Agricultural News: ನಿಮ್ಮ ಜಮೀನು, ಕೃಷಿ ಭೂಮಿಗೆ ದಾರಿ ಇದೆಯೋ ಇಲ್ಲವೇ ಎಂದು ಇನ್ಮುಂದೆ ಮೊಬೈಲ್ ನಲ್ಲೇ ತಿಳಿಯಬಹುದು!

Agriculture News: ಸರ್ಕಾರದಿಂದ
ಕೃಷಿ ಜಮೀನು ಹೊಂದಿದವರಿಗೆ ಸಿಹಿ ಸುದ್ದಿ ನೀಡಲಾಗಿದೆ. ಕೃಷಿಕರು (farmers) ತಮ್ಮ ಜಮೀನಿಗೆ (Agriculture land) ಹೋಗಲು ಕಾಲುದಾರಿ ಹೊಂದಿರುವುದು ಅಗತ್ಯವಾಗಿದೆ. ಅಂತಹ ಸಂದರ್ಭದಲ್ಲಿ ಕೃಷಿ ಭೂಮಿಗೆ ಬೇಕಾಗಿರುವ ಅಗತ್ಯ ಉಪಕರಣಗಳನ್ನು ಸಾಗಿಸಲು ಮೊದಲಾದ ವಾಹನ (vehicle) ಕೃಷಿ ಭೂಮಿಯವರೆಗೆ (agriculture land) ಕಾಲು ದಾರಿ (Road), ಬೇಕಾಗುತ್ತದೆ.

 

ಸದ್ಯ ಈ ಕಾಲುದಾರಿ ಪಡೆದುಕೊಳ್ಳುವುದಕ್ಕಾಗಿ ರೈತರು ಹಾಗೂ ಖಾಸಗಿ ಜಮೀನಿನ (Private Property) ಮಾಲೀಕರ ನಡುವೆ ಸಾಕಷ್ಟು ತಕರಾರು ನಡೆಯುತ್ತವೆ. ಆದರೆ ಇನ್ನುಮುಂದೆ ಸರ್ಕಾರದಿಂದ ಕೃಷಿ ಜಮೀನಿಗೆ ಕಾಲುದಾರಿ ನೀಡಲಾಗಿರುತ್ತದೆ. ಹಾಗಾಗಿ ನಿಮ್ಮ ಕೃಷಿ ಭೂಮಿಯ ಸುತ್ತ ಎಲ್ಲಿ ಕಾಲುದಾರಿ ನೀಡಲಾಗಿದೆ ಎಂಬುದನ್ನು ನೀವು ಅಧಿಕೃತವಾಗಿ
ತಿಳಿದುಕೊಳ್ಳಲು ಈ ರೀತಿ ಮಾಡಿ.

https://www.landrecords.karnataka.gov.in/service3/
ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಅಲ್ಲಿ ಪುಟ ತೆಗೆದುಕೊಳ್ಳುತ್ತಿದ್ದಂತೆ ಮೇಲ್ಬಾಗದಲ್ಲಿ ನಿಮ್ಮ ಜಿಲ್ಲೆ (district) ಹೋಬಳಿ ನಕ್ಷೆಯ ಪ್ರಕಾರ ದಾಖಲೆಗಳನ್ನು ಎಂಟ‌ರ್ ಮಾಡಬೇಕು. ನಂತರ ನಿಮ್ಮ ಜಿಲ್ಲಾ ತಾಲೂಕು ಹೋಬಳಿ ಮೊದಲಾದ ಹೆಸರುಗಳನ್ನು ನಮೂದಿಸಬೇಕು. ಹೋಬಳಿ ಅಡಿಯಲ್ಲಿ ಎಲ್ಲಾ ಊರುಗಳ ಹೆಸರುಗಳನ್ನು ತೋರಿಸಲಾಗುತ್ತದೆ, ನೀವು ಅದರ ಮೇಲೆ ಕಿಕ್ ಮಾಡಿದರೆ ಒಂದು ಫೈಲ್ ಡೌನ್ಹೋಡ್ (file download) ಆಗುತ್ತದೆ. ಈಗ ಡೌಪ್ಲೋಡ್ ಆಗಿರುವ ಫೈಲ್ ತೆರೆದು ನೋಡಿದರೆ ಹಳದಿ ಬಣ್ಣದ ಗೆರೆ (yellow line) ಕಾಣಿಸಿದರೆ ಅದು ನಿಮ್ಮ ಜಮೀನಿಗಾಗಿ ಸರ್ಕಾರ ಬಿಟ್ಟಿರುವ ಕಾಲುದಾರಿಯಾಗಿರುತ್ತದೆ. ಈ ನಕ್ಷೆಯ ಮೂಲಕ ನೀವು ಸುಲಭವಾಗಿ ನಿಮ್ಮ ಜಮೀನಿನ ಸುತ್ತ ನಿಮ್ಮ ಜಮೀನಿಗೆ ಹೋಗಲು ಎಲ್ಲಿ ಕಾಲುದಾರಿ ಅಥವಾ ಬಂಡಿದಾರಿ ಇದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಮುಖ್ಯವಾಗಿ ಸರ್ಕಾರ ಈಗಾಗಲೇ ತಿಳಿಸಿರುವಂತೆ ಯಾವುದೇ ರೈತ ತನ್ನ ಜಮೀನಿಗೆ ಹೋಗಲು ಕಾಲುದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ಅದನ್ನು ತಕ್ಷಣವೇ ತಹಶಿಲ್ದಾರರು ಹಾಗೂ ಪೊಲೀಸರಿಗೆ ತಿಳಿಸಿ ಅವರ ಸಹಾಯದಿಂದ ಯಾವುದೇ ತಕರಾರು ಇಲ್ಲದೆ ತಮ್ಮ ಜಮೀನಿಗೆ ಖಾಸಗಿ ಜಮೀನಿನ (Private Property) ಮೂಲಕ ಹೋಗಲು ಕಾಲುದಾರಿ ನಿರ್ಮಿಸಿ ಕೊಳ್ಳಬಹುದಾಗಿದೆ.

ಇದನ್ನು ಓದಿ: Mansoor Ali Khan: ಲಿಯೋದಲ್ಲಿ ರೇಪ್ ಸೀನ್ ಇರಬೇಕಿತ್ತು’ ಎಂದ ಮನ್ಸೂರ್ ಅಲಿ ಖಾನ್: ತಮಿಳು ನಟನ ಹೇಳಿಕೆಗೆ ತ್ರಿಷಾ ಗರಂ!

Leave A Reply

Your email address will not be published.