ಇಡೀ ದಿನ ನಿಮ್ಮ ದೇಹ ಬೆಚ್ಚಗಿರುತ್ತಾ ?! ಹಾಗಿದ್ರೆ ಈ ಸ್ಟೋರಿ ಒಮ್ಮೆ ನೋಡಿ
Lifestyle Health tip Do you know why your body is warm throughout the day here is information
Health Tip: ದೇಹದ ಸಣ್ಣ ಬದಲಾವಣೆಗಳನ್ನೂ ಕೂಡ ಸೂಕ್ಷ್ಮವಾಗಿ ಗಮನಿಸುವುದು ಅವಶ್ಯಕ. ಯಾಕೆಂದರೆ ಕೆಲವೊಮ್ಮೆ ಜ್ವರವಿಲ್ಲದೆ ಇದ್ದರೂ ಕೆಲವರ ದೇಹ ಬೆಚ್ಚಗಿರುವುದನ್ನು ನೀವು ಗಮನಿಸಿರಬಹುದು. ಮೂಲತಃ ವಾತಾವರಣ ಬೆಚ್ಚಗಿದ್ದಾಗ ದೇಹವು ಬೆಚ್ಚಗಾಗುತ್ತದೆ. ಮಹಿಳೆಯರನ್ನು ಹೆಚ್ಚಾಗಿ ಕಾಣುವ ದೇಹದ ಶಾಖದ ಸಮಸ್ಯೆಗೆ ತಪ್ಪು ಆಹಾರ ಪದ್ಧತಿ ಹಾಗೂ ಆರೋಗ್ಯ ಪರಿಸ್ಥಿತಿಗಳು ಕಾರಣವಿರಬಹುದು. ಇದಕ್ಕಾಗಿ ನಿಮಗೆ ಆರೋಗ್ಯ ಸಲಹೆ (Health Tip)ಇಲ್ಲಿ ತಿಳಿಸಲಾಗಿದೆ.
ಹೌದು, ನೀವು ಯಾವಾಗಲೂ ಒತ್ತಡದಿಂದ ಬಳಲುತ್ತಿದ್ದರೆ ಅಥವಾ ಯಾವುದೇ ಔಷಧಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಅದು ದೇಹವನ್ನು ಬೆಚ್ಚಗಿಡುತ್ತದೆ.
ಹೈಪರ್ ಥೈರಾಯಿಡಿಸಂನಿಂದ ಬಳಲುವ ಮಂದಿಯ ದೇಹವು ಬೆಚ್ಚಗಿರುತ್ತದೆ.
ಇದಕ್ಕಾಗಿ ನಿಮ್ಮ ಆಹಾರದಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ. ಎಸಿಯಲ್ಲಿ ಕುಳಿತು ಕೆಲಸ ಮಾಡುವ ಸಂದರ್ಭದಲ್ಲಿ ದೇಹಕ್ಕೆ ಬಾಯಾರಿಕೆ ಆದರೂ ಅದು ಅನುಭವಕ್ಕೆ ಬರುವುದಿಲ್ಲ. ಇದನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ ಹಾಗೂ ತೆರೆದ ಪ್ರದೇಶದಲ್ಲಿ ಗಾಳಿಗೆ ಒಡ್ಡಿಕೊಳ್ಳಿ.
ಇನ್ನು ಪ್ರತಿಕ್ಷಣವೂ ಅತಿಯಾದ ಒತ್ತಡವನ್ನು ಅನುಭವಿಸುವವರ ದೇಹವು ಸದಾಕಾಲ ಬೆಚ್ಚಗಿರುತ್ತದೆ. ಇದು ಹೃದಯ ಬಡಿತದ ಮೇಲು ಪರಿಣಾಮ ಬೀರುತ್ತದೆ. ಇನ್ನು ಅತಿಯಾದ ಮಸಾಲೆಯುಕ್ತ ಆಹಾರವನ್ನು ಸೇವಿಸುವುದು, ಹೆಚ್ಚಿನ ಕೆಫಿನ್ ಸೇವನೆ ಹಾಗೂ ಆಲ್ಕೋಹಾಲ್ ಸೇವನೆಯಿಂದಲೂ ಹೃದಯದ ಬಡಿತ ಹೆಚ್ಚುತ್ತದೆ ಹಾಗೂ ದೇಹ ವಿಪರೀತ ಬೆವರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರೋರೇ ಗಮನಿಸಿ, ನಿಮಗಿನ್ನು ಈ ಕೋರ್ಸ್ ಕಡ್ಡಾಯ