Carry Bag charge: ಶಾಪಿಂಗ್ ಹೋದಾಗ ಕ್ಯಾರಿ ಬ್ಯಾಗಿಗೂ ಹಣ ಕೊಡ್ತೀರಾ ?! ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ

consumer court shared a opinion on Carry Bag charge

Carry Bag Charge: ಕಳೆದ ತಿಂಗಳು ಖ್ಯಾತ ವಸ್ತ್ರಮಳಿಗೆ ಟ್ರೆಂಡ್ಸ್‌ಗೆ ಖರೀದಿದಾರರಿಗೆ 7 ರೂ. ಮೊತ್ತದ ಕ್ಯಾರಿ ಬ್ಯಾಗ್‌(Carry Bag) ಮಾರಾಟ ಮಾಡಿದ ದೂರಿನ ಮೇರೆಗೆ ಹೊಸದಿಲ್ಲಿಯ ಗ್ರಾಹಕರ ನ್ಯಾಯಾಲಯ 3,000 ರೂ. ದಂಡವನ್ನು ವಿಧಿಸಿದೆ.

ಮತ್ತೊಂದು ಘಟನೆಯಲ್ಲಿ 20 ರೂ.ಕ್ಯಾರಿ ಬ್ಯಾಗ್‌ ಮಾರಾಟ(Carry Bag Charge) ಮಾಡಿದ ಅಂತಾರಾಷ್ಟ್ರೀಯ ಮಟ್ಟದ ಪೀಠೋಪಕರಣ ಮಾರಾಟ ಸಂಸ್ಥೆ ಐಕಿಯಾಗೆ ಬೆಂಗಳೂರಿನ ಗ್ರಾಹಕರ ನ್ಯಾಯಾಲಯ 3,000 ರೂ. ದಂಡ ವಿಧಿಸಿದೆ. ಆದರೆ, ಕ್ಯಾರಿ ಬ್ಯಾಗಿಗೆ ಶುಲ್ಕ ವಿಧಿಸುವ ಹಾವಳಿಗೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ಕಾನೂನು ಪ್ರಕ್ರಿಯೆಗಳು ದೀರ್ಘ ಕಾಲ ನಡೆಯುವ ಹಿನ್ನೆಲೆ ಗ್ರಾಹಕರು ದೂರು ನೀಡುವ ಗೋಜಿಗೆ ಹೋಗಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದರ ಬದಲಿಗೆ ಸುಮ್ಮನೆ ಕ್ಯಾರಿ ಬ್ಯಾಗಿಗೆ ಹಣ ಕೊಟ್ಟು ಸುಮ್ಮನಾಗುತ್ತಿದ್ದಾರೆ.

ಇದರ ಜೊತೆಗೆ ಕ್ಯಾರಿ ಬ್ಯಾಗ್ ವಿಚಾರದ ಕುರಿತಾಗಿ ನಾಲ್ಕು ವರ್ಷಗಳ ಬಳಿಕ ಕೂಡ ಕೆಲ ಪ್ರಕರಣಗಳಿಗೆ ನ್ಯಾಯಾಲಯ ತೀರ್ಪು ನೀಡಿದ್ದು ಕೂಡ ಇದೆ. ಸಂಸ್ಥೆಗಳ ನಿರ್ಲಕ್ಷ್ಯ ಧೋರಣೆಗೆ ಇದು ಕೂಡ ಮುಖ್ಯ ಕಾರಣವೆಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕ್ಯಾರಿ ಬ್ಯಾಗುಗಳಿಗೆ ವ್ಯಾಪಾರಸ್ಥರು ಅಥವಾ ಸಂಸ್ಥೆಗಳು ಶುಲ್ಕ ವಿಧಿಸುವ ಹಾಗಿಲ್ಲ ಎಂದು ಕಾನೂನು ಪರಿಣತರು ಸ್ಪಷ್ಟವಾಗಿ ಹೇಳುತ್ತಾ ಬಂದರು ಕೂಡ ಈ ಧೋರಣೆ ಮಾತ್ರ ನಿರಂತರವಾಗಿ ನಡೆಯುತ್ತಿದೆ.ಗ್ರಾಹಕರು ತಮ್ಮೊಡನೆ ಕ್ಯಾರಿ ಬ್ಯಾಗುಗಳನ್ನು ಒಯ್ಯುವುದೆ ಸುಲಭ ವಿಧಾನವಾಗಿದೆ.

 

ಇದನ್ನು ಓದಿ: PM e- bus: ಉಚಿತ ಬಸ್ಸಲ್ಲಿ ಓಡಾಡೋ ಮಹಿಳೆಯರು, ಪುರುಷರೆಲ್ಲರಿಗೂ ಮಹತ್ವದ ಸುದ್ದಿ- ಕೇಂದ್ರ ಸರ್ಕಾರದಿಂದ ಬಂತು ಭರ್ಜರಿ ನ್ಯೂಸ್ ಗುಡ್

Leave A Reply

Your email address will not be published.