Home News ಉಡುಪಿ Udupi: ನೇಜಾರು ನಾಲ್ವರ ಹತ್ಯೆ ಪ್ರಕರಣ -ಸುಪಾರಿ ಕಿಲ್ಲರ್‌ನಿಂದ ಕೃತ್ಯ ಶಂಕೆ ?

Udupi: ನೇಜಾರು ನಾಲ್ವರ ಹತ್ಯೆ ಪ್ರಕರಣ -ಸುಪಾರಿ ಕಿಲ್ಲರ್‌ನಿಂದ ಕೃತ್ಯ ಶಂಕೆ ?

Udupi

Hindu neighbor gifts plot of land

Hindu neighbour gifts land to Muslim journalist

Udupi: ನೇಜಾರುವಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ (Udupi murder case)ಸಂಬಂಧಪಟ್ಟಂತೆ, ಹಣಕಾಸಿನ ವ್ಯವಹಾರ ಈ ಕೊಲೆಯ ಹಿಂದೆ ಇದೆಯೇ ? ಇದೊಂದು ವ್ಯವಸ್ಥಿತ ಕೊಲೆಯ ಶಂಕೆ ಮೂಡಿ ಬರುತ್ತಿದೆ. ಕೊಲೆಗಾರ ಸುಪಾರಿ ಕಿಲ್ಲರ್‌ ಆಗಿರಬಹುದೇ? ಹಾಗಾದರೆ ಸುಪಾರಿ ಕೊಟ್ಟವರು ಯಾರು? ಎಂಬ ನಾನಾ ದಿಕ್ಕುಗಳಲ್ಲಿ ತನಿಖೆ ಈಗ ಆರಂಭವಾಗಿದೆ.

ಹತ್ಯೆಯ ಹಿಂದೆ ಹಣಕಾಸು ವ್ಯವಹಾರದ ಅನುಮಾನ ಬಲವಾಗಿ ಕೇಳಿ ಬರುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕೃತ್ಯ ಎಸಗಿ ಪರಾರಿಯಾಗಿರುವುದಕ್ಕೆ ಬೈಕ್‌ನಲ್ಲಿ ಸಂತೆಕಟ್ಟೆಗೆ ಬಂದಿದ್ದ ಹಂತಕ ಅನಂತರ ಆಟೋ ರಿಕ್ಷಾದಲ್ಲಿ ಹೋಗಿದ್ದು, ಈ ಕುರಿತು ಎಲ್ಲಾ ಜಂಕ್ಷನ್‌ನಲ್ಲಿ ಸಿಸಿಟಿವಿ ದೃಶ್ಯ ದೊರಕಿದೆ.

ಹಂತಕ ನೇಜಾರಿನಿಂದ ಸಂತೆಕಟ್ಟೆಗೆ, ಸಂತೆಕಟ್ಟೆಯಿಂದ ಉಡುಪಿಗೆ, ಉಡುಪಿಯಿಂದ ಉದ್ಯಾವರದವರೆಗೆ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡು ಬಂದಿದೆ. ಆಟೋ ರಿಕ್ಷಾ ಮತ್ತು ಬೇರೆ ಬೇರೆ ಬೈಕ್‌ನಲ್ಲಿ ಪ್ರಯಾಣ ಮಾಡಿರುವುದು ಕಂಡು ಬಂದಿದೆ.

ಇದನ್ನೂ ಓದಿ : KEA ಇಂದ 4 ನಿಗಮಗಳಿಗೆ ಹುದ್ದೆಗಳ ಭರ್ತಿ; ಎರಡೆರಡು ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಸೂಚನೆ ಪ್ರಕಟ!