Aadhar Card: ಆಧಾರ್ ಕಾರ್ಡ್ ತಿದ್ದುಪಡಿ ಕುರಿತು ಬಂತು ಬಿಗ್ ಅಪ್ಡೇಟ್- ಹೆಸರನ್ನು ಎಷ್ಟು ಸಲ ಬದಲಾವಣೆ ಮಾಡ್ಬೋದು ?!

Aadhar Card updates aadhar Card this details can be changed only once details

Aadhar Card: ದೇಶದಲ್ಲಿ ಆಧಾರ್ ಕಾರ್ಡ್ (Aadahr Card)ಅನ್ನು ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಆಧಾರ್ ಕಾರ್ಡ್ (Aadhar Card)ಅನ್ನು ಭಾರತದ ನಾಗರಿಕರಿಗೆ ವಿತರಣೆ ಮಾಡುತ್ತದೆ. ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಹೆಚ್ಚಿನ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯವಶ್ಯಕ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿರುವಂತದ್ದೇ! ಆಧಾರ್ ಕಾರ್ಡ್ ತಿದ್ದುಪಡಿ ಇಲ್ಲವೇ ಹೆಸರನ್ನು ಎಷ್ಟು ಸಲ ಬದಲಾವಣೆ ಮಾಡ್ಬೋದು ಗೊತ್ತಾ?

ನಿಮ್ಮ ಆಧಾರ್ ಕಾರ್ಡ್‌ನಲ್ಲಿ, ನಿಮ್ಮ ಲಿಂಗ ಮತ್ತು ಜನ್ಮದಿನಾಂಕವನ್ನು (DOB)ಒಮ್ಮೆ ಮಾತ್ರ ನೀವು ಮಾರ್ಪಡಿಸಲು ಅವಕಾಶವಿದೆ. ಅದೇ ರೀತಿ, ನಿಮ್ಮ ಹೆಸರನ್ನು(Name Change)2 ಬಾರಿ ಮಾತ್ರ ಬದಲಾಯಿಸಲು ಅವಕಾಶವಿದೆ. ಒಂದು ವೇಳೆ ನೀವು ಮೂರನೇ ಬಾರಿಗೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸಲು ಯೋಚಿಸಿದರೆ, ನೀವು ಹತ್ತಿರದ ಆಧಾರ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಬಹುದು. UIDAI ನ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ನಿಮ್ಮ ಹೆಸರನ್ನು ಅಪ್ಡೇಟ್‌ ಮಾಡಿಸಲು ಅನುಮತಿ ಪಡೆಯಬೇಕಾಗುತ್ತದೆ. ನೀವು ನಿಮ್ಮ ಆಧಾರ್ ವಿಳಾಸವನ್ನು ಬದಲಾಯಿಸಬಹುದು. ಆದರೆ, ಇದಕ್ಕೆ ನೀವು ಗುರುತಿನ ಪುರಾವೆಗಳಾದ ಪಾಸ್‌ಪೋರ್ಟ್, ರೇಷನ್ ಕಾರ್ಡ್ ಅಥವಾ ವಿಳಾಸದ ಇತರ ಪುರಾವೆಗಳನ್ನು ನೀಡಬೇಕು. ಈ ಎಲ್ಲಾ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಕೂಡ ಅಪ್‌ಡೇಟ್‌ ಮಾಡಬಹುದು.

Leave A Reply

Your email address will not be published.