Home Breaking Entertainment News Kannada Mangalore: ನಟಿ ರಾಧಿಕಾ ಕುಮಾರಸ್ವಾಮಿ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆ ನಿಗೂಢ ನಾಪತ್ತೆ !!

Mangalore: ನಟಿ ರಾಧಿಕಾ ಕುಮಾರಸ್ವಾಮಿ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆ ನಿಗೂಢ ನಾಪತ್ತೆ !!

Sandalwood Actress Radhika

Hindu neighbor gifts plot of land

Hindu neighbour gifts land to Muslim journalist

Mangaluru: ಮಂಗಳೂರು (Mangaluru) ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಬಳಿ ಇರುವ, ಸ್ಯಾಂಡಲ್​ವುಡ್​ ನಟಿ ರಾಧಿಕಾ (Sandalwood Actress Radhika)ಅವರ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವರು (women) ಕಳೆದ ಒಂದು ವಾರದಿಂದ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಮೂಲತಃ ಉತ್ತರಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (33) ಅವರು, ನಟಿ ರಾಧಿಕಾ ಅವರಿಗೆ ಸೇರಿದ ಮಂಗಳೂರು (Mangaluru) ಜಿಲ್ಲೆಯ ಬಂಟ್ವಾಳ ತಾಲೂಕಿ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿರುವ ಎಸ್ಟೇಟ್‌ನಲ್ಲಿ ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ನಾಗರತ್ನ ಅವರ ಪತಿ ಮಹಾದೇವ ಮಾರಿಪಟಗಾರ್ ಅವರ ಜೊತೆಯಲ್ಲಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಅಕ್ಟೋಬರ್ 13ರಂದು ನಾಗರತ್ನ ಏಕಾಏಕಿ ಎಸ್ಟೇಟ್​ನಿಂದ ಕಾಣೆಯಾಗಿದ್ದಾರೆ.

ಅಕ್ಟೋಬರ್ 13 ರಂದು ಗಂಡ ಮಹಾದೇವ, ಮತ್ತು ಹೆಂಡತಿ ನಾಗರತ್ನ ಎಸ್ಟೇಟ್ ನಲ್ಲಿ ಕೆಲಸಕ್ಕೆ ಹೋಗಿದ್ದರು. ಆ ದಿನ ಬೆಳಿಗ್ಗೆ 10.30ರ ವೇಳೆಗೆ ಎಸ್ಟೇಟ್ ನಲ್ಲಿರುವ ಮನೆಗೆ ಚಾ ಕುಡಿಯಲು ಹೋಗಿ ಬರುತ್ತೇನೆ ‌ಎಂದು ಹೋದವಳು ಮತ್ತೆ ಕೆಲಸದ ಕಡೆ ಬಂದಿಲ್ಲ. ಇನ್ನು ಮನೆಯಿಂದ ನಾಪತ್ತೆಯಾಗಿದ್ದ ನಾಗರತ್ನ ಮರು ದಿನ ಅಂದರೆ ಅಕ್ಟೋಬರ್ 14 ರಂದು ಪತಿ ಮಹದೇವಗೆ ಕರೆ ಮಾಡಿ, ನನ್ನನ್ನು ಹುಡುಕುವ ಪ್ರಯತ್ನ ಬೇಡ, ಮತ್ತು ಅದರ ಅಗತ್ಯವಿಲ್ಲ. ನಾನು ದೂರ ಹೋಗುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್ಟಿ ಮಾಡಿದ್ದಾರೆ. ಬಳಿಕ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.

ನಾಗರತ್ನ ಮನೆಯಿಂದ ಬಟ್ಟೆ, ಆಧಾರ್ ಕಾರ್ಡ್, ಚಿನ್ನ, ನಗದನ್ನು ತೆಗೆದುಕೊಂಡು ಹೋಗಿದ್ದು ಅಲ್ಲದೇ, ಕೆಲ ತಿಂಗಳಿಂದ ಪತಿ ಮಹದೇವ ಜತೆ ಸಂಬಂಧ ಹೊಂದಿರಲಿಲ್ಲ, ಧರ್ಮಸ್ಥಳ ಮತ್ತು ಮಂಗಳೂರಿನಲ್ಲಿ ತಿರುಗಾಡುತ್ತಿದ್ದರು. ಹಾಗಾಗಿ ಅವಳು ದರ್ಶನಕ್ಕೆ ಹೋಗಿದ್ದಾಳೆ ಎಂದು ಮಹಾದೇವ ಭಾವಿಸಿದ. ಅಕ್ಟೋಬರ್ 14 ರಂದು ಮಹದೇವಗೆ ಕರೆ ಮಾಡಿದ ನಂತರ ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದ್ದು, ಚಹಾ ಕುಡಿಯಲು ಹೋದವಳು ಯಾಕೆ ಬಂದಿಲ್ಲ ಎಂದು ‌ಮನೆ ಕಡೆ ಹೋಗಿ‌ ನೋಡಿದಾಗ ಆಕೆ ಮನೆಯಲ್ಲಿರದೆ ಕಾಣೆಯಾಗಿದ್ದಳು ಎಂದು ಪೊಲೀಸರಿಗೆ ಆಕೆಯ ಪತಿ ದೂರು ನೀಡಿದ್ದಾರೆ. ಸದ್ಯ ಪೊಲೀಸ್ ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ: ‘ಆಧಾರ್ ‘ ರೀತಿಯಲ್ಲೇ ಬಂತು ‘ಅಪಾರ್’- ಇವರಿಗೆ ಇಷ್ಟೆಲ್ಲಾ ಲಾಭ ತರಲಿದೆ ಈ ಕಾರ್ಡ್!!