Bagarhukum: ಬೆಳ್ಳಂಬೆಳಗ್ಗೆಯೇ ರೈತರಿಗೆ ಬಿಗ್ ಗುಡ್ ನ್ಯೂಸ್ – ಇಷ್ಟು ವರ್ಷ ಸಾಗುವಳಿ ಮಾಡಿದ್ರೆ ಸಾಕು, ನಿಮ್ಮ ಭೂಮಿಯಾಗಲಿದೆ ಸಕ್ರಮ !!

Good news for farmers Bagarhukum government Land application latest updates

Bagarhukum: ಸರ್ಕಾರ (Government)ಬಗರ್ ಹುಕುಂ(Bagarhukum)ಯೋಜನೆಯಡಿ ಅರ್ಜಿ ಸಲ್ಲಿಸಿದ ರೈತರು 15 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೆ ಮಾತ್ರ ಉಳುಮೆ ಭೂಮಿ ಸಕ್ರಮ ಮಾಡಲು ನಿರ್ಧರಿಸಿದೆ.

ಬಗರ್ ಹುಕುಂನಲ್ಲಿ ಅನೇಕರು ಬೊಗಸ್ ಅರ್ಜಿ ಸಲ್ಲಿಸಿರುವ ಹಿನ್ನೆಲೆ ಆಪ್ ಮೂಲಕ ನೈಜ ಉಳುಮೆದಾರರನ್ನು ಗುರುತಿಸಿ ಅರ್ಹ ರೈತರ ನೆರವಾಗುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ. ಹೆಚ್ಚಿನ ಮಂದಿ ಐದಾರು ಕಡೆ ಭೂಮಿ ಗುರುತಿಸಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು, ಬೇರೆ ಬೇರೆ ತಾಲೂಕುಗಳಲ್ಲಿ ಕೂಡ ಬಗರ್ ಹುಕುಂಗೆ ಅರ್ಜಿ ಸಲ್ಲಿಸಿದ್ದಾರೆ. ಈ ರೀತಿ ಅಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ.

ಲಕ್ಷಾಂತರ ರೈತರು (Farmers)ಬಗರ್ ಹುಕುಂ ಜಮೀನು(Land)ಸಕ್ರಮಕ್ಕೆ ಕಾಯುತ್ತಿದ್ದು, ಸರ್ಕಾರಿ ಭೂಮಿ(Government Land)ಕೂಡ ಭಾರೀ ಪ್ರಮಾಣದಲ್ಲಿ ಒತ್ತುವರಿಯಾಗುತ್ತಿದೆ. ಇರುವ ಭೂಮಿಯನ್ನು ಉಳಿಸಿಕೊಂಡು ಅರ್ಹ ಬಡ ರೈತರಿಗೆ ಹಕ್ಕು ನೀಡಲು ಬಗರ್ ಹುಕುಂ ಸಕ್ರಮಕ್ಕೆ ಕೆಲವು ಕಠಿಣ ನಿಯಮಗಳನ್ನು ತರಲಾಗುತ್ತಿದೆ. ಬಗರ್ ಹುಕುಂ ಸಮಿತಿಯ ಮುಂದೆ ಇರುವ ಅರ್ಜಿಗಳನ್ನು ಆರು ತಿಂಗಳ ಅವಧಿಯಲ್ಲಿ ವಿಲೇವಾರಿ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ನಿಟ್ಟಿನಲ್ಲಿ ಬಗರ್ ಹುಕುಂ ಸಮಿತಿಗಳ ರಚನೆಗೆ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದ್ದು, ಈಗಾಗಲೇ 50 ತಾಲ್ಲೂಕುಗಳಲ್ಲಿ ಸಮಿತಿ ರಚನೆ ಪ್ರಕ್ರಿಯೆ ಮುಗಿದಿದೆ.

ಈ ನಡುವೆ,15 ವರ್ಷಗಳಿಂದ ಉಳುಮೆ ಮಾಡುತ್ತಿರುವ ಬಗ್ಗೆ ಆಪ್ ಮೂಲಕ ಮಾಹಿತಿ ಕಲೆ ಹಾಕಿ ಪತ್ತೆ ಮಾಡಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುತ್ತದೆ. ಇನ್ನುಳಿದ ಸರ್ಕಾರಿ ಭೂಮಿ ಒತ್ತುವರಿಯಾಗದ ರೀತಿಯಲ್ಲಿ ಬೀಟ್ ವ್ಯವಸ್ಥೆ ಜಾರಿಗೊಳಿಸಲಿದ್ದು, ಕಂದಾಯ ಇಲಾಖೆ ಸಿಬ್ಬಂದಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಭೂಮಿ ಇರುವ ಕಡೆ ಪರಿಶೀಲನೆ ಮಾಡಬೇಕು. ಜಿಯೋ ಫೆನ್ಸಿಂಗ್ ಮಾಡಬೇಕಾಗಿದ್ದು, ಇದರ ಜೊತೆಗೆ ಭೂಮಿಯ ವಿವರಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

 

ಇದನ್ನು ಓದಿ: Heart Attack: ರೋಗಿಗಳನ್ನು ಪರೀಕ್ಷಿಸುತ್ತಿದ್ದ 34 ವರ್ಷದ ವೈದ್ಯ ಹೃದಯಾಘಾತದಿಂದ ಸಾವು !!

Leave A Reply

Your email address will not be published.