Home ಕೃಷಿ Heavy Rains: ಅಡಿಕೆ-ಭತ್ತ ಬೆಳೆದ ರೈತರಿಗೆ ಭರ್ಜರಿ ಗುಡ್ ನ್ಯೂಸ್ – ಆದ್ರೆ ಈ ಬೆಳೆ...

Heavy Rains: ಅಡಿಕೆ-ಭತ್ತ ಬೆಳೆದ ರೈತರಿಗೆ ಭರ್ಜರಿ ಗುಡ್ ನ್ಯೂಸ್ – ಆದ್ರೆ ಈ ಬೆಳೆ ಬೆಳೆದವರಿಗೆ ಭಾರೀ ನಿರಾಸೆ !!

Heavy Rains

Hindu neighbor gifts plot of land

Hindu neighbour gifts land to Muslim journalist

Heavy Rains: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗಾವಿ ನಗರ ಸೇರಿ ಅನೇಕ ತಾಲೂಕಿನಲ್ಲಿ ವರುಣ ಅಬ್ಬರ ಮುಂದುವರೆದಿದೆ. ಸದ್ಯ ಅಡಿಕೆ-ಭತ್ತ ಬೆಳೆದ ಕೃಷಿಕರಲ್ಲಿ ಹೊಸ ಭರವಸೆ ಮೂಡಿದೆ. ಆದ್ರೆ ಜೋಳ ಬೆಳೆಗಾರರಲ್ಲಿ ಆತಂಕ ಸೃಷ್ಟಿ ಆಗಿದೆ.

ಹೌದು, ಮಲೆನಾಡಿನಲ್ಲಿ ಮುಂಜಾನೆಯಿಂದಲೇ ಮಳೆ ಸುರಿಯುತ್ತಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆರಾಯ ಎಡಬಿಡದೇ (Heavy Rains) ಸುರಿಯುತ್ತಿದ್ದಾನೆ. ಮಳೆ ಇಲ್ಲದೇ ಬರಗಾಲದ ನಾಡಂತಾಗಿದ್ದ ಮಲೆನಾಡಿಗೆ ಮಳೆ ಭಾಗ್ಯ ಸೃಷ್ಟಿ ಆಗಿದೆ. ಒಟ್ಟಿನಲ್ಲಿ ಅಡಿಕೆ ಹಾಗೂ ಭತ್ತ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಇದೇ ವೇಳೆ ಜೋಳದ ಬೆಳೆ ನಾಶವಾಗುವ ಭಯದಲ್ಲಿ ರೈತರಿದ್ದಾರೆ.

ಇನ್ನು ಕರಾವಳಿ ಜಿಲ್ಲೆಗಳಿಗೂ ಮುಂದಿನ 2 ದಿನ ಬಹುತೇಕ ಕಡೆ ಮಳೆ ಸಾಧ್ಯತೆ ಇದೆ. ಅದಕ್ಕೆ ಕರಾವಳಿಗೆ ಜಿಲ್ಲೆಗಳಿಗೂ ಸಹ ಯೆಲ್ಲೋ ಅಲರ್ಟ್ ಘೋಷಿಸಿಲಾಗಿದೆ. ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಸಹ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣದ ಬಗ್ಗೆ ಅಸಹ್ಯ ಹೇಳಿಕೆ ಕೊಟ್ಟ ನಿತೀಶ್ ಕುಮಾರ್ !! ನಂತರ ಏನ್ಮಾಡಿದ್ರು ಗೊತ್ತಾ ಈ ಬಿಹಾರ ಸಿಎಂ ?!