KMF Recruitment 2023: ಕೆಎಂಎಫ್ ನಲ್ಲಿ ಭರ್ಜರಿ ಉದ್ಯೋಗವಕಾಶ! ಈ ಕೂಡಲೇ ಅರ್ಜಿ ಸಲ್ಲಿಸಿ! ಮಾಸಿಕ ವೇತನ ಲಕ್ಷದವರೆಗೆ!!!

Karnataka government job news KMF recruitment 2023 apply for various post

KMF Recruitment 2023: ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ, ನಿಮಗಿದೋ ಮುಖ್ಯ ಮಾಹಿತಿ ಇಲ್ಲಿದೆ. ಹಾಲು ಉತ್ಪಾದಕರ ಒಕ್ಕೂಟ ವಿವಿಧ ಹುದ್ದೆಗಳಿಗೆ(KMF Recruitment 2023) ಒಟ್ಟು 63 ಹುದ್ದೆಗೆ ಹೊಸ ನೇಮಕಾತಿ ಪ್ರಕ್ರಿಯೆ ನಡೆಸಲಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಹುದ್ದೆಗಳ ಸಂಖ್ಯೆ :63 ಹುದ್ದೆ
ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ ಹೀಗಿದೆ:
* ಉಪ ವ್ಯವಸ್ಥಾಪಕರು: (ಶೇಖರಣೆ)- ಸ್ನಾತಕೋತ್ತರ ಪದವಿ
* ಉಪ ವ್ಯವಸ್ಥಾಪಕರು(ಎಫ್ &ಎಫ್)- (ಎಂಎಸ್ಸಿ) ಕೃಷಿ
*ಉಪ ವ್ಯವಸ್ಥಾಪಕರು(ಮಾರುಕಟ್ಟೆ)- (MBA)(ಮಾರುಕಟ್ಟೆ)
*ಉಪ ವ್ಯವಸ್ಥಾಪಕರು(ವಿತ್ತ)- Mcom/MBA (ಫೈನಾನ್ಸ್)
*ಉಪ ವ್ಯವಸ್ಥಾಪಕರು(ಖರೀದಿ)- (MBA)(ಫೈನಾನ್ಸ್)
*ಸಹಾಯಕ ವ್ಯವಸ್ಥಾಪಕರು- (BVSC/A.H/A.I)
*ಸಹಾಯಕ ವ್ಯವಸ್ಥಾಪಕರು(ಎಫ್ &ಎಫ್)- (ಎ. ಹೆಚ್/ಎ. ಐ)BSC (ಕೃಷಿ)
*ಸಹಾಯಕ ವ್ಯವಸ್ಥಾಪಕರು(ವಿತ್ತ)- (CA/ICWA)
*ಸಹಾಯಕ ವ್ಯವಸ್ಥಾಪಕರು(ಎಂ. ಐ. ಎಸ್)- (BE/ MCA)
*ಸಹಾಯಕ ವ್ಯವಸ್ಥಾಪಕರು(ಆಡಳಿತ)- MBA (HRD)
* ತಾಂತ್ರಿಕ ಅಧಿಕಾರಿ(ಡಿ. ಟಿ)-(B. TECH/D. TECH)
*ತಾಂತ್ರಿಕ ಅಧಿಕಾರಿ(ಕ್ಯೂಸಿ)- MSC
* ಮಾರುಕಟ್ಟೆ ಅಧಿಕಾರಿ- BBM ( ಮಾರುಕಟ್ಟೆ)
*ಲೆಕ್ಕ ಅಧಿಕಾರಿ-(MCOM/ MBA)
* ಸಾರ್ವಜನಿಕ ಸಂಪರ್ಕ ಅಧಿಕಾರಿ- MBA (HR)/LLB
*ಐ. ಎಂ/ ಉಗ್ರಾಣ ಅಧಿಕಾರಿ- Mcom/MBA (ಫೈನಾನ್ಸ್)
*ಸಿಸ್ಟಂ ಅಧಿಕಾರಿ- BE (Computer science)
*ಮಾರುಕಟ್ಟೆ ಅಧೀಕ್ಷಕರು- MBA( ಮಾರುಕಟ್ಟೆ)
* ಖರೀದಿ ಉಗ್ರಾಣ ಅಧೀಕ್ಷಕರು- Mcom/MBA (ಫೈನಾನ್ಸ್)
*ಡೈರಿ ಸೂಪರ್ ವೈಸರ್ ದರ್ಜೆ – 2- BE (Electrical)
*ಕ್ಷೇತ್ರ ಸಹಾಯಕರು- ಪದವಿ
* ಮಾರುಕಟ್ಟೆ ಸಹಾಯಕ ದರ್ಜೆ -2- BBA/BBM ( ಮಾರುಕಟ್ಟೆ)
*ಕೆಮಿಸ್ಟ್ ದರ್ಜೆ -2- BSC
* ಜೂನಿಯರ್ ಸಿಸ್ಟಂ ಆಪರೇಟರ್ – BE (Computer science)/BCA
*ಹಿರಿಯ ಚಾಲಕರು- SSLC (HGB)
* ಜೂನಿಯರ್ ಟೆಕ್ನಿಷಿಯನ್ – ITI
*ಆಡಳಿತ ಸಹಾಯಕ ದರ್ಜೆ 3 – ಯಾವುದೇ ಪದವಿ
*ಲೆಕ್ಕ ಸಹಾಯಕ ದರ್ಜೆ 3 – B.COM
*ಚಾಲಕರು – SSLC (ಚಾಲನಾ ಪರವಾನಗಿ)

ಎಸೆಸೆಲ್ಸಿ, ಐಟಿಐ,ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಖಾಲಿಯಿರುವ ಜಿಲ್ಲಾ ಹಾಲು ಉತ್ಪಾದಕ ಸಹಕಾರಿ ಸಂಘದ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 7- 2023 ಆರಂಭಿಕ ದಿನವಾಗಿದ್ದು, ಅರ್ಜಿ ಸಲ್ಲಿಸಲು 07/12/23 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ. ಬಳ್ಳಾರಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಅರ್ಜಿ ಶುಲ್ಕ :
ಪ.ಜಾತಿ/ಪ.ಪಂ/ಪ್ರ-1/ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ. ಆಗಿದ್ದು, ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1500 ರೂ. ಆಗಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿ ಮಾಡಬಹುದು.

ವಯೋಮಿತಿ:
ಕನಿಷ್ಠ 18 ವರ್ಷ
ಸಾಮಾನ್ಯ ವರ್ಗ ಗರಿಷ್ಠ 35 ವರ್ಷಗಳು
2ಎ, 2ಬಿ, 3ಎ, 3ಬಿ ಗರಿಷ್ಠ 38 ವರ್ಷ
ಪ.ಜಾತಿ/ಪ.ಪಂ/ಪ್ರ~1 ಗರಿಷ್ಠ 40 ವರ್ಷ

ಆಯ್ಕೆ ವಿಧಾನ :
ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿ ಮಾಡಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ. ಬಳ್ಳಾರಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 21, 400ರೂಪಾಯಿ ನಿಂದ 99,600 ವರೆಗೆ ವೇತನ ಸಿಗಲಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನೂ ಓದಿ: KPSC ಉದ್ಯೋಗಾವಕಾಶ – ಈ ಹುದ್ದೆಗಳ ಭರ್ತಿಗೆ ಶ್ರೀಘ್ರದಲ್ಲೇ ಹೊರಡಲಿದೆ ಅಧಿಸೂಚನೆ !!

Leave A Reply

Your email address will not be published.