Health Tips: ಈ ಐದು ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ!!

Avoid Reheating Food: ಅಡುಗೆ ಮಾಡಿ ಅದನ್ನು ಬಿಸಿಯಾಗಿ ತಿನ್ನಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಅದನ್ನು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ನಂತರ ಆಹಾರವನ್ನು ಬಿಸಿ ಮಾಡಿ ತಿನ್ನುವ ರೂಢಿ ಕೆಲವರು ಇಟ್ಕೊಂಡಿರುತ್ತಾರೆ. ಆದರೆ ಈ ರೀತಿಯಾಗಿ ಆಹಾರ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತಹ ಆಹಾರಗಳು ಯಾವುದು? ಬನ್ನಿ ತಿಳಿಯೋಣ.

ಪಾಲಕ್‌ ಸೊಪ್ಪಿನಿಂದ ಮಾಡಿದ ಆಹಾರ: ಇವುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಬಾರದು. ಇದರಲ್ಲಿ ನೈಟ್ರೇಟ್‌ ಇರುವುದರಿಂದ ನೈಟ್ರೋಸಮೈನ್‌ ಆಗಿ ಪರಿವರ್ತನೆಯಾಗುವುದು. ನೈಟ್ರೋಸಮೈನ್‌ ಒಂದು ಕ್ಯಾನ್ಸರ್‌ ಕಾರಕವಾಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಹೊಟ್ಟೆ, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸಬಹುದು.

ಆಲೂಗಡ್ಡೆಯಿಂದ ಮಾಡಿದ ಆಹಾರ: ಆಲೂಗಡ್ಡೆ ಪಿಷ್ಟವನ್ನು ಹೊಂದಿದೆ. ಹಾಗಾಗಿ ಮತ್ತೆ ಮತ್ತೆ ಬಿಸಿ ಮಾಡಿದಾಗ ಇದು ಒಡೆಯುತ್ತದೆ, ಹಾಗೂ ವಿಷವಾಗಿ ಉತ್ಪಾದನೆಯಾಗುತ್ತದೆ. ಇದರಿಂದ ಹೊಟ್ಟೆನೋವು, ವಾಕರಿಗೆ, ವಾಂತಿ ಬರುವುದಕ್ಕೆ ಕಾರಣವಾಗುತ್ತದೆ.

ಅಕ್ಕಿಯಿಂದ ಮಾಡಿದ ಆಹಾರ: ಅನೇಕರಲ್ಲಿ ಮನೆಗಳಲ್ಲಿ ಮಧ್ಯಾಹ್ನ, ರಾತ್ರಿ ಊಟಕ್ಕೆ ಅನ್ನವನ್ನು ಒಂದೇ ಬಾರಿ ಮಾಡಲಾಗುತ್ತದೆ. ಆದರೆ ಫುಟ್‌ ಸೇಫ್ಟಿ ಏಜೆನ್ಸಿ ಹೇಳಿರುವ ಪ್ರಕಾರ ತಣ್ಣಗಾದ ಅನ್ನವನ್ನು ಮತ್ತೆ ಬಿಸಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ.

ಚಿಕನ್‌ನಿಂದ ಮಾಡಿದ ಆಹಾರ: ಇವುಗಳನ್ನು ಕೂಡಾ ಮತ್ತೆ ಮತ್ತೆ ಬಿಸಿ ಮಾಡುವುದರಿಂ ಪ್ರೋಟೀನ್‌ ಒಡೆದು ವಿಭಿನ್ನ ರೂಪ ಪಡೆಯುತ್ತದೆ. ಬೇಯಿಸಿದ ಚಿಕನ್‌ ಮೈಕ್ರೋವೇವ್‌ನಲ್ಲಿ ಇಟ್ಟರೆ ಬ್ಯಾಕ್ಯೀರಿಯ ಮಾಂಸದಲ್ಲಿ ಹರಡುತ್ತದೆ. ಇದು ಆರೋಗ್ಯಕ್ಕೆ ಹಾನಿಯಾಗುತ್ತದೆ.

ಮೊಟ್ಟೆಗಳಿಂದ ಮಾಡಿದ ಆಹಾರ: ಇವುಗಳನ್ನು ಮತ್ತೆ ಬಿಸಿ ಮಾಡಿದಾಗ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಉತ್ಪಾದನೆ ಮಾಡುತ್ತದೆ. ಇವು ಫುಡ್‌ ಪಾಯಿಸನ್‌ಗೆ ಕಾರಣವಾಗುತ್ತದೆ. ಅತಿಸಾರ, ಹೊಟ್ಟೆ ನೋವು, ಜ್ವರ ಕಾಣಿಸಿಕೊಳ್ಳಬಹುದು ಇದರಿಂದ.

 

ಇದನ್ನು ಓದಿ: Rice Price Hike:ದೀಪಾವಳಿಗೆ ‘ದುಬಾರಿ’ಯ ಗಿಫ್ಟ್ – ಈ ಆಹಾರ ಪದಾರ್ಥಗಳ ಬೆಲೆಯಲ್ಲಿ ಒಮ್ಮೆಲೆ ಏರಿಕೆ !!

Leave A Reply

Your email address will not be published.