Aadhaar Biometric Lock: ಆಧಾರ್ ಕಾರ್ಡ್ ಬಳಕೆದಾರರು ಕೂಡಲೇ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ- ನಿಮ್ಮ ಬ್ಯಾಂಕಲ್ಲಿರೋ ಹಣವನ್ನು ಸೇಫ್ ಆಗಿ ಇಡಿ !!
Aadhaar Biometric Lock Aadhaar card users download this app immediately and keep your money safe

Aadhaar Biometric Lock: ಈಗಾಗಲೇ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಿಂದ (ಎಇಪಿಎಸ್) ಅನೇಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಹಣಕಾಸು ಸಂಬಂಧಿ ಕಾರ್ಯಗಳಿಗೆ ಆಧಾರ್ ಕಾರ್ಡ್ ಜೊತೆಗೆ ಸಂಬಂಧವಿರುವ ಕಾರಣ ಇದರ ಸುರಕ್ಷತೆ ಅತ್ಯಗತ್ಯ. ಒಂದು ವೇಳೆ ಆಧಾರ್ ಕಾರ್ಡ್ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನೀವು ಹಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ. ಅದಲ್ಲದೆ ಭಾರತದಲ್ಲಿ ಆಧಾರ್ ಕಾರ್ಡ್ ಪ್ರಮುಖ ಗುರುತು ದಾಖಲೆಯಾಗಿದೆ.
ಇತರ ಆನ್ ಲೈನ್ ಹಣಕಾಸು ಸೇವೆಗಳಂತೆ ಎಇಪಿಎಸ್ ನಲ್ಲಿ ಪ್ರತಿ ವಹಿವಾಟಿಗೂ ಒಟಿಪಿ ಅಗತ್ಯವಿಲ್ಲ. ಹಾಗೆಯೇ ಇತರ ವ್ಯವಸ್ಥೆಗಳಂತೆ ಇದು ಬಹು ಹಂತದ ಪರಿಶೀಲನೆ ಪ್ರಕ್ರಿಯೆಗಳನ್ನು ಒಳಗೊಂಡಿಲ್ಲ. ಆಧಾರ್ ಸಂಖ್ಯೆ ಆಧಾರದಲ್ಲಿ ಈ ವಹಿವಾಟು ನಡೆಸಬಹುದು. ಹೀಗಾಗಿ ಆಧಾರ್ ಸಂಖ್ಯೆ ಬಳಸಿ ವಂಚಕರು ಹಲವರ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆಯಿದೆ.
ಈ ವಂಚನೆ ಕುರಿತು ಜ್ಯೋತಿ ರಾಮಲಿಂಗಯ್ಯ ಹಂಚಿಕೊಂಡಿರುವ ಮಾಹಿತಿ ಅನ್ವಯ ಎಇಪಿಎಸ್ ವ್ಯವಸ್ಥೆಯಿಂದ ಅವರು 10,000ರೂ. ಕಳೆದುಕೊಂಡಿದ್ದಾರೆ. ವಹಿವಾಟನ್ನು ನಡೆಸಲು ಅವರ ಆಧಾರ್ ಬಳಸಿರುವ ಬಗ್ಗೆ ಬ್ಯಾಂಕ್ ನಿಂದ ಸಂದೇಶ ಬಂದಿರೋದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ mAadhaar app ಮೂಲಕ ನಿಮ್ಮ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ ಲಾಕ್ (Aadhaar Biometric Lock) ಅಳವಡಿಸೋದು ಸೂಕ್ತ. ಈ ಮೊಬೈಲ್ ಅಪ್ಲಿಕೇಷನ್ ಅನ್ನು ಆಧಾರ್ ಕಾರ್ಡ್ ಅನ್ನು ಭಾರತದ ನಾಗರಿಕರಿಗೆ ವಿತರಿಸುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಒದಗಿಸಿದೆ. ಈ ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ನಿಮ್ಮ ಆಧಾರ್ ಮಾಹಿತಿಗಳಿಗೆ ಹೆಚ್ಚುವರಿ ಸಂರಕ್ಷಣೆ ಒದಗಿಸಬಹುದು. ಅದರಲ್ಲೂ ನಿಮ್ಮ ಬೆರಳಚ್ಚು ಹಾಗೂ ಐರೀಸ್ ಸ್ಕ್ಯಾನ್ ಒಳಗೊಂಡಿರುವ ಬಯೋಮೆಟ್ರಿಕ್ ಮಾಹಿತಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಬಹುದು.
mAadhaar app ಡೌನ್ಲೋಡ್ ಮಾಡುವ ವಿಧಾನ:
ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಿಂದ mAadhaar app ಡೌನ್ಲೋಡ್ ಮಾಡಿ. ಆ ಬಳಿಕ ಅಪ್ಲಿಕೇಷನ್ ಮೇಲ್ಭಾಗದಲ್ಲಿರುವ “Register My Aadhaar” ಮೇಲೆ ಕ್ಲಿಕ್ ಮಾಡಿ. ನಂತರ 4 ಅಂಕೆಗಳ ಪಾಸ್ ವರ್ಡ್ ಅನ್ನು ಸೃಷ್ಟಿಸಿ. ಈಗ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕ್ಯಾಪ್ಚ ನಮೂದಿಸುವಂತೆ ನಿಮ್ಮನ್ನು ಕೋರಲಾಗುತ್ತದೆ. ಬಳಿಕ ನೀವು ಒಟಿಪಿ ಕೋರಬೇಕು. ಇದನ್ನು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಒಟಿಪಿಗಾಗಿ ನೀವು ನಿಮ್ಮ ಮೊಬೈಲ್ ಫೋನ್ ಎಸ್ ಎಂಎಸ್ ಅಪ್ಲಿಕೇಷನ್ ಚೆಕ್ ಮಾಡಬಹುದು. ಒಟಿಪಿ ನಮೂದಿಸಿದ ಬಳಿಕ ನಿಮ್ಮ ಆಧಾರ್ ಖಾತೆ ತೆರೆದುಕೊಳ್ಳುತ್ತದೆ. ಆ ಬಳಿಕ ಸ್ಕ್ರಾಲ್ ಡೌನ್ ಮಾಡಿ ‘Biometrics Lock’ ಮೇಲೆ ಕ್ಲಿಕ್ ಮಾಡಿ. Lock Biometric ಮೇಲೆ ಟ್ಯಾಪ್ ಮಾಡಿ.
ಆ ಬಳಿಕ ನೀವು ಸೆಕ್ಯುರಿಟಿ ಕ್ಯಾಪ್ಚ ಹಾಗೂ ಒಟಿಪಿ ನಮೂದಿಸುವ ಮೂಲಕ ದೃಢೀಕರಿಸಬೇಕು. ಒಮ್ಮೆ ನೀವು ಒಟಿಪಿ ದೃಢೀಕರಿಸಿದ ಬಳಿಕ ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ.
ಇದನ್ನೂ ಓದಿ: ಲಿಪ್ ಲಾಕ್ ಆಗ್ಲೀ, ಬೇರೆ ಏನೇನೋ ಆಗ್ಲೀ, ಏನೇ ಮಾಡೋದಿದ್ರೂ ಇವರೊಂದಿಗೆ ಮಾತ್ರ- ಕಿಸ್ ಬೆಡಗಿಯ ಅಚ್ಚರಿ ಸ್ಟೇಟ್ಮೆಂಟ್!!