Snake Bite: ಹಾವಿನ ದ್ವೇಷ 12 ವರುಷ ಅಂತಾರೆ, ಕಾಟ ನೀಡಿದ ಯುವಕನ ಪ್ರಾಣ ತೆಗೆಯಿತೇ ನಾಗರಹಾವು?

Snake Bite: ಹಾವಿನ ದ್ವೇಷ (Snake Hatred) ಹನ್ನೆರಡು ವರ್ಷ ಎಂದು ಹೇಳುತ್ತಾರೆ. ಇದು ಸತ್ಯನಾ ಇಲ್ಲವ ಗೊತ್ತಿಲ್ಲ. ಆದರೆ ಇದು ನಿಜ ಎನ್ನುವಂತಹ ಕೆಲವೊಂದು ಘಟನೆಗಳು ನಮಗೆ ಆಗಾಗ್ಗೆ ವರದಿಯಾಗುತ್ತಿರುವುದನ್ನು ಓದಿರಬಹುದು. ಈಗ ಇದಕ್ಕೆ ನಿದರ್ಶನವೆಂಬಂತೆ ಒಂದು ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಹೊಳೆ ನರಸೀಪುರದಲ್ಲಿ. ಹಾವಿಗೆ ಓರ್ವ ಪದೇ ಪದೇ ತೊಂದರೆ ಕೊಟ್ಟು ಅದರ ವೀಡಿಯೋ ಮಾಡಿಕೊಂಡಿದ್ದ. ಇದಾದ ಕೆಲವೇ ದಿನಗಳಲ್ಲಿ ಆತ ಹಾವು ಕಚ್ಚಿ (Snake Bite) ಮೃತಪಟ್ಟಿರುವ ಘಟನೆ ನಡೆದಿದೆ.

 

ಈತ ಹಾವಿನ ದ್ವೇಷಕ್ಕೆ ಸಾವಿಗೀಡಾದನೋ ಎಂಬ ಅನುಮಾನ ಊರಲ್ಲಿ ಚರ್ಚೆಯಾಗುತ್ತಿದೆ. ಹಾವಿಗೆ ತೊಂದರೆ ನೀಡಿದ್ದಕ್ಕೆ ಕೋಪಗೊಂಡ ಹಾವು ಈತನನ್ನು ಕಚ್ಚಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಘಟನೆ ನಡೆದಿದರುವುದು ಅ.29ರ ಸಂಜೆ. ಹಾವು ಕಡಿತಕ್ಕೊಳಗಾದ ಯುವಕ ಅಭಿಲಾಷ್.‌ ಈತ ಹಾವು ಕಚ್ಚಿ ಸಾವಿಗೀಡಾಗಿದ್ದ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈತನ ಮೊಬೈಲ್‌ ಅನ್ನು ಎರಡು ದಿನಗಳ ಬಳಿಕ
ಪರಿಶೀಲನೆ ಮಾಡಿದಾಗ ಅಲ್ಲೊಂದು ವೀಡಿಯೋ ಕಂಡಿದ್ದು, ಇದನ್ನು ಕಂಡು ಎಲ್ಲರೂ ಭಯಗೊಂಡಿದ್ದಾರೆ. ಕಾರಣ ಆ ವೀಡಿಯೋದಲ್ಲಿ ಅಭಿಲಾಷ್‌ ನಾಗರ ಹಾವೊಂದಕ್ಕೆ ಭಾರೀ ಕಾಟ ಕೊಟ್ಟಿರುವುದು ಕಂಡಿದೆ. ಪದೇ ಪದೇ ಈತ ಆ ಹಾವಿಗೆ ಉಪದ್ರ ಕೊಟ್ಟದ್ದಾನೆ. ಅದು ಸಹ ಹೆಡೆ ಎತ್ತಿ ನೆಲಕ್ಕೆ ಕುಕ್ಕಿದೆ.

ತೋಟಕ್ಕೆಂದು ಹೋದ ಅಭಿಲಾಷ್‌ ಗೆ ಅಲ್ಲಿ ಚಿಕ್ಕ ಕಾಲುವೆಯೊಂದರಲ್ಲಿ ನಾಗರ ಹಾವು ಕಾಣಿಸಿದೆ. ಅದು ನೀರಿನಲ್ಲಿ ಹೆಡೆ ಎತ್ತಿ ಕುಳಿತಿತ್ತು. ಇದನ್ನು ನೋಡಿದ ಅಭಿಲಾಷ್‌ ತನ್ನ ಮೊಬೈಲ್‌ ಕ್ಯಾಮೆರಾ ಆನ್‌ ಮಾಡಿದ್ದು, ಒಂದು ಪೈಪ್‌ ತೆಗೆದುಕೊಂಡು ಹಾವಿನತ್ತ ಹೋಗಿದ್ದಾನೆ. ಅಲ್ಲಿ ಹಾವಿನ ಮುಖದ ಹತ್ತಿರ ಪೈಪ್‌ ತೆಗೆದುಕೊಂಡು ಹೋಗಿದ್ದು, ಹಾವು ಆ ಪೈಪ್‌ಗೆ ಕುಕ್ಕಿದೆ. ಈ ರೀತಿ ಕೆಲ ಕಾಲ ಮಾಡಿದ್ದು, ಆ ಮೇಲೆ ಆ ಹಾವು ಅಲ್ಲಿಂದ ಹೋಗಿದೆ. ಇದಾದ ಕೆಲವೇ ದಿನಗಳಲ್ಲಿ ಅಭಿಲಾಷ್‌ ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾನೆ.

ಅದೇ ಹಾವು ಅಭಿಲಾಷೆಗೆ ಕಡಿದಿದೆಯೇ ಎಂಬುವುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಜನ ಮಾತ್ರ ಇದು ಹಾವಿಗೆ ಕಾಟ ಕೊಟ್ಟಿದ್ದೇ, ಅದೇ ಬಂದು ಕಚ್ಚಿರಬಹುದು ಎಂದು ಹೇಳುತ್ತಿದ್ದಾರೆ. ಈ ಪ್ರಕರಣ ಹಳ್ಳಿ ಮೈಸೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ಇದನ್ನು ಓದಿ: Self Harming: ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ!!! ಕಾರಣವೇನು ಗೊತ್ತೇ?

Leave A Reply

Your email address will not be published.