Kitchen Hacks: ಅಯ್ಯೋ ಹೌದಾ… ಬಾತ್ರೂಮ್​ಗಿಂತ ಫ್ರಿಜ್​ನಲ್ಲೇ ಇರೋದಂತೆ ಹೆಚ್ಚು ಬ್ಯಾಕ್ಟೀರಿಯಾ !! ಬಯಲಾಯ್ತು ರೋಚಕ ಸತ್ಯ

Kitchen Hacks: ಆಹಾರವನ್ನು ಫ್ರಿಜ್ನಲ್ಲಿ ಇಡುವುದರಿಂದ ಅವು ಹಾಳಾಗುವುದಿಲ್ಲ ಎಂಬ ಕಾರಣಕ್ಕೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಫ್ರಿಜ್ ಇದ್ದೇ ಇರುತ್ತದೆ. ಫ್ರಿಜ್ ಇದ್ದಮೇಲೆ ತಂಪು ಪಾನೀಯಗಳು, ಹಾಲು, ಕೆಲವು ಹಣ್ಣುಗಳು ಮತ್ತು ಅಗತ್ಯ ಆಹಾರ ಪದಾರ್ಥಗಳನ್ನು ಎಲ್ಲವೂ ತುರುಕಿಸಿ ಬಿಡುತ್ತಾರೆ. ಆದರೆ ರೆಫ್ರಿಜರೇಟಿಂಗ್ನಲ್ಲಿ ಬೇಯಿಸಿದ ಆಹಾರವನ್ನು ಇಟ್ಟು, ಮತ್ತೆ ಅದನ್ನು ಬಿಸಿ ಮಾಡಿ ತಿನ್ನುವುದು ಅನಾರೋಗ್ಯಕರವಾಗಿದೆ. ಆದರೆ ಆಧುನಿಕ ಜಗತ್ತಿನಲ್ಲಿ ಅಡುಗೆ ಮಾಡಲು ಸಮಯವಿಲ್ಲದೇ ಜನರು ಆಹಾರ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಉಳಿದ ಆಹಾರವನ್ನು ಫ್ರಿಜ್ನಲ್ಲಿಡುತ್ತಾರೆ. ಆಹಾರವನ್ನು ಫ್ರಿಜ್ನಲ್ಲಿ ಇಡುವುದರಿಂದ ಅವು ಹಾಳಾಗುವುದಿಲ್ಲ. ಆದರೆ ಫ್ರಿಜ್ ಒಳಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಲೆಕ್ಕವಿಲ್ಲದಷ್ಟು ಸೂಕ್ಷ್ಮಾಣುಗಳು ನುಸುಳುತ್ತವೆ. ಇದರಿಂದ ಫ್ರಿಜ್ ಗಬ್ಬು ವಾಸನೆ ಹೊಡೆಯುತ್ತವೆ.

ಹೌದು, ಕೆಲವು ಟೈಮ್ ಫ್ರಿಜ್ನ ಕೆಲವು ಭಾಗಗಳು ಟಾಯ್ಲೆಟ್ ವಾಸನೆಗಿಂತ ಕೆಟ್ಟದಾಗಿರುತ್ತದೆ. ಇದಕ್ಕೆ ಹಲವಾರು ಕಾರಣಗಳು ಇವೆ. ಅವುಗಳು ಯಾವುದೆಂದು(Kitchen Hacks) ನೋಡೋಣ.

ಫ್ರಿಜ್ನ ಬಾಗಿಲಿನ ಪ್ರದೇಶದಲ್ಲಿ ಹೆಚ್ಚಿನ ಕೊಳಕು ಮತ್ತು ಸೂಕ್ಷ್ಮಾಣುಗಳು ಇರುತ್ತವೆ. ಫ್ರಿಜ್ನ ಬೆಚ್ಚಗಿನ ಭಾಗವೆಂದರೆ ಬಾಗಿಲು. ಬ್ಯಾಕ್ಟೀರಿಯಾ ಬೆಳೆಯಲು ಮತ್ತು ಸಂತಾನೋತ್ಪತ್ತಿ ಮಾಡಲು ಈ ಬೆಚ್ಚಗಿನ ತಾಪಮಾನವು ಸಾಕಾಗುತ್ತದೆ. ಅಷ್ಟೇ ಅಲ್ಲದೇ, ಸೂಕ್ತವಲ್ಲದ ಆಹಾರ ಪದಾರ್ಥಗಳನ್ನು ಬಾಗಿಲಲ್ಲಿ ಇಡುವುದರಿಂದ ರೋಗಾಣುಗಳು ಬೆಳೆಯಲು ಕಾರಣವಾಗಬಹುದು. ಉದಾಹರಣೆಗೆ ಹಾಲನ್ನು ತುಂಬಾ ತಂಪಾದ ಸ್ಥಳದಲ್ಲಿ ಇಡಬೇಕು. ಅದನ್ನು ಬಾಗಿಲಿನಲ್ಲಿ ಇಡಬೇಡಿ.

ಸದ್ಯ ಈ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಮೊದಲು ಫ್ರಿಡ್ಜ್ ಸ್ವಚ್ಛ ಗೊಳಿಸಬೇಕು. ಹೌದು, ನೀವು ಕನಿಷ್ಟ ಮೂರು ತಿಂಗಳಿಗೊಮ್ಮೆ ಫ್ರಿಜ್ ಅನ್ನು ಸ್ವಚ್ಛಗೊಳಿಸಬೇಕು. ಸ್ವಿಚ್ ಆಫ್ ಮಾಡಿ, ಎಲ್ಲಾ ಆಹಾರ ಸಾಮಗ್ರಿ ವಿಲೇವಾರಿ ಮಾಡಿ, ತದನಂತರ ಸಾಬೂನು ನೀರು ಮತ್ತು ಹತ್ತಿ ಬಟ್ಟೆಯಿಂದ ಸ್ವಚ್ಛಗೊಳಿಸಿ. ಆದರೆ ತಪ್ಪಿಯೂ ಅಪಾಯಕಾರಿ ರಾಸಾಯನಿಕಗಳನ್ನು ಬಳಸಬೇಡಿ.

 

ಇದನ್ನು ಓದಿ: Job Fair: ನ.19 ರಂದು ಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳ! ಹೆಚ್ಚಿನ ಮಾಹಿತಿ ಇಲ್ಲಿದೆ!

Leave A Reply

Your email address will not be published.