NPS ನಿಯಮದಲ್ಲಿ ಮಹತ್ವದ ಬದಲಾವಣೆ- ಬ್ಯಾಂಕ್ ಖಾತೆ ಮಾಹಿತಿ ಪರಿಶೀಲನೆಗೆ ಬಂತು ನೋಡಿ ಹೊಸ ವಿಧಾನ !!
NPS exit Rule change and bank account withdrawal request updating subscribers latest news
NPS: ರಾಷ್ಟ್ರೀಯ ಪಿಂಚಣಿ ಯೋಜನೆ (NPS ) ನಿರ್ಗಮನ ನಿಯಮದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ಬದಲಾವಣೆ ಮಾಡಿದೆ. ಎನ್ ಪಿಎಸ್ ಖಾತೆಯಿಂದ ವಿತ್ ಡ್ರಾ ಅಥವಾ ನಿರ್ಗಮನವಾಗಲು ಬ್ಯಾಂಕ್ ಖಾತೆ ಮಾಹಿತಿಗಳನ್ನು ಆ ಕ್ಷಣವೇ ಪರಿಶೀಲಿಸುವುದು ಕಡ್ಡಾಯವಾಗಿದೆ.
ವಿತ್ ಡ್ರಾ ಅಥವಾ ಯೋಜನೆಯಿಂದ ನಿರ್ಗಮಿಸುವ ಸಂದರ್ಭ ಎನ್ ಪಿಎಸ್ ಹಣ ಚಂದಾದಾರರ ಬ್ಯಾಂಕ್ ಖಾತೆಗಳಿಗೆ ಸಮಯಕ್ಕೆ ಸರಿಯಾಗಿ ಕ್ರೆಡಿಟ್(Credit)ಆಗುವುದನ್ನು ಖಾತ್ರಿ ಪಡಿಸಲು ಈ ವ್ಯವಸ್ಥೆ ಜಾರಿ ಮಾಡಲಾಗಿದೆ. ಪೆನ್ನಿ ಡ್ರಾಪ್ ವಿಧಾನದ ಮೂಲಕ ಬ್ಯಾಂಕ್ ಖಾತೆ ಪರಿಶೀಲನೆ ಮಾಡಲಾಗುತ್ತದೆ. 2023ರ ಅಕ್ಟೋಬರ್ 25ರ ಪಿಎಫ್ ಆರ್ ಡಿಎ ಸುತ್ತೋಲೆ ಅನುಸಾರ, ನಿರ್ಗಮನ ಅಥವಾ ವಿತ್ ಡ್ರಾ ಮನವಿಗಳಿಗೆ ಹಾಗೂ ಚಂದಾದಾರರ ಬ್ಯಾಂಕ್ ಖಾತೆ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಹೆಸರು ಹೊಂದಾಣಿಕೆ ಜೊತೆಗೆ ಯಶಸ್ವಿ ಪೆನ್ನಿ ಡ್ರಾಪ್ ಪರಿಶೀಲನೆ ಮಾಡುವುದು ಅವಶ್ಯಕವಾಗಿದೆ. ಒಂದು ವೇಳೆ ಸಿಆರ್ ಎ ಪೆನ್ನಿ ಡ್ರಾಫ್ ದೃಢೀಕರಿಸಲು ಆಗದೇ ಹೋದರೆ ಆಗ ನಿರ್ಗಮನ ಅಥವಾ ವಿತ್ ಡ್ರಾ ಅಥವಾ ಚಂದಾದಾರರ ಬ್ಯಾಂಕ್ ಖಾತೆ ಮಾಹಿತಿಗಳ ಮನವಿ ಬದಲಾವಣೆಗೆ ಯಾವುದೇ ಮನವಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
ಎನ್ ಪಿಎಸ್ ನಿರ್ಗಮಿಸಿದ ನಂತರ ವರ್ಷಾಶನ ಪಾವತಿಗಳನ್ನು ತ್ವರಿತ ಹಾಗೂ ಸರಳಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಎನ್ ಪಿಎಸ್ ನಿಯಮಗಳಲ್ಲಿ ಬದಲಾವಣೆ ತಂದಿದೆ. ಇದರ ಅನುಸಾರ, ಎನ್ ಪಿಎಸ್ ಖಾತೆದಾರರು ವಿತ್ ಡ್ರಾ ಮಾಡಲು ನಿರ್ದಿಷ್ಟ ದಾಖಲೆಗಳನ್ನು 2023ರ ಏಪ್ರಿಲ್ 1ರಿಂದ ಅಪ್ ಲೋಡ್ ಮಾಡುವುದು ಕಡ್ಡಾಯವಾಗಿದೆ. ಎನ್ ಪಿಎಸ್ ಖಾತೆದಾರರು ವರ್ಷಾಶನ ಖರೀದಿ ಮಾಡುವ ಪ್ರಕ್ರಿಯೆಯನ್ನು ಪಿಎಫ್ ಆರ್ ಡಿಎಯು ಐಆರ್ ಡಿಎಐ ಸಹಭಾಗಿತ್ವದಲ್ಲಿ ನಡೆಯುತ್ತದೆ.
ಇದನ್ನು ಓದಿ: Carry Bag charge: ಶಾಪಿಂಗ್ ಹೋದಾಗ ಕ್ಯಾರಿ ಬ್ಯಾಗಿಗೂ ಹಣ ಕೊಡ್ತೀರಾ ?! ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