Constipation Remedies: ಕಾಡುತ್ತಿದೆಯೇ ಮಲಬದ್ಧತೆಯ ಸಮಸ್ಯೆ ?! ಹಾಗಿದ್ರೆ ಇಲ್ಲಿದೆ ನೋಡಿ ನಿವಾರಣಾ ಸೂತ್ರ
Constipation Remedies Here are some tips on how to get rid of the constipation problem
Constipation Remedies: ಇತ್ತೀಚೆಗೆ ಮಲಬದ್ಧತೆ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ಸಾಮಾನ್ಯವಾಗಿ ಮಸಾಲಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸವಾಗಿ ಮಲಬದ್ಧತೆ ಸಮಸ್ಯೆ ಪ್ರಾರಂಭ ಆಗುತ್ತದೆ. ಅದರಲ್ಲೂ ಆಹಾರ ಪದ್ಧತಿಯಲ್ಲಿ ನಾರಿನ ಅಂಶವನ್ನು ಅಳವಡಿಸದೆ, ಕಡಿಮೆ ನೀರಿನ ಪ್ರಮಾಣವನ್ನು ದೇಹಕ್ಕೆ ಸೇರಿಸುತ್ತಾರೆ ಅಂತಹ ಜನರಿಗೆ ಮಲಬದ್ಧತೆ ಸಮಸ್ಯೆ ಹೆಚ್ಚು ಕಾಣಿಸುತ್ತದೆ. ಇದಕ್ಕೆ ಕೇವಲ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಾವು ದೂಷಿಸುವ ಹಾಗಿಲ್ಲ. ನಮ್ಮ ಕರುಳಿನ ಭಾಗದ ಪ್ರಭಾವ ಕೂಡ ಇದರ ಮೇಲೆ ಅಷ್ಟೇ ಇರುತ್ತದೆ. ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ಮಲಬದ್ಧತೆ ಎದುರಾಗಬೇಕಾದರೆ ಇದಕ್ಕೆ ಹಲವಾರು ಅಂಶಗಳು ಕಾರಣವಾಗುತ್ತವೆ.
ಮುಖ್ಯವಾಗಿ ಅರಿಶಿನ, ಬಾಳೆಹಣ್ಣು, ಸೌತೆಕಾಯಿ, ನಾರಿನಂಶವಿರುವ ಸೊಪ್ಪುಗಳು, ಹಣ್ಣುಗಳು, ತರಕಾರಿಗಳನ್ನು ಸೇವಿಸಿದರೆ ಮಲಬದ್ಧತೆ ಕಡಿಮೆಯಾಗುತ್ತದೆ. ಮಲಬದ್ಧತೆ ಬಾರದಂತೆ ತಡೆಯಲು ಸುಲಭ ಉಪಾಯವೆಂದರೆ ಹೆಚ್ಚು ದ್ರವ ಪದಾರ್ಥವನ್ನು ( Constipation Remedies) ಸೇವಿಸುವುದು. ಇದು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.
ಕೆಲವರಿಗೆ ದೇಹದ ಉಷ್ಣಾಂಶ ಹೆಚ್ಚಾದಾಗಲೂ ಮಲಬದ್ಧತೆ ಉಂಟಾಗುತ್ತದೆ. ಆದ್ದರಿಂದ ನಿಮಗೆ ಮಲಬದ್ಧತೆ ಉಂಟಾದರೆ ಮನೆಯಲ್ಲೇ ತಯಾರಿಸಿದ ಈ 5 ಪಾನೀಯಗಳನ್ನು ಸೇವಿಸಬಹುದು. ಇದರಿಂದ ನಿಮ್ಮ ದೇಹದ ಎಲ್ಲಾ ಅನಗತ್ಯ ಜೀವಾಣುಗಳನ್ನು ಹೊರಹಾಕಲು ಮತ್ತು ಒಟ್ಟಾರೆ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬೆರಿ ಬ್ಲಾಸ್ಟ್ ಸ್ಮೂಥಿ:
ಹೆಚ್ಚಿನ ಫೈಬರ್ ಅಂಶದಿಂದ ಮಾಡಿದ ಸ್ಮೂಥಿಗಳು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಮೊಸರು, ಚಿಯಾ ಬೀಜಗಳು ಅಥವಾ ಅಗಸೆ ಬೀಜಗಳು ಮತ್ತು ಬೆರಿಗಳನ್ನು ಒಟ್ಟಿಗೆ ಬೆರೆಸುವುದರ ಮೂಲಕ ಸ್ಮೂಥಿ ತಯಾರಿಸಿ ಕುಡಿಯಿರಿ.
