Ramayana Movie: ಬಾಲಿವುಡ್ ‘ರಾಮಾಯಣ’ಕ್ಕೆ ಯಶ್ ವಿಲನ್ ?! ಅಬ್ಬಬ್ಬಾ ಈ ಪರಿ ಸಂಭಾವನೆ ಪಡೆಯುತ್ತಿದ್ದಾರಾ ?

Sandalwood Bollywood news ramayana movie update actor Yash charging amount for ramayana movie

Share the Article

Ramayana Movie: ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರು ಹಿಂದಿಯಲ್ಲಿ ‘ರಾಮಾಯಣ’ (Ramayana Movie) ಚಿತ್ರ ಮಾಡುತ್ತಿದ್ದು, ಇದರಲ್ಲಿ ರಾಮನ ಪಾತ್ರಕ್ಕೆ ರಣಬೀರ್ ಕಪೂರ್ , ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶೇಷ ಅಂದರೆ ಸದ್ಯ ‘ಕೆಜಿಎಫ್’ ನಟ ಯಶ್ ಅವರು ಈ ಚಿತ್ರತಂಡಕ್ಕೆ ಕಾಲಿಡುತ್ತಿದ್ದಾರೆ. ಹೌದು, ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲು ಯಶ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ರಾಕಿಂಗ್ ಸ್ಟಾರ್ ಯಶ್ (Yash) ಅವರಿಗೆ ‘ಕೆಜಿಎಫ್ 2’ ಚಿತ್ರದಿಂದ ದೊಡ್ಡ ಮಟ್ಟದ ಯಶಸ್ಸು ದೊರೆತಿದ್ದು, ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾದು ಕೂತಿದ್ದು, ಈಗ ಅವರು ಬಾಲಿವುಡ್​ ‘ರಾಮಾಯಣ’ಕ್ಕೆ ವಿಲನ್ ಆಗುತ್ತಾರೆ ಎನ್ನಲಾಗಿದೆ. ಆದ್ರೆ ಇದಕ್ಕೆ ಅವರು ಪಡೆಯುತ್ತಿರುವ ಸಂಭಾವನೆ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ.

ಈಗಾಗಲೇ ‘ಕೆಜಿಎಫ್’ ಹಿಂದಿ ವರ್ಷನ್ ಥಿಯೇಟರ್​​ನಲ್ಲಿ 44 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ. ಆ ಬಳಿಕ ಅನೇಕರು ಈ ಚಿತ್ರವನ್ನು ಒಟಿಟಿಯಲ್ಲಿ ನೋಡಿ ಕಣ್ತುಂಬಿಕೊಂಡರು. ಈ ಕಾರಣದಿಂದಲೇ ‘ಕೆಜಿಎಫ್ 2’ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಈ ಚಿತ್ರ ಒಟ್ಟು 400+ ಕೋಟಿ ರೂಪಾಯಿ ಬಾಚಿಕೊಂಡಿದೆ. ಇದೀಗ ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಯಶ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಯಶ್ ಪಡೆಯತ್ತಿರುವುದು 100-150 ಕೋಟಿ ರೂಪಾಯಿ ಎನ್ನಲಾಗಿದೆ. ಈ ವಿಚಾರ ಫ್ಯಾನ್ಸ್​ ಅಚ್ಚರಿಗೆ ಕಾರಣ ಆಗಿದೆ.

ಆದ್ರೆ ಯಶ್ ಅವರು ಇಷ್ಟು ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಡುವುದಕ್ಕೂ ಒಂದು ಕಾರಣ ಇದೆ. ರಾವಣನ ಪಾತ್ರ ಮಾಡಬೇಕು ಎಂದರೆ ಸಾಕಷ್ಟು ಸಿದ್ಧತೆ ಬೇಕು. ಅಷ್ಟೇ ಅಲ್ಲದೆ ಈ ಚಿತ್ರ ಮೂರು ಪಾರ್ಟ್ನ್​ನಲ್ಲಿ ರಿಲೀಸ್ ಆಗಲಿದ್ದು, ಹೆಚ್ಚಿನ ಕಾಲ್​ಶೀಟ್ ನೀಡಬೇಕಾಗುತ್ತದೆ. ಈ ಬಿಸಿ ಶೆಡ್ಯೂಲ್ ನಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಂಡರೆ ಯಶ್ ಅವರು ‘ರಾಮಾಯಣ’ ಹಾಗೂ ಬಾಲಿವುಡ್ ಚಿತ್ರವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಾಗುತ್ತದೆ. ಈ ಎಲ್ಲಾ ಕಾರಣಕ್ಕೆ ಯಶ್ ಅವರು ಇಷ್ಟು ದೊಡ್ಡ ಮೊತ್ತದ ಹಣ ಚಾರ್ಜ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:Maruti Jimny Zeta Discount: ಮಾರುತಿ ಸುಜುಕಿಯ ಈ ಕಾರು ಖರೀದಿಗೆ ಭರ್ಜರಿ 1 ಲಕ್ಷದವರೆಗೆ ರಿಯಾಯಿತಿ! ಈ ತಿಂಗಳವರೆಗೆ ಮಾತ್ರ ಅವಕಾಶ!!

Leave A Reply