Fresh Fish: ಮೀನು ಫ್ರೆಶ್ ಇದ್ಯೋ, ಇಲ್ವೋ ಎಂದು ಕೊಳ್ಳುವ ಮುನ್ನ ಹೀಗೆ ಚೆಕ್ ಮಾಡಿ !!
Lifestyle health news here are tips to find out freshness fish in kannada
Fresh Fish: ಮೀನು ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೀನುಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಸತು, ಅಯೋಡಿನ್, ಮೆಗ್ನೀಶಿಯಂ, ಪೊಟ್ಯಾಶಿಯಂ, ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣಾಂಶ ದೊರೆಯುತ್ತದೆ. ಮೀನು ಆರೋಗ್ಯಕ್ಕೆ ಒಳ್ಳೆಯದು, ಹಾಗಂತ ಅದೇ ಕೆಮಿಕಲ್ ಹಾಕಿರುವ ಮೀನು ತಿಂದರೆ ಕ್ಯಾನ್ಸರ್‌ನಂಥ ಮಾರಕ ರೋಗ ಬರುತ್ತದೆ ಅನ್ನೋದು ಎಚ್ಚರ ಇರಲಿ.
ಆದರೆ ಹಸಿ ಮೀನುಗಳನ್ನು ಐಸ್ ಗಡ್ಡೆಯಲ್ಲಿ ಹಾಕಿರುವ ಕಾರಣ ಅದು ಸರಿಯಾಗಿದೆಯಾ(Fresh Fish) ಅಥವಾ ಹಾಳಾಗಿದೆಯಾ ಎಂಬುದನ್ನು ಪತ್ತೆ ಹಚ್ಚಲು ಅನೇಕರಿಗೆ ಸಾಧ್ಯವಾಗುದಿಲ್ಲ. ಹೌದು, ಮೀನು ಪ್ರಿಯರಿಗೆ ಮೀನು ಕೊಳ್ಳುವಾಗ ಎದುರಾಗುವ ದೊಡ್ಡ ಸಮಸ್ಯೆಯೆಂದರೆ ಆ ಮೀನು ಫ್ರೆಶ್ ಆಗಿದೆಯೇ ಎಂದು ತಿಳಿಯದೆ ಇರುವುದು. ಕೆಲವು ಮೀನು ಕೊಳ್ಳುವಾಗ ಫ್ರೆಷ್ ಅಂತ ಅನಿಸುವುದು, ಆದರೆ ಮನೆಗೆ ತಂದ ಮೇಲೆ ಅದು ಫ್ರೆಶ್ ಅಲ್ಲ ಎಂದು ತಿಳಿಯುವುದು. ಈ ಸಮಸ್ಯೆಗೆ ನೀವು ಮೀನು ಮಾರುಕಟ್ಟೆಗೆ ಹೋದಾಗ ಕೆಲವೊಂದು ಅಂಶ ಗಮನಿಸಿದರೆ ಸಾಕು ನಿಮಗೆ ನೀವು ಖರೀದಿಸುವ ಮೀನು ಫ್ರೆಶ್ ಆಗಿದೆಯೇ, ಇಲ್ಲವೇ ಎಂದು ತಿಳಿಯುತ್ತದೆ. ಆ ಟಿಪ್ಸ್ ಇಲ್ಲಿ ತಿಳಿಯಿರಿ.
ಮೀನಿನ ಕಿವಿರು ಪರೀಕ್ಷಿಸಿ:
ಅದರ ಗಿಲ್ಸ್ ಅಥವಾ ಕಿವಿರು ಅದು ಕೆಂಪಾಗಿದ್ದರೆ ಫ್ರೆಶ್ ಕಂದು ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದು ಹಳೆಯ ಮೀನಿನ ಗುಣ ಆಗಿದೆ.
ಮೀನನ್ನು ಮುಟ್ಟಿ ನೋಡಿ:
ನೀವು ಮೀನನ್ನು ನಿಮ್ಮ ಬೆರಳಿನಿಂದ ಒತ್ತಿ, ನೀವು ಒತ್ತಿದ ಭಾಗ ಗುಂಡಿ ರೀತಿಯಾಗಿ ಮತ್ತೆ ಸರಿಯಾದರೆ ಆ ಮೀನು ತುಂಬಾ ಹಳೆಯದಲ್ಲ ಎಂದು ಹೇಳಬಹುದು, ಇಲ್ಲಾ ನೀವು ಒತ್ತಿದ ಭಾಗದಲ್ಲಿ ಗುಂಡಿ ಹಾಗೆಯೇ ಇದ್ದರೆ ಅದು ಫ್ರೆಶ್ ಅಲ್ಲ ಎಂದರ್ಥ.
