Pension Holders: ಪಿಂಚಣಿದಾರರೇ, ಮಿಸ್ ಮಾಡ್ದೆ ಆನ್ಲೈನ್ ಅಲ್ಲಿ ಈ ದಾಖಲೆ ಸಲ್ಲಿಸಿ !!
Business news attention pension holders submit life certificate document without fail
Life Certificate: ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ p/(Pension Holders)ತುಟ್ಟಿಭತ್ಯೆಯನ್ನು(DA)ಶೇಕಡ 4 ರಷ್ಟು ಏರಿಕೆ ಮಾಡಿದೆ. ಇದರ ಜೊತೆಗೆ ಇತರ ಸರ್ಕಾರಿ ನೌಕರರು ಕೂಡ ನಿಗದಿತ ಸಮಯಕ್ಕೆ ಪಿಂಚಣಿ ಪಡೆಯಲು ವರ್ಷಕ್ಕೊಮ್ಮೆ ತಮ್ಮ ‘ಲೈಫ್ ಸರ್ಟಿಫಿಕೇಟ್ (‘Life Certificate)ನೀಡಬೇಕಾಗುತ್ತದೆ.
ಲೈಫ್ ಸರ್ಟಿಫಿಕೇಟ್ ವಾಸ್ತವವಾಗಿ ಬಯೋಮೆಟ್ರಿಕ್ ಡಿಜಿಟಲ್ ಸೇವೆಯಾಗಿದ್ದು, ಇದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಇತರ ಯಾವುದೇ ಸರ್ಕಾರಿ ಸಂಸ್ಥೆಗಳ ನೌಕರರಿಗೆ ಪಿಂಚಣಿ ಪಡೆಯಲು ಸಹಕರಿಸುತ್ತದೆ. 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರವನ್ನು (Life Certificate)ಸಲ್ಲಿಸಲು ಅಕ್ಟೋಬರ್ 1, 2023 ರಿಂದ ನವೆಂಬರ್ 30, 2023 ರವರೆಗೆ ಗಡುವು ನೀಡಲಾಗಿದೆ.80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ಅಕ್ಟೋಬರ್ 1, 2023 ಮತ್ತು ನವೆಂಬರ್ 30, 2023 ರ ನಡುವೆ ತಮ್ಮ ಜೀವನ್ ಪ್ರಮಾಣ್ ಪತ್ರವನ್ನು ಸಲ್ಲಿಸಬೇಕಾಗುತ್ತದೆ. 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ತಮ್ಮ ಜೀವನ್ ಪ್ರಮಾಣ್ ಪತ್ರವನ್ನು ನವೆಂಬರ್ 1, 2023 ಮತ್ತು ನವೆಂಬರ್ 30, 2023 ರ ನಡುವೆ ಆನ್ಲೈನ್ನಲ್ಲಿ ಸಲ್ಲಿಸಬಹುದು.
ಜೀವನ್ ಪ್ರಮಾನ್ ಪತ್ರವನ್ನು ಆನ್ಲೈನ್ನಲ್ಲಿ ಸಲ್ಲಿಸುವ ವಿಧಾನ ಹೀಗಿದೆ:
ಪಿಂಚಣಿದಾರರು ಜೀವನ್ ಪ್ರಮಾಣ್ ಪತ್ರವನ್ನು ಆನ್ಲೈನ್ನಲ್ಲಿ ವೆಬ್ ಇಲ್ಲವೇ ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಪಡೆಯಬಹುದು. ಜೀವನ್ ಪ್ರಮಾನ್ ಪತ್ರಕ್ಕೆ ಹತ್ತಿರದ ಜೀವನ್ ಪ್ರಮಾನ್ ಪತ್ರ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಸಂಖ್ಯೆ, ಪಿಂಚಣಿ ಪಾವತಿ ಆದೇಶ, ಬ್ಯಾಂಕ್ ಖಾತೆ, ಬ್ಯಾಂಕ್ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಇದಲ್ಲದೆ,ಜೀವನ್ ಪ್ರಮಾನ್ ಪತ್ರಕ್ಕೆ ಕೆಳಕಂಡ ದಾಖಲೆಗಳು ಬೇಕಾಗುತ್ತವೆ.
# ಬಯೋಮೆಟ್ರಿಕ್ಸ್ ಸ್ಕ್ಯಾನ್
# ಪಿಂಚಣಿ ಪಾವತಿ ಆದೇಶ
# ಇಂಟರ್ನೆಟ್ ಸಂಪರ್ಕ
# ಬ್ಯಾಂಕ್ ವಿವರಗಳು
# ಪಿಂಚಣಿ ಮಂಜೂರಾತಿ ಪ್ರಾಧಿಕಾರದ ವಿವರಗಳು
# ಪಿಂಚಣಿ ವಿತರಣಾ ಪ್ರಾಧಿಕಾರದ ವಿವರಗಳು
ಇದನ್ನೂ ಓದಿ: GST On Hostel Rent: ಹಾಸ್ಟೆಲ್ ಹಾಗೂ ಪಿಜಿಯಲ್ಲಿರೋ ಹುಡುಗಿಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ !!