

ಇದನ್ನೂ ಓದಿ: Electric Supply For Pumpset:ರಾಜ್ಯ ರೈತರಿಗೆ ಇಂಧನ ಇಲಾಖೆಯಿಂದ ಸಖತ್ ಗುಡ್ ನ್ಯೂಸ್- ವಿದ್ಯುತ್ ಪೂರೈಕೆ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್