ಮೀನನ್ನು ಮೂಸಿ ನೋಡಿ:
ಮೀನು ಫ್ರೆಶ್ ಇದ್ದಾಗ ಅದಕ್ಕೆ ವಾಸನೆ ಇರಲ್ಲ ಅಂದಲ್ಲ, ತಾಜಾ ಮೀನಿನ ವಾಸನೆ ನಿಮಗೆ ಅಷ್ಟೊಂದು ದುರ್ವಾಸನೆ ಬೀರುವುದಿಲ್ಲ, ಅದೇ ಮೀನು ಹಿಡಿದು ತುಂಬಾ ಸಮಯ ಆಗಿದ್ದರೆ ಅದರ ಒಳಭಾಗ ಕೊಳೆಯಲಾರಂಭಿಸಿ ತುಂಬಾನೇ ದುರ್ವಾಸನೆ ಬೀರುವುದು.
ಮೀನಿನ ಕಣ್ಣು ನೋಡಿ ತಿಳಿಯಬಹುದು:
ಮೀನಿನ ಕಣ್ಣು ನೋಡಿ ಆ ಮೀನು ಫ್ರೆಶ್ ಆಗಿ ಇದೆಯೇ, ಇಲ್ಲವೇ ಎಂದು ತಿಳಿಯಬಹುದು. ಮೀನು ತಾಜಾವಾಗಿಲ್ಲ ಎಂದಾದರೆ ಅದರ ಕಣ್ಣು ಕ್ಲಿಯರ್ ಆಗಿ ಇರಲ್ಲ, ತಾಜಾ ಮೀನು ಆಗಿದ್ದರೆ ಕಣ್ಣು ತುಂಬಾ ಕ್ಲಿಯರ್ ಆಗಿರುತ್ತದೆ.
ಇತರ ಲಕ್ಷಣಗಳು:
ಮೀನಿನ ತ್ವಚೆಯಲ್ಲಿ ಬದಲಾವಣೆ ಅಥವಾ ಅದರ ತುದಿ ಹಳದಿ ಬಣ್ಣಕ್ಕೆ ತಿರುಗುವುದು, ಮುಟ್ಟಿದಾಗ ತುಂಬಾ ಮೆತ್ತಗೆ ಇದ್ದರೆ ಅದು ತಾಜಾ ಮೀನು ಅಲ್ಲ ಎಂದರ್ಥ.
ಇದೆಲ್ಲದರ ಹೊರತು rapid detection kit ನಲ್ಲಿ ಮೀನು ತಾಜಾವಾಗಿದೆಯೇ, ಇಲ್ಲವೇ ಎಂದು ತಿಳಿಯಬಹುದು. ಇದನ್ನು ಬಳಸಿ ಮೀನಿಗೆ ಅಮೋನಿಯಾ , ಫಾರ್ಮಾಲೀಹೈಡ್ ಬಳಸಿದ್ದಾರೆಯೇ ಎಂದು ತಿಳಿಯಬಹುದು. ನೀವು ಸ್ಟ್ರಿಪ್ ತೆಗೆದು ಅದರ ಕಿವಿರು ಬಳಿ ಉಜ್ಜಿ ಅವರು ನೀಡಿರುವ ಸಲ್ಯೂಷನ್ ಒಂದು ಹನಿ ಹಾಕಿದರೆ ಅದು ನೀಲಿ ಬಣ್ಣಕ್ಕೆ ತಿರುಗಿದರೆ ಆ ಮೀನಿಗೆ ಕೆಮಿಕಲ್ ಬಳಸಿದ್ದಾರೆ ಎಂದರ್ಥ.
ಇದನ್ನೂ ಓದಿ: ಕೇವಲ 14,000ಕ್ಕೆ ಸಿಗ್ತಿದೆ ಈ ಹೈ ಫೈ ಲ್ಯಾಪ್ ಟಾಪ್- ಆಫರ್ ಇರೋದು ಇಲ್ಲಿವರೆಗೂ ಮಾತ್ರ !! ಮುಗಿಬಿದ್ದ ವಿದ್ಯಾರ್ಥಿಗಳು