Bagar Hukum Land issue: ದೀಪಾವಳಿಯಂದೇ ‘ಬಗರ್ ಹುಕಂ’ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಡಿಜಿಟಲ್ ಹಕ್ಕು ಪತ್ರ ವಿತರಣೆ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್ !!
Karnataka govt issues digital title deeds to bagar hukum beneficiaries soon
Bagar Hukum Land issue:ರೈತರೇ ಗಮನಿಸಿ,’ಬಗರ್ ಹುಕಂ’ ಫಲಾನುಭವಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ.ಡಿಜಿಟಲ್ ಹಕ್ಕು ಪತ್ರ ವಿತರಣೆ ಕುರಿತು ಸರ್ಕಾರ ಬಿಗ್ ಅಪ್ಡೇಟ್ ನೀಡಿದೆ. ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿರುವ ಹಿನ್ನೆಲೆ, ಅಧಿಕಾರಿಗಳು ಬಗರ್ ಹುಕುಂ(Bagar Hukum Land issue) ತಂತ್ರಾಂಶದ(Bagar HukumApp )ಮೂಲಕ ಕೃಷಿ ಚಟುವಟಿಕೆ ನಡೆಯುತ್ತಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಇಲ್ಲವೇ ಬೇರೆ ಚಟುವಟಿಕೆ ನಡೆಯುತ್ತಿರುವ ಕುರಿತು ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಸ್ವೀಕರಿಸಿ ಅರ್ಜಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದ್ದಾರೆ. ಅನಧಿಕೃತ ಸಾಗುವಳಿಗಳನ್ನು ಸಕ್ರಮಗೊಳಿಸುವ ಕುರಿತು ಸಲ್ಲಿಕೆಯಾಗಿರುವ 9.90 ಲಕ್ಷ ಅರ್ಜಿಗಳು ವಿಲೇವಾರಿಯಾಗಿಲ್ಲ ಎನ್ನಲಾಗಿದೆ.
15 ವರ್ಷಗಳಿಂದ ಸಾಗುವಳಿ ಮಾಡಿರುವುದನ್ನು ಖಾತ್ರಿಯಾದ ಬಳಿಕವೇ ಮಂಜೂರಾತಿ ಆದೇಶ ನೀಡಲಾಗುವ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಬಗರ್ ಹುಕುಂ ಅರ್ಜಿಗಳಲ್ಲಿ ಅರ್ಹ ರೈತರಿಗೆ ಮಾತ್ರವೇ ಮುಂದಿನ ಆರು ತಿಂಗಳೊಳಗೆ ಸಾಗುವಳಿ ಚೀಟಿ ನೀಡಿ ಕೃಷಿ ಜಮೀನುಗಳಿಗೆ ತೆರಳಲು ರಸ್ತೆ ವ್ಯವಸ್ಥೆ ಮಾಡಬೇಕೆಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ರೈತರೇ , ದೀಪಾವಳಿ ದಿನವೇ ಬಂತು ಗುಡ್ ನ್ಯೂಸ್ – ಈ ದಿನವೇ ಖಾತೆಗೆ ಬರುತ್ತೆ 2,000 !! ಮೋದಿಯಿಂದ ಅಧಿಕೃತ ಮಾಹಿತಿ