ಲಿಂಬೆ ಜ್ಯೂಸ್:
ಲಿಂಬೆ ಜ್ಯೂಸ್ ಮಲಬದ್ಧತೆ ಸಮಸ್ಯೆಗಳಿಗೆ ಮನೆಯಲ್ಲಿ ತಯಾರಿಸಬಹುದಾದ ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಪಾನೀಯವಾಗಿದೆ. ನಿಂಬೆಯಲ್ಲಿ ವಿಟಮಿನ್ ಸಿ ಅಥವಾ ಸಿಟ್ರಿಕ್ ಆಮ್ಲವಿದೆ. ಇದು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ.
ಅಲೋವೆರಾ ಜ್ಯೂಸ್:
ಅಲೋವೆರಾ ಜ್ಯೂಸ್ ಕರುಳಿನ ಚಲನೆಗೆ ಸಹಾಯ ಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿರುತ್ತದೆ. 1 ಗ್ಲಾಸ್ ಅಲೋವೆರಾ ಜ್ಯೂಸ್ ಕುಡಿದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಪುದೀನ ಮತ್ತು ಶುಂಠಿ ಟೀ:
ಶುಂಠಿ ಮತ್ತು ಪುದೀನಾ ಗಿಡಮೂಲಿಕೆ ಚಹಾಗಳು ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳು, ಅಮೈನೋ ಆಮ್ಲಗಳು, ಕೆಫೀನ್, ಫ್ಲೇವನಾಯ್ಡ್‌ಗಳನ್ನು ಹೊಂದಿದ್ದು, ಇದು ಇತರ ಆರೋಗ್ಯ ಪ್ರಯೋಜನಗಳ ಜೊತೆಗೆ ಮಲಬದ್ಧತೆಗೆ ಸೂಕ್ತ ಪರಿಹಾರ.
ಕಾಫಿ:
ಮಲಬದ್ಧತೆ ನಿವಾರಣೆಗೆ ಒಂದು ಕಪ್ ಕಾಫಿ ಸಾಕು. ಕೆಫೀನ್ ಅಂಶವು ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಅನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಗೆ ಚಿಕಿತ್ಸೆ ನೀಡಲು ದೇಹಕ್ಕೆ ಸಹಾಯ ಮಾಡುತ್ತದೆ.
ತುಪ್ಪ ಹಾಕಿದ ಬಿಸಿ ಹಾಲು:
ಬಿಸಿಹಾಲಿನಲ್ಲಿ ಒಂದೆರಡು ಚಮಚ ತುಪ್ಪ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿ. ಇದು ಮಲಬದ್ಧತೆಗೆ ಬಹಳ ಪರಿಣಾಮಕಾರಿ ಮನೆಮದ್ದು.
ಇದರ ಹೊರತು ಮುಖ್ಯವಾಗಿ ಕರುಳಿನ ಭಾಗದಲ್ಲಿ ಮಲ ಹೆಚ್ಚು ಗಟ್ಟಿಯಾಗಿ ಹೊರಬರಲು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಹೆಚ್ಚಿಗೆ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಆದಷ್ಟು ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಪ್ರತಿಬಾರಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.