Smartphone Technics: ಮೊಬೈಲ್ ಬಳಕೆದಾರರೇ ಗಮನಿಸಿ, ನಿಮ್ಮ ಕರೆ, ಸಂದೇಶ ಯಾರಾದರೂ ರಹಸ್ಯವಾಗಿ ಕೇಳುತ್ತಿದ್ದಾರಾ? ಈ ಐದು ಸಂಖ್ಯೆ ಡಯಲ್ ಮಾಡಿ ತಿಳಿಯಿರಿ!
Smartphone Technics: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇಂದಿನ ಕಾಲದಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಸಾಧನಗಳ ಬಳಕೆ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಿಯೂ ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ತಂತ್ರಜ್ಞಾನ (Technology) ಬೆಳೆದಂತೆ ಭದ್ರತೆ ಕೂಡ ಮಹತ್ವ ಪಡೆದುಕೊಂಡಿದೆ.
ಸ್ಮಾರ್ಟ್ ಫೋನ್ ಗಳಲ್ಲಿ (Smart phone)ವೈಯಕ್ತಿಕ ವಿವರಗಳು ಮತ್ತು ಬ್ಯಾಂಕಿಂಗ್ ಸಂಬಂಧಿತ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತದೆ. ಒಂದು ವೇಳೆ ಸ್ಮಾರ್ಟ್ಫೋನ್ ಅನ್ನು ಯಾರಾದರೂ ಹ್ಯಾಕ್ (Hacking)ಮಾಡಿದರೆ, ನಾವು ತೊಂದರೆಗೆ ಸಿಲುಕುವ ಸಾಧ್ಯತೆಗಳಿವೆ. ಹೀಗಾಗಿ, ಸ್ಮಾರ್ಟ್ಫೋನ್ನಲ್ಲಿ ಭದ್ರತಾ ಲಾಕ್ (Smartphone Safety Measures)ಅನ್ನು ಇಟ್ಟುಕೊಳ್ಳುವುದರ ಜೊತೆಗೆ ಕಾಲಕಾಲಕ್ಕೆ ನಿಮ್ಮ ಸೆಟ್ಟಿಂಗ್ಗಳನ್ನು ಪರಿಶೀಲಿಸುವುದು ಅವಶ್ಯಕವಾಗಿದೆ.
ನಿಮ್ಮ ಕರೆ ಅಥವಾ ಸಂದೇಶವನ್ನು ಯಾರಾದರೂ ಕೇಳುತ್ತಿದ್ದಾರೆಯೇ ಇಲ್ಲವೇ ನೋಡುತ್ತಿದ್ದಾರೆಯೇ ಎಂದು ತಿಳಿಯಲು, ನಿಮ್ಮ ಮೊಬೈಲ್ ಫೋನ್ ನಿಂದ ನೀವು ಐದು ಸಂಖ್ಯೆಗಳನ್ನು ಡಯಲ್ ಮಾಡಿದರೆ ನಿಮಗೆ ತಿಳಿಯಲಿದೆ.
* ನೀವು ಫೋನ್ ಬುಕ್ ಗೆ ಹೋಗಿ *#61# ಡಯಲ್ ಮಾಡಬೇಕು.
* ನೀವು ಇದನ್ನು ಕರೆ ಮಾಡಿದ ತಕ್ಷಣ ಒಂದು ಪಾಪ್ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ.
* ಇಲ್ಲಿ ಸೇವೆಯನ್ನು ಫಾರ್ವರ್ಡ್ ಮಾಡಿದರೆ, ನಿಮ್ಮ ರಹಸ್ಯ ಕರೆ ಅಥವಾ ಸಂದೇಶವನ್ನು ಯಾರಾದರೂ ಕೇಳಬಹುದು ಮತ್ತು ನೋಡಬಹುದು.
* ವಾಸ್ತವವಾಗಿ, ಕರೆ ಫಾರ್ವರ್ಡಿಂಗ್ ಸಮಯದಲ್ಲಿ, ನೀವು ನೆಟ್ವರ್ಕ್ ಪ್ರದೇಶದಲ್ಲಿ ಇಲ್ಲದಿದ್ದಾಗ ಇಲ್ಲವೇ ಕರೆ ಸ್ವೀಕರಿಸದೆ ಇದ್ದಾಗ, ನಿಮ್ಮ ಕರೆಯನ್ನು ಮತ್ತೊಂದು ಸಂಖ್ಯೆಗೆ ಫಾರ್ವರ್ಡ್ ಮಾಡಲಾಗುತ್ತದೆ.
* ಈ ಕರೆಯನ್ನು ಸ್ವೀಕರಿಸುವ ವ್ಯಕ್ತಿಯು ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಸಂಭಾಷಣೆಯನ್ನು ಕೇಳಬಹುದು.
* ಇದೇ ರೀತಿ, ಸಂದೇಶಗಳನ್ನು ಮತ್ತೊಂದು ಸಂಖ್ಯೆಗೆ ಫಾರ್ವರ್ಡ್ ಮಾಡಲಾಗುತ್ತದೆ. ಹೀಗಾಗಿ, ನಿಮ್ಮ ಯಾವುದೇ ಮಾಹಿತಿಯನ್ನು ಮತ್ತೊಂದು ಸಂಖ್ಯೆಗೆ ಫಾರ್ವರ್ಡ್ ಮಾಡುತ್ತಿದ್ದಲ್ಲಿ ಅದನ್ನು ತಕ್ಷಣ ನಿರ್ಬಂಧಿಸಬೇಕಾಗುತ್ತದೆ.
ನೀವು ಈ ರೀತಿ ನಿರ್ಬಂಧಿಸಬಹುದು
* ನಿಮ್ಮ ಕರೆ ಇಲ್ಲವೇ ಸಂದೇಶಗಳನ್ನು ಫಾರ್ವರ್ಡ್ ಮಾಡಿದ್ದರೆ, ನೀವು ಅದನ್ನು ನಿಲ್ಲಿಸಲು ಬಯಸಿದ್ದಲ್ಲಿ ನೀವು #002# ಅನ್ನು ಡಯಲ್ ಮಾಡಬೇಕು.
* ಇದರ ನಂತರ, ಪಾಪ್‌ಅಪ್ ಕಾಣಿಸಿಕೊಳ್ಳಲಿದ್ದು, ಅದರಲ್ಲಿ ನಿಮ್ಮ ಎಲ್ಲಾ ಫಾರ್ವರ್ಡ್ ಮಾಡಿದ ಸೇವೆಗಳನ್ನು ನಿಲ್ಲಿಸಲಾಗಿದೆ ಇಲ್ಲವೇ ಫಾರ್ವರ್ಡ್ ಮಾಡಿದ ಯಾವುದೇ ಸೇವೆಯನ್ನು ನಿಲ್ಲಿಸಲಾಗಿದೆ ಎಂದು ಬರೆದು ರಿಪ್ಲೈ ಮಾಡಬೇಕಾಗುತ್ತದೆ.
ಇದನ್ನು ಓದಿ: Agricultural News: ನಿಮ್ಮ ಜಮೀನು, ಕೃಷಿ ಭೂಮಿಗೆ ದಾರಿ ಇದೆಯೋ ಇಲ್ಲವೇ ಎಂದು ಇನ್ಮುಂದೆ ಮೊಬೈಲ್ ನಲ್ಲೇ ತಿಳಿಯಬಹುದು!