7th pay commission: 7ನೇ ವೇತನ ಆಯೋಗದ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್ – ಸರ್ಕಾರ ಒಪ್ಪುತ್ತಾ ಈ ಸಲಹೆಗಳನ್ನು ?!

7th pay commission: 7ನೇ ವೇತನ ಆಯೋಗ (7th pay commission) ಕುರಿತು, ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘದ ಪರ ಸುಧಾಕರ್ ರಾವ್ ನೇತೃತ್ವದಲ್ಲಿ , ವೇತನಭತ್ಯೆಗಳ ಏರಿಕೆಗಳ ಬೇಡಿಕೆಗಳ ಜೊತೆಗೆ ಆಡಳಿತ ಸುಧಾರಣೆ ಕುರಿತು ಕೆಲವು ಸಲಹೆಗಳನ್ನು ನೀಡಿದೆ.

ಸಲಹೆಗಳ ಪ್ರಕಾರ, ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಯನ್ನು ಕರ್ನಾಟಕ ಆಡಳಿತ ಸೇವೆಯ ಮಾದರಿಯಲ್ಲಿಯೇ ಗುರುತಿಸಬೇಕು. ಕೇಂದ್ರ ಸಚಿವಾಲಯದಲ್ಲಿ ಹಾಗೂ ನಮ್ಮ ನೆರೆಯ ರಾಜ್ಯಗಳ ಸಚಿವಾಲಯದಲ್ಲಿ ಹಿರಿಯ ಸಹಾಯಕ ಹುದ್ದೆಯ ಪದನಾಮವು ಸಹಾಯಕ ಶಾಖಾಧಿಕಾರಿಯಾಗಿದ್ದಲ್ಲದೇ, ಅದೊಂದು ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯಾಗಿರುತ್ತದೆ. ತತ್ಸಂಬಂಧ ಹಿರಿಯ ಸಹಾಯಕ ಹುದ್ದೆಯ ಪದನಾಮವನ್ನು ‘ಸಹಾಯಕ ಶಾಖಾಧಿಕಾರಿ’ ಎಂದು ಬದಲಾಯಿಸಿ ಕೇಂದ್ರ ಹಾಗೂ ನೆರೆ ರಾಜ್ಯಗಳಂತೆ ಗ್ರೂಪ್ ‘ಬಿ’ ನಾನ್ ಗೆಜೆಟೆಡ್ ಹುದ್ದೆಯನ್ನಾಗಿ ಉನ್ನತೀಕರಿಸುವುದು ಸುಗಮ ಆಡಳಿತಕ್ಕೆ ಅತ್ಯಂತ ಸೂಕ್ತವಾಗಿರುತ್ತದೆ ಎಂದು ತಿಳಿಸಿದೆ.

ಇನ್ನು ಸಚಿವಾಲಯ ಸೇವೆಗೆ ಪ್ರತ್ಯೇಕ ನೇಮಕಾತಿ ಆಗಬೇಕು. ಆರಂಭಿಕ ಹುದ್ದೆಗಳಾದ ಕಿರಿಯ ಸಹಾಯಕ ಮತ್ತು ಸಹಾಯಕ ಹುದ್ದೆಗಳಿಗೆ ಸಚಿವಾಲಯ ಸೇವೆಗೆ ಸೇರ್ಪಡೆಯಾಗುವ ಅಭ್ಯರ್ಥಿಗಳಿಗೆ ವಿಶೇಷ ಪರೀಕ್ಷಾ ಪಠ್ಯಗಳನ್ನು ರೂಪಿಸಬೇಕು. ಅಲ್ಲದೇ ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗಳ ಪದನಾಮವನ್ನು ಕ್ರಮವಾಗಿ ಹಿರಿಯ ಸಚಿವಾಲಯ ಸಹಾಯಕ (Senior Secretariat Assistant) ಮತ್ತು ಕಿರಿಯ ಸಚಿವಾಲಯ ಸಹಾಯಕ (Junior Secretariat Assistant) ಆಗಿ ಬದಲಾಯಿಸಬೇಕು ಎಂದು ಸಲಹೆ ನೀಡಿದೆ.

ಇನ್ನು ಸಚಿವಾಲಯ ಸೇವೆಯು ರಾಜ್ಯ ಸರ್ಕಾರದ ಸೇವೆಗಳಲ್ಲಿಯೇ ಅತ್ಯಂತ ಜವಾಬ್ದಾರಿಯುತ ಹಾಗೂ ಮಹತ್ವಪೂರ್ಣವಾದ ಸೇವೆಯಾಗಿರುವುದರಿಂದ ಸಚಿವಾಲಯ ಸೇವೆಯ ಎಲ್ಲಾ ಕ್ಷೇತ್ರ ಕ್ಕೆ ಪ್ರತ್ಯೇಕ ವೇತನ ಶ್ರೇಣಿಗಳು ನಿಗದಿಯಾಗಬೇಕು. ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆಯು ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸರಿಸಮವೆಂದು ಪರಿಗಣಿಸಿ, ಅಸಿಸ್ಟೆಂಟ್ ಕಮೀಷನ‌ರ್ ವೇತನ ಶ್ರೇಣಿಯನ್ನು ಅಧೀನ ಕಾರ್ಯದರ್ಶಿ ಹುದ್ದೆಗಳಿಗೆ ನೀಡಬೇಕು ಎಂದು ವರದಿಯಲ್ಲಿ ಮನವಿ ಮಾಡಲಾಗಿದೆ.

ಅಧೀನ ಕಾರ್ಯದರ್ಶಿ ವೇತನ ಶ್ರೇಣಿಯನ್ನು ಒಂದು ಹಂತಕ್ಕೆ ಹೆಚ್ಚಿಸಬೇಕು. ಶಾಖಾಧಿಕಾರಿ ಹಾಗೂ ಅದಕ್ಕೂ ಮೇಲ್ಪಟ್ಟ ಅಂದರೆ ಅಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಅಪರ ಕಾರ್ಯದರ್ಶಿ ಹಂತದ ಹುದ್ದೆಗಳಿಗೆ ಗರಿಷ್ಟ 5 ವರ್ಷಗಳಿಗೆ ಸೆಲೆಕ್ಷನ್ ಗ್ರೇಡ್ ಮುಂಬಡ್ತಿ ನೀಡುವಂತಾಗಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

 

ಇದನ್ನು ಓದಿ: Moon: ಚಂದ್ರನನ್ನು ‘ಮಾಮಾ’ ಎನ್ನುತ್ತೀರೆ?! ಆದ್ರೆ ಆತ 446 ಕೋಟಿ ವರ್ಷಗಳ ‘ಹಿರಿಯಜ್ಜ’ ಅನ್ನೋದು ನಿಮಗೆ ಗೊತ್ತೇ ?!

Leave A Reply

Your email address will not be published.