HSRP Number Plate: ವಾಹನ ಮಾಲಿಕರಿಗೆ ಬೆಳ್ಳಂಬೆಳಗ್ಗೆಯೇ ಗುಡ್ ನ್ಯೂಸ್ – ನಂಬರ್ ಪ್ಲೇಟ್ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ !!
Vechicle Rules HSRP Number Plate Latest updates news
HSRP Number Plate: ವಾಹನ ಮಾಲೀಕರಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ ನೋಡಿ! 2019ರ ಏಪ್ರಿಲ್ ತಿಂಗಳಿಗಿಂತಲೂ ಮೊದಲು ನೋಂದಾಯಿಸಲಾಗಿರುವ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಗಳ(HSRP Number Plate)ಅಳವಡಿಕೆಯ ಗಡುವು ನವೆಂಬರ್ 17ರಂದು ಮುಗಿಯಲಿದೆ.
ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭದ್ರತೆ ಒಳಗೊಂಡಂತೆ ವಿವಿಧ ಕಾರಣಗಳಿಗಾಗಿ ವಾಹನಗಳ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಸುವುದನ್ನು ಕಡ್ಡಾಯ ಮಾಡಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ಒಮ್ಮೆ ಅಳವಡಿಸಿದ ಬಳಿಕ ತೆಗೆಯಲು ಅದನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಈ ನಡುವೆ, ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಜನರನ್ನು ಉತ್ತೇಜನ ನೀಡಲು ಹೆಚ್ಚಿನ ಪ್ರಚಾರ ನೀಡುವ ಸಂಭವದ ಕುರಿತು ಹಿರಿಯ ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 1, 2019 ಕ್ಕೂ ಮೊದಲು ರಾಜ್ಯದಲ್ಲಿ ಸುಮಾರು 2 ಕೋಟಿ ವಾಹನಗಳು ನೋಂದಣಿಯಾಗಿದ್ದು, ಈ ಬಳಿಕ ನೋಂದಣಿಯಾದ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಿ ಎಚ್ಎಸ್ಆರ್ಪಿ ಪ್ಲೇಟ್ಗಳನ್ನು ಅಳವಡಿಸಲಾಗಿದೆ. ರಾಜ್ಯದಲ್ಲಿ ನೋಂದಣಿಯಾಗಿರುವ 2 ಕೋಟಿ ಹಳೆಯ ವಾಹನಗಳ ಪೈಕಿ ಕೇವಲ 1.75 ಲಕ್ಷ ವಾಹನಗಳಿಗೆ ಮಾತ್ರ ಹೊಸ ನಂಬರ್ ಪ್ಲೇಟ್ ಅಳವಡಿಸಲಾಗಿದ್ದು, ನಂಬರ್ ಪ್ಲೇಟ್ ಅಳವಡಿಕೆಗೆ(Number Plate)ಸಾರ್ವಜನಿಕರು ನಿರಾಸಕ್ತಿ ತೋರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಎಚ್ಎಸ್ಆರ್ಪಿ ಅಳವಡಿಕೆಗೆ ಗಡುವನ್ನು ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಿದೆ.