National Saving Recurring Deposit: ಅಂಚೆ ಕಚೇರಿಯಲ್ಲಿ RD ಕಟ್ಟಬೇಕೆ? ಅರ್ಹತೆ ಏನು, ಸಿಗೋ ಬಡ್ಡಿ ಎಷ್ಟು ?ಇಲ್ಲಿದೆ ನೋಡಿ ಡೀಟೇಲ್ಸ್

National Saving Recurring Deposit If you want to pay RD in post office, see these details

National Saving Recurring Deposit: ಅಂಚೆ ಇಲಾಖೆ ಭಾರತ ದೇಶದಾದ್ಯಂತ ಬೃಹತ್ ಜಾಲವನ್ನು ಹೊಂದಿದೆ. ಅಲ್ಲದೇ ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಇದರಲ್ಲಿ ರೆಕ್ಯೂರಿಂಗ್ ಡೆಪಾಸಿಟ್ (RD) ಕೂಡಾ ಒಂದು. ಪೋಸ್ಟ್ ಆಫೀಸ್ ರೆಕ್ಯೂರಿಂಗ್ ಡೆಪಾಸಿಟ್ ಮಧ್ಯಾವಧಿಯ ಉಳಿತಾಯ ಯೋಜನೆಯಾಗಿದ್ದು, ಠೇವಣಿದಾರರು ತಮ್ಮ ಹೂಡಿಕೆಗಳನ್ನು ಕನಿಷ್ಠ 5 ವರ್ಷಗಳವರೆಗೆ ಇರಿಸಬೇಕಾಗುತ್ತದೆ.
ಇದನ್ನು ರಾಷ್ಟ್ರೀಯ ಉಳಿತಾಯ ರೆಕ್ಯೂರಿಂಗ್ ಡೆಪಾಸಿಟ್ (National Saving Recurring Deposit) ಎಂದೂ ಕರೆಯಲಾಗುತ್ತದೆ.

ಐದು ವರ್ಷಗಳ ಅವಧಿಗೆ ಅಥವಾ 60 ಮಾಸಿಕ ಕಂತುಗಳಿರುವ ಈ ಯೋಜನೆಯಲ್ಲಿ ಮಾಸಿಕ ಆಧಾರದ ಮೇಲೆ ನಿಮ್ಮ ಹಣವನ್ನು ಉಳಿಸಲು ಅನುವು ಮಾಡಿಕೊಡುತ್ತದೆ. ಈ ಪೋಸ್ಟ್ ಆಫೀಸ್ ರೆಕ್ಯೂರಿಂಗ್ ಡೆಪಾಸಿಟ್ (PORD) ಯೋಜನೆಯು ನಿರ್ದಿಷ್ಟ ಅವಧಿಗೆ ಮಾಸಿಕ ಆಧಾರದ ಮೇಲೆ ತಮ್ಮ ಹಣವನ್ನು ಉಳಿಸಲು ಬಯಸುವವರಿಗೆ ಉತ್ತಮ ಯೋಜನೆಯಾಗಿದೆ.

ಅಂಚೆ ಕಚೇರಿಯ ಆರ್‌ಡಿ ಖಾತೆಯನ್ನು ಪ್ರಾರಂಭಿಸಲು ಕನಿಷ್ಠ ಠೇವಣಿ ಕಂತು ರೂ. 100 ಆಗಿರುತ್ತದೆ. ಗರಿಷ್ಟ ಠೇವಣಿಗೆ ಯಾವುದೇ ಮಿತಿಯಿಲ್ಲ. ಠೇವಣಿಗಳನ್ನು ನಗದು ಮತ್ತು ಚೆಕ್ ಮೂಲಕ ಮಾಡಬಹುದು ಮತ್ತು ಚೆಕ್ ನೀಡುವ ವೇಳೆ ಠೇವಣಿಗಳ ದಿನಾಂಕವೇ ಕ್ಲಿಯರೆನ್ಸ್ ದಿನಾಂಕವಾಗಿರುತ್ತದೆ. ಗ್ರಾಹಕರು ಪೋಸ್ಟ್ ಆಫೀಸ್ ರೆಕ್ಯೂರಿಂಗ್ ಡೆಪಾಸಿಟ್ ಯೋಜನೆಯಡಿ ನಾಮಿನಿ ಪ್ರಯೋಜನಗಳನ್ನು ಸಹ ಪಡೆಯಬಹುದು.

6 ಅಥವಾ ಅದಕ್ಕಿಂತ ಹೆಚ್ಚಿನ ಆರ್‌ಡಿ ಕಂತುಗಳ ಮುಂಗಡ ಪಾವತಿ ಮಾಡುವುದಾದರೆ ಅದಕ್ಕೆ ರಿಯಾಯಿತಿ ದೊರಕುತ್ತದೆ. ಪೋಸ್ಟ್ ಆಫೀಸ್ ರೆಕ್ಯೂರಿಂಗ್ ಡೆಪಾಸಿಟ್ ಯೋಜನೆಯು ಗ್ರಾಹಕರು ಏಕ ಮತ್ತು ಜಂಟಿ ಖಾತೆಗಳನ್ನು ತೆರೆಯಲು ಅನುಮತಿಸುತ್ತದೆ. ಒಂದು ವೇಳೆ ಮಾಸಿಕ ಕಂತು ತುಂಬಲು ತಪ್ಪಿದ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯು ಪ್ರತಿ ತಿಂಗಳು ಡೀಫಾಲ್ಟ್ ಶುಲ್ಕವನ್ನು ಭರಿಸಬೇಕಾಗುತ್ತದೆ. ರೂ 10 ಮುಖಬೆಲೆಯ ಖಾತೆಗೆ ರೂ. 1 ಡೀಫಾಲ್ಟ್ ಶುಲ್ಕ ವಿಧಿಸಲಾಗುತ್ತದೆ.

ಒಬ್ಬರು 5 ವರ್ಷಗಳವರೆಗೆ ಚಾಲ್ತಿ ಖಾತೆಯನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ, ಅವರು ಮುಕ್ತಾಯದ ಮೊದಲು ಹಣವನ್ನು ಹಿಂಪಡೆಯಬಹುದು. ಅಂದರೆ ಮೂರು ವರ್ಷಗಳ ನಂತರ ಅಕಾಲಿಕವಾಗಿ ಕ್ಲೋಸ್ ಮಾಡಲು ಅನುಮತಿಸಲಾಗಿದೆ. ಹಾಗೂ ಮೂರು ವರ್ಷಗಳ ಅಂತ್ಯದ ನಂತರ ಅಕಾಲಿಕ ಮುಕ್ತಾಯವನ್ನು ಸಹ ಅನುಮತಿಸಲಾಗುತ್ತದೆ.

ಗ್ರಾಹಕನು ಬಯಸಿದಲ್ಲಿ ತನ್ನ ರೆಕ್ಯೂರಿಂಗ್ ಡೆಪಾಸಿಟ್ ಖಾತೆಯಿಂದ ಸಾಲ ಸೌಲಭ್ಯವನ್ನೂ ಪಡೆಯಬಹುದು. 12 ಕಂತುಗಳನ್ನು ಠೇವಣಿ ಮಾಡಿದ ನಂತರ ಖಾತೆಯಲ್ಲಿನ ಬ್ಯಾಲೆನ್ಸ್ ಶೇಕಡಾ 50 ರವರೆಗೆ ಸಾಲ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ. ಆದರೆ ಆ ಬಳಿಕ ಖಾತೆಯನ್ನು 1 ವರ್ಷದವರೆಗೆ ಮುಂದುವರಿಸಬೇಕು.

ಪೋಸ್ಟ್ ಆಫೀಸ್ ರೆಕ್ಯೂರಿಂಗ್ ಡೆಪಾಸಿಟ್ ತೆರೆಯಲು ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕನು ತನ್ನ ಹೆಸರಿನಲ್ಲಿ PORD ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕನಾಗಿದ್ದಾರೆ ಅವರ ಪರವಾಗಿ ಪೋಷಕರು/ಗಾರ್ಡಿಯನ್ಸ್‌ ಜಂಟಿ ಖಾತೆ ತೆರೆಯಬೇಕು.

ಹಣಕಾಸು ಸಚಿವಾಲಯದ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಪೋಸ್ಟ್ ಆಫೀಸ್‌ನಲ್ಲಿ ಆರ್‌ಡಿ ಖಾತೆಯನ್ನು ತೆರೆಯಲು ಆಧಾರ್ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ. ನಿಮಗೆ ಆಧಾರ್ ಸಂಖ್ಯೆಯನ್ನು ನಿಯೋಜಿಸಿರದಿದ್ದರೆ, ನಿಮ್ಮ PORD ಖಾತೆಯನ್ನು ತೆರೆಯಲು ನೀವು ಆಧಾರ್ ಕಾರ್ಡ್ ಅರ್ಜಿಯ enrollment ID ಸಲ್ಲಿಸಬೇಕು.

ಇದನ್ನು ಓದಿ: Dakshina Kannada: ಕಾರ್ಕಳ ನಗರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಶೃತಿನ್ ಶೆಟ್ಟಿ ಶವ ಪತ್ತೆ!!!

Leave A Reply

Your email address will not be published.