Home News Miss Universe 2023: ಭುವನ ಸುಂದರಿ ಸ್ಪರ್ಧೆ; ನೇಪಾಳಿ ಸ್ಪರ್ಧಿಯ ಅಂದ-ಚೆಂದಕ್ಕೆ ಮೈಮರೆತ ಜನ !!

Miss Universe 2023: ಭುವನ ಸುಂದರಿ ಸ್ಪರ್ಧೆ; ನೇಪಾಳಿ ಸ್ಪರ್ಧಿಯ ಅಂದ-ಚೆಂದಕ್ಕೆ ಮೈಮರೆತ ಜನ !!

Miss Universe 2023

Hindu neighbor gifts plot of land

Hindu neighbour gifts land to Muslim journalist

Miss Universe 2023: ಸಾಲ್ವಡಾರ್‌ನಲ್ಲಿ ನಡೆಯುತ್ತಿರುವ ಮಿಸ್‌ ಯೂನಿವರ್ಸ್‌ನಲ್ಲಿ ಭುವನ ಸುಂದರಿ 2023( Miss Universe 2023) ಸ್ಪರ್ಧೆಯ ಅಂತಿಮ ಸುತ್ತಿನ ಪ್ರದರ್ಶನ ನಡೆದಿದ್ದು, ಈ ಸ್ಪರ್ಧೆಗಳಲ್ಲಿ 90 ಕ್ಕೂ ಹಚ್ಚು ದೇಶಗಳ ಸ್ಪರ್ಧಿಗಳ ಸುಂದರಿಯರು ಭಾಗಿಯಾಗಿದ್ದರು. ಇದರಲ್ಲಿ ನೆರೆಯ ನೇಪಾಳ(Nepal) ದೇಶದ ಸ್ಪರ್ಧಿಯೊಬ್ಬರು ಗಮನ ಸೆಳೆದಿದ್ದಾರೆ.

ಈ ಬಾರಿಯ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ನೇಪಾಳದ ಸ್ಪರ್ಧಿಯೊಬ್ಬರು ಸುದ್ದಿಯಲ್ಲಿದ್ದಾರೆ. ದಪ್ಪನೆಯ ವ್ಯಕ್ತಿಯೊಬ್ಬರು ಈ ಸ್ಪರ್ಧಿಯೊಬ್ಬರು ಇದೇ ಮೊದಲು ಎನ್ನಲಾಗಿದೆ. ಮೊದಲಿನಿಂದಲೂ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಬಳುಕುವ ಬಳ್ಳಿಯ ಮೈ ಕಟ್ಟು, ಆಕರ್ಷಕ ಕಣ್ಣುಗಳು, ದೇಹ ಪ್ರಕೃತಿಯನ್ನು ಹೊಂದಿರುವ ಸುಂದರಿಯರು ಭಾಗವಹಿಸುವುದು ಮಾಮೂಲಿ. ಈ ಸ್ಪರ್ಧೆಯಲ್ಲಿ ದೈಹಿಕ ಸೌಂದರ್ಯದ ಜೊತೆಗೆ ಅನೇಕ ಅಂಶಗಳಿಗೂ ಒತ್ತು ನೀಡಲಾಗುತ್ತದೆ.

ಆದರೆ ನೇಪಾಳದ ಸ್ಪರ್ಧಿ ಜಾನೆ ದೀಪಿಕಾ ಗರ್ರೇಟ್‌(Jane Dipika Garrett) ಅವರು ತಮ್ಮ ದೇಹದ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಜಾನೆ ದೀಪಿಕಾ ಅವರು ಕೊಂಚ ದಪ್ಪಯಿದ್ದರು ಎನ್ನಲಾಗಿದೆ. ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರುವುದು ಇದೆ ಮೊದಲ ಬಾರಿಯಂತೆ. ಆರಂಭಿಕ ಸುತ್ತಿನ ಸ್ಪರ್ಧೆಗಳಲ್ಲಿ ಬುಧವಾರ ನಡೆದ ಜಾನೆ ದೀಪಿಕಾ ಅವರು ಸಹಜವಾಗಿ ಆತ್ಮ ವಿಶ್ವಾಸದಿಂದ ಕ್ಯಾಟ್‌ ವಾಕ್‌ನಲ್ಲಿ ಭಾಗಿಯಾಗಿದ್ದಾರೆ. ಸ್ವಿಮ್‌ ಸೂಟ್‌ನಲ್ಲಿ ಆಕರ್ಷಕವಾಗಿ ಮಿಂಚಿದ್ದಾರೆ.

ವಿಶ್ವದ ಮಹಿಳೆಯರನ್ನು ಉತ್ತೇಜನ ನೀಡಬೇಕಾಗಿದ್ದು, ಸೌಂದರ್ಯದ ವಿಚಾರದಲ್ಲಿ ಬದಲಾವಣೆ ಆಗಬೇಕು. ಸೌಂದರ್ಯ ಎಂದರೆ ಹೀಗೆ ಎಂದು ಒಂದು ಚೌಕಟ್ಟು ನೀಡುವುದನ್ನು ಪ್ರಶ್ನಿಸಿ ಎಲ್ಲರೂ ಇಂತಹ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗುವಂತಾಗಬೇಕು ಎನ್ನುವ ಉದ್ದೇಶದಿಂದ ತಾನು ಈ ಸ್ಪರ್ಧೆಯಲ್ಲಿ ಭಾಗಿಯಾಗಿರುವುದಾಗಿ ಜಾನೆ ದೀಪಿಕಾ ಗರ್ರೇಟ್‌ ಹೇಳಿಕೊಂಡಿದ್ದಾರೆ.

https://x.com/MissMiss1546642/status/1725347717420126702?s=20

 

ಇದನ್ನು ಓದಿ: Pramod Mutalik: KEA ಪರೀಕ್ಷೆಗಳಲ್ಲಿ ಹಿಜಾಬ್ ಗೆ ಅವಕಾಶ- ಹೈ ಕೋರ್ಟ್ ಆದೇಶ ಉಲ್ಲೇಖಿಸಿ ಮುತಾಲಿಕ್ ಹೇಳಿದ್ದೇನು?!