Home News Communal Hatredness: ದೇವಾಲಯಕ್ಕೆ ನುಗ್ಗಿ ಶಿವಲಿಂಗದೆದದುರು ಮೂತ್ರ ಮಾಡಿದ ಮುಸ್ಲಿಂ ವ್ಯಕ್ತಿ !!

Communal Hatredness: ದೇವಾಲಯಕ್ಕೆ ನುಗ್ಗಿ ಶಿವಲಿಂಗದೆದದುರು ಮೂತ್ರ ಮಾಡಿದ ಮುಸ್ಲಿಂ ವ್ಯಕ್ತಿ !!

Communal Hatredness

Hindu neighbor gifts plot of land

Hindu neighbour gifts land to Muslim journalist

Communal Hatredness: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮುಸ್ಲಿಂ ಯುವಕನೊಬ್ಬ ದೇವಸ್ಥಾನದೊಳಗೆ ಪ್ರವೇಶಿಸಿ ಶಿವಲಿಂಗದ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ವರದಿಯಾಗಿದೆ.

ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಪೊಲೀಸರು ಕೂಡ ಕೃತ್ಯವೆಸಗಿದ ಯುವಕನನ್ನು ಬಂಧಿಸಿದ್ದು, ಕೃತ್ಯವೆಸಗಿದ ಯುವಕನ್ನು ರತನ್ ಶೇಖ್ ಎಂಬುವವರ ಪುತ್ರ ಅರಾ ಶೇಖ್ ಎಂದು ಗುರುತಿಸಲಾಗಿದೆ. ಮುರ್ಷಿದಾಬಾದ್‌ನ (Murshidabad) ಕಂದರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ತಿಂಗಳು ಅಕ್ಟೋಬರ್ 31 ರಂದು ಘಟನೆ ನಡೆದಿದೆ ಎನ್ನಲಾಗಿದ್ದು, ಸದ್ಯ, ಈ ವೀಡಿಯೋ ವೈರಲ್ (Viral Video) ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯವೆಸಗಿದ ಯುವಕನನ್ನು ಅರಾ ಶೇಕ್ ಎಂದು ಗುರುತಿಸಲಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಈ ಯುವಕ ಗಲಾಟೆ ಮಾಡುವುದು ಕಂಡು ಬಂದಿದೆ. ಇದಾದ ಬಳಿಕ ದೇಗುಲದ ಒಳಗೆ ನುಗ್ಗಿ ಶಿವಲಿಂಗದ (Shivling) ಎದುರು ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಅಸಹ್ಯಕರ ಕೃತ್ಯ ಎಸಗಿದ್ದನ್ನು ಗಮನಿಸಿದವರು ಬೊಬ್ಬೆ ಹಾಕಿ ಈ ರೀತಿ ಕೃತ್ಯ ಎಸಗದಂತೆ ಸೂಚಿಸಿ ತಡೆಯಲು ಪ್ರಯತ್ನಿಸಿದ್ದಾರೆ. ಆದಾಗ್ಯೂ, ಆತ ಮಾತ್ರ ಸುಮ್ಮನಿರದೇ ಪ್ಯಾಂಟ್ ಜಿಪ್ ತೆಗೆದು ದೇವಸ್ಥಾನದೊಳಗೆಯೇ ಮೂತ್ರ ವಿಸರ್ಜನೆ ಮಾಡಿದ ಹೇಯ ಕೃತ್ಯ ವರದಿಯಾಗಿದೆ.

ಸದ್ಯ, ಈ ಕೃತ್ಯ ಎಸಗಿರುವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಲಾರ್ ಪೊಲೀಸ್ ಠಾಣೆ ಪೊಲೀಸರು ಖಾತ್ರಿ ಪಡಿಸಿದ್ದಾರೆ. ಈ ಕೃತ್ಯವೆಸಗಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಕಳೆದ 2017ರಿಂದಲೂ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಇದನ್ನು ಓದಿ: Pratima Murder: ಗಣಿ ಅಧಿಕಾರಿ ಪ್ರತಿಮಾ ಕೊಲೆಗೆ ಅದೆರಡು ಪರ್ಸನಲ್ ಸಂಗತಿ ಕಾರಣ ಆಯ್ತಾ ?, ಸ್ಪೋಟಕ ಮಾಹಿತಿ ಬಹಿರಂಗ